ಕಮಿಷನ್‌ ಭ್ರಷ್ಟಾಚಾರ ತನಿಖೆಗೆ ಸಮಿತಿ ರಚಿಸಿ: ಸಿಎಂಗೆ ಕೆಂಪಣ್ಣ ಸವಾಲ್‌

By Girish GoudarFirst Published Jan 19, 2023, 3:18 AM IST
Highlights

ದಾಖಲೆಯಿಲ್ಲದೆ ಹೋರಾಟ ಮಾಡುತ್ತಿದ್ದಿರಿ ಹಲವರು ದೂಷಿಸುತ್ತಿದ್ದ ಕಾರಣ ಶಾಸಕ ತಿಪ್ಪಾರೆಡ್ಡಿ ದಾಖಲೆ ಬಿಡುಗಡೆ ಮಾಡಿದ್ದೇವೆ. ಗುತ್ತಿಗೆದಾರರು ಎಂದರೆ ದುಡ್ಡು ಹೊಡೆಯುವವರು ಎಂಬ ಭಾವನೆ ಇದೆ. ಶೇ.40 ಲಂಚ ಕೊಟ್ಟು ನಾವು ಹೇಗೆ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯ: ಕೆಂಪಣ್ಣ

ಬೆಂಗಳೂರು(ಜ.19): ಗುತ್ತಿಗೆ ಕಾಮಗಾರಿ ಕಮಿಷನ್‌ ಆರೋಪ ಕುರಿತಂತೆ ಮುಖ್ಯಮಂತ್ರಿಗಳಿಗೆ ತಾಕತ್ತಿದ್ದರೆ ಸಮಿತಿ ರಚಿಸಿ ತನಿಖೆ ಮಾಡಲಿ ಎಂದು ಸವಾಲು ಹಾಕಿರುವ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಕಮಿಷನ್‌ನಲ್ಲಿ ಯಾರಾರ‍ಯರ ಪಾಲಿದೆ ಎಂಬ ದಾಖಲೆಗಳನ್ನು ವಕೀಲರ ಮೂಲಕ ಗುರುವಾರ ಕೋರ್ಟ್‌ಗೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಕರ್ನಾಟಕ ಸ್ಟೇಟ್‌ ಕಂಟ್ರಾಕ್ಟರ್ಸ್‌ ಅಸೋಸಿಯೇಶನ್‌ ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುತ್ತಿಗೆದಾರರಿಗೆ ಬರಬೇಕಾದ 25 ಸಾವಿರ ಕೋಟಿ ರು. ಬಾಕಿ ಬಿಡುಗಡೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಕರಣ ಕೋರ್ಟ್‌ ಮೆಟ್ಟಿಲೇರಿರುವ ಕಾರಣ ಈಗ ಹೆಸರು ಹೇಳಿದರೆ ನ್ಯಾಯಾಂಗದ ಉಲ್ಲಂಘನೆಯಾಗುತ್ತದೆ. ವಕೀಲರ ಸಲಹೆ ಮೇರೆಗೆ ಸಾರ್ವಜನಿಕವಾಗಿ ಭ್ರಷ್ಟಾಚಾರಿಗಳ ಹೆಸರನ್ನು ಹೇಳುವುದಿಲ್ಲ ಎಂದರು.

ಸಚಿವ ಮುನಿರತ್ನ ಆಸ್ತಿ ಮೂಲಕ್ಕೆ ಕೈ ಹಾಕಿದ ಕೆಂಪಣ್ಣ: ಮುಂದುವರೆದ ಜಟಾಪಟಿ

ದಾಖಲೆಯಿಲ್ಲದೆ ಹೋರಾಟ ಮಾಡುತ್ತಿದ್ದಿರಿ ಹಲವರು ದೂಷಿಸುತ್ತಿದ್ದ ಕಾರಣ ಶಾಸಕ ತಿಪ್ಪಾರೆಡ್ಡಿ ದಾಖಲೆ ಬಿಡುಗಡೆ ಮಾಡಿದ್ದೇವೆ. ಗುತ್ತಿಗೆದಾರರು ಎಂದರೆ ದುಡ್ಡು ಹೊಡೆಯುವವರು ಎಂಬ ಭಾವನೆ ಇದೆ. ಶೇ.40 ಲಂಚ ಕೊಟ್ಟು ನಾವು ಹೇಗೆ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯ. ಇಂದೇ ತನಿಖೆ ನಡೆಸಿದರೂ ಕಾಮಗಾರಿಗಳನ್ನು ಒಂದೋ ಶಾಸಕರ ಕಡೆಯವರು ಅಥವಾ ಎಂಜಿನಿಯರ್‌ಗಳ ಕಡೆಯವರು, ಅರ್ಹತೆ ಇಲ್ಲದವರು ನಡೆಸುತ್ತಿರುವ ವಿಚಾರ ಬೆಳಕಿಗೆ ಬರುತ್ತದೆ ಎಂದು ಆರೋಪಿಸಿದರು.

ವಿವಿಧ ಇಲಾಖೆಗಳ ಗುತ್ತಿಗೆದಾರರ ಸಂಘದ ಸಾವಿರಾರು ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಾಕಿ ಪಾವತಿಗೆ ಮಾರ್ಚ್‌ ಗಡುವು

ಲೋಕೋಪಯೋಗಿ ಇಲಾಖೆಯ 4ಸಾವಿರ ಕೋಟಿ, ನೀರಾವರಿ ಇಲಾಖೆಯ 8ಸಾವಿರ ಕೋಟಿ, ಬಿಬಿಎಂಪಿಯ 3 ಸಾವಿರ ಕೋಟಿ ರು. ಸೇರಿ ಗುತ್ತಿಗೆದಾರರಿಗೆ ಮೂರು ವರ್ಷದಿಂದ . 25ಸಾವಿರ ಕೋಟಿ ಪಾವತಿ ಆಗಬೇಕು. ಮಾರ್ಚ್‌ 31ರೊಳಗೆ ಬೇಡಿಕೆ ಈಡೇರಿಸದಿದ್ದರೆ ಎಲ್ಲ ಕಾಮಗಾರಿ ಸ್ಥಗಿತಗೊಳಿಸಿ ಹೋರಾಟ ಮಾಡುವುದಾಗಿ ಗುತ್ತಿಗೆದಾರರ ಸಂಘ ಎಚ್ಚರಿಸಿದೆ.

ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಪ್ಯಾಕೇಜ್‌ ವ್ಯವಸ್ಥೆ ತರುವುದನ್ನು ಬಿಡಬೇಕು.ಹಳೆಯ ಕಾಮಗಾರಿಗಳಿಗೆ ಶೇ. 12ರಷ್ಟು ಮಾತ್ರ ಜಿಎಸ್‌ಟಿ ಕಡಿತ ಮಾಡಬೇಕು. ಎಸ್‌ಆರ್‌ ಪಟ್ಟಿ ನಿಗದಿಸುವಾಗ ದರ ಏರಿಕೆ ಪರಿಗಣಿಸಬೇಕು ಎಂದು ಗುತ್ತಿಗೆದಾರರು ಒತ್ತಾಯಿಸಿದರು.

click me!