ಪ್ರಯಾಣಿಕ ಗಮನಕ್ಕೆ: ಭಾನುವಾರ ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಬಂದ್

Published : Feb 13, 2020, 08:17 PM ISTUpdated : Feb 13, 2020, 08:30 PM IST
ಪ್ರಯಾಣಿಕ ಗಮನಕ್ಕೆ: ಭಾನುವಾರ ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಬಂದ್

ಸಾರಾಂಶ

ಆರ್‌ವಿ ರಸ್ತೆ ಮತ್ತು ಯಲಚೇನಹಳ್ಳಿ ನಿಲ್ದಾಣದವರೆಗಿನ ಹಸಿರು ಮಾರ್ಗದಲ್ಲಿ ಭಾನುವಾರ ಯಾವುದೇ ಮೆಟ್ರೋ ರೈಲುಗಳು ಓಡಾಡುವುದಿಲ್ಲ. ಈ ಬಗ್ಗೆ ಬಿಎಂಆರ್‌ಸಿಎಲ್ ತಿಳಿಸಿದೆ.

ಬೆಂಗಳೂರು, (ಫೆ.14): ಹಸಿರು ಮಾರ್ಗದ RV ರಸ್ತೆ-ಯೆಲಚೇನಹಳ್ಳಿ ನಿಲ್ದಾಣದ ವರೆಗೆ ಭಾನುವಾರ ಒಂದು ದಿನದ ಮಟ್ಟಿಗೆ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ.

ಈ ಬಗ್ಗೆ ಇಂದು (ಗುರುವಾರ)  ಬಿಎಂಆರ್‌ಸಿಎಲ್‌ ಅಧಿಕೃತ ಪತ್ರಿಕೆ ಪ್ರಕಟಣೆ ಹೊರಡಿಸಿದೆ. 

ಯೆಲಚೇನಹಳ್ಳಿಯಿಂದ ಮುಂದುವರೆದು ಅಂಜನಾಪುರವರೆಗೆ 33 ಕೆವಿ ವಿದ್ಯುತ್ ಕೇಬಲ್ ಅವಳವಡಿಕೆ ಕಾರ್ಯ ನಡೆಯುವುದರಿಂದ ಫೆಬ್ರವವರಿ 16 ಅಂದ್ರೆ ಭಾನುವಾರ ಮಟ್ರೋ ಸಂಚಾರ ಇರುವುದಿಲ್ಲ. 

ಹೊಸ ವರ್ಷದ ಆರಂಭದಲ್ಲಿಯೇ ಮೆಟ್ರೋ ಪ್ರಯಾಣಿಕರಿಗೆ ಶಾಕ್ ಕೊಟ್ಟ BMRCL

ಇನ್ನು ಇದೇ ಹಸಿರು ಮಾರ್ಗದ ಮೆಟ್ರೋ ನಾಗಸಂದ್ರದಿಂದ ಆರ್.ವಿ.ರಸ್ತೆ ನಿಲ್ದಾಣದ ವರೆಗಿನ ಸಂಚಾರ ಯಥಾಸ್ಥಿತಿಯಲ್ಲಿರುತ್ತದೆ. ಮತ್ತೆ ಬೈಯಪ್ಪನಹಳ್ಳಿ-ಮೈಸೂರು ರಸ್ತೆವರೆಗಿನ ನೇರಳೆ ಮಾರ್ಗದಲ್ಲಿಯೂ ಎಂದಿನಂತೆ ಮೆಟ್ರೋ ಸೇವೆ ಇರಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ನಾಗಸಂದ್ರದಿಂದ ಯಲಚೇನಹಳ್ಳಿ ವರೆಗೆ ಈ ಮೆಟ್ರೋ ಒಡಾಡುತ್ತಿತ್ತು. ಆದ್ರೆ, ಭಾನುವಾರ  ಒಂದು ದಿನ ಮಾತ್ರ ನಾಗಸಂದ್ರದಿಂದ ಆರ್‌.ವಿ. ರಸ್ತೆ ಮೆಟ್ರೋ ನಿಲ್ದಾಣದ ವರಗೆ ಮಾತ್ರ ಸಂಚರಿಸಲಿದೆ. ಈ ಹಿನ್ನೆಲೆಯಲ್ಲಿ  ಆರ್‌.ವಿ. ರಸ್ತೆ ನಂತರದ ಮುಂದಿನ ನಿಲ್ದಾಣಕ್ಕೆ  ಹೋಗುವ ಪ್ರಯಾಣಿಕರು ಬೇರೆ ವಾಹನ ನೋಡಿಕೊಳ್ಳಬೇಕು.

PREV
click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?