ಪ್ರಚೋದನೆ ಮಾಡಿ ಹೋರಾಟಕ್ಕೆ ಇಳಿಸುತ್ತಿದ್ದಾರೆ : ಸಂಸದ BYR

By Suvarna News  |  First Published Dec 21, 2019, 2:10 PM IST

ದೇಶದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದು, ವಿಪಕ್ಷಗಳ ಪಿತೂರಿಯೇ ಇದಕ್ಕೆ ಕಾರಣ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ. 


ಶಿವಮೊಗ್ಗ [ಡಿ.21]: ರಾಜ್ಯದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಗಲಭೆ  ನಡೆಯುತ್ತಿದೆ. ಶಾಂತವಾಗಿದ್ದ ದೇಶ, ರಾಜ್ಯವನ್ನು ವಿನಾಶದ ಅಂಚಿಗೆ ತೆಗೆದುಕೊಂಡು ಹೋಗಲು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು. 

ಶಿವಮೊಗ್ಗದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಕೆಲ ರಾಷ್ಟ್ರೀಯ ಪಕ್ಷಗಳ ಪ್ರಚೋದನೆಯಿಂದ ಗಲಭೆ ನಡೆಯುತ್ತಿದೆ. ಈಗಾಗಲೇ ಪಾಕಿಸ್ತಾನದಲ್ಲಿದ್ದ ಅಲ್ಪಸಂಖ್ಯಾತರ ಸಂಖ್ಯೆ ಶೇಕಡಾ 23ರಿಂದ 3ಕ್ಕೆ ಬಂದಿದೆ ಎಂದರು. 

Tap to resize

Latest Videos

ಇನ್ನು ರಾಷ್ಟ್ರದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ ಎನ್ನುವವರು ಪಂಜಾಬಿನಲ್ಲಿ ಸಿಖ್ಖರ ಕೊಲೆ ಭೋಪಾಲ್ ದುರಂತ ಮೊದಲಾದವು ಯಾರ ಕಾದಲ್ಲಿ ನಡೆದಿದೆ ಎನ್ನುವುದು ಅರಿಯಲಿ. ವಿಪಕ್ಷಗಳ ಮುಖಂಡರು ದೇಶದ ವ್ಯವಸ್ಥೆ ಹಾಳು ಮಾಡಲು ಮುಂದಾಗಿದ್ದಾರೆ ಎಂದು ರಾಘವೇಂದ್ರ ವಾಗ್ದಾಳಿ ನಡೆಸಿದರು. 

ಕಾಯ್ದೆ ಹೆಸರಲ್ಲಿ ಕಾಂಗ್ರೆಸ್‌ನಿಂದ ರಾಜ್ಯಕ್ಕೆ ಬೆಂಕಿ ಹಚ್ಚುವ ಕೆಲಸ: ಶೋಭಾ ಕಿಡಿ...

ದೇಶದಲ್ಲಿ ಪೌರತ್ವ ಕಾಯ್ದೆ ಜಾರಿಯಿಂದ ಮುಸ್ಲಿಂ ಸಮುದಾಯದವರಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ತಪ್ಪು ಮಾಹಿತಿ ಮೂಲಕ  ಸ್ವಾರ್ಥ ರಾಜಕಾರಣಕ್ಕಾಗಿ ದೇಶದ ಸಮಗ್ರತೆಗೆ ಧಕ್ಕೆ ಉಂಟು  ಮಾಡಬಾರದು. ಕಾಮಗ್ರೆಸ್, ಕಮ್ಯುನಿಷ್ಟ್ ಪಕ್ಷಗಳು ಯುವಕರನ್ನು ಪ್ರಚೋದನೆ ನೀಡಿ ಬೀದಿಗೆ ಇಳಿಸುತ್ತಿದ್ದಾರೆ ಎಂದು  ಸಂಸದ ಬಿ ವೈ ರಾಘವೇಂದ್ರ ಆರೋಪಿಸಿದರು.

click me!