ಸುಮಲತಾ ಬೆಂಬಲ ಇಲ್ಲದೇ ಬಿಜೆಪಿ ಗೆಲುವು..!

By Kannadaprabha News  |  First Published Dec 10, 2019, 8:35 AM IST

ಮಂಡ್ಯ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳೂ ಸುಮಲತಾ ಅವರ ಬೆಂಬಲಕ್ಕಾಗಿ ಗೋಗರೆದಿದ್ದವು. ಆದರೆ ಸಂಸದೆ ಸುಮಲತಾ ತಟಸ್ಥವಾಗಿ ಉಳಿದಿದ್ದರು. ಇದೀಗ ಸುಮಲತಾ ಬೆಂಬಲ ಇಲ್ಲದೆ ಗೆಲುವು ಸಾಧಿಸಿದ ಹೆಗ್ಗಳಿಕೆಯೂ ಬಿಜೆಪಿ ಪಾಲಾಗಿದೆ.


ಮಂಡ್ಯ(ಡಿ.10): ಜೆಡಿಎಸ್‌ ಭದ್ರಕೋಟೆಯಲ್ಲಿ ಕಮಲ ಅರಳಿದೆ. ಸತತ ಪ್ರಯತ್ನದ ಮೂಲಕ ಅನರ್ಹ ಪಟ್ಟವಿದ್ದರೂ ಕೆ.ಸಿ. ನಾರಾಯಣ ಗೌಡ ಗೆಲುವು ಸಾಧಿಸಿದ್ದಾರೆ. ಮಂಡ್ಯದಲ್ಲಿ ಸುಮಲತಾ ಬೆಂಬಲಕ್ಕಾಗಿ ಪೈಪೋಟಿ ಇತ್ತು. ಆದರೆ ಸಂಸದೆ ತಟಸ್ಥವಾಗಿ ಉಳಿದಿದ್ದರು.

ಉಪ ಚುನಾವಣೆಯ ವೇಳೆ ಸಂಸದೆ ಸುಮಲತಾ ಅವರನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಗೋಗರೆದು ಬೆಂಬಲ ನೀಡುವಂತೆ ಕೋರಿದ್ದರು. ಸ್ವತಃ ಸಿಎಂ ಯಡಿಯೂರಪ್ಪನವರು, ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು, ಕಾಂಗ್ರೆಸ್‌ ನ ಡಿಕೆ ಶಿವಕುಮಾರ್‌, ಚಲುವರಾಯಸ್ವಾಮಿ ಅನೇಕರು ಬೆಂಬಲ ನೀಡಿ ಎಂದು ಕೋರಿದ್ದರು. ಆದರೆ ತಟಸ್ಥವಾಗಿ ಉಳಿದ ಸಂಸದೆ ಯಾರಿಗೂ ಬೆಂಬಲ ನೀಡದೇ ಉಪ ಚುನಾವಣೆಯ ಪ್ರಚಾರ, ಬೆಂಬಲದ ನಿರ್ಧಾರದಿಂದ ಹಿಂದೆ ಉಳಿದಿದ್ದರು.

Latest Videos

undefined

ಹೊಸ ವರ್ಷಕ್ಕೆ ಮಂಗಳೂರಿಗರಿಗೆ KSRTC ಬಂಪರ್..!

ಆಗ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಕೊನೆಯ ಪಕ್ಷ ನಟರಾದ ಜೋಡೆತ್ತು ದರ್ಶನ್‌- ಯಶ್‌ ಅವರುಗಳನ್ನು ಪ್ರಚಾರಕ್ಕೆ ಕಳುಹಿಸಿಕೊಡಿ ಎಂದು ಕೇಳಿಕೊಂಡರು. ಅದಕ್ಕೂ ಸೊಪ್ಪ ಹಾಕಲಿಲ್ಲ. ಈಗ ಬಿಜೆಪಿ ಯಾರ ಬೆಂಬಲ ಇಲ್ಲದೇ ಗೆದ್ದು ತೋರಿಸಿದೆ. ಬೆಂಬಲ ನೀಡದ ಸಂಸದೆ ಬಿಜೆಪಿಯ ಈ ಗೆಲವು ಮುಖ ಭಂಗ ಮಾಡಿದಂತಾಗಿದೆ ಎನ್ನುವುದು ಜಿಲ್ಲಾ ಬಿಜೆಪಿ ನಾಯಕರ ಅಭಿಮತ.

ಬಿಎಸ್‌ವೈ ಬಗ್ಗೆ ಸಿಂಪಥಿ:

ಸಿಎಂ ತವರು ತಾಲೂಕಿನಲ್ಲಿ ಈ ಬಾರಿ ಮತದಾರರು ಬಿಜೆಪಿಗೆ ಗೆಲುವು ತಂದು ಕೊಟ್ಟು ಮಾನ ಉಳಿಸಿದ್ದಾರೆ. ಸಿಎಂ ಯಡಿಯೂರಪ್ಪನವರೂ ಕೂಡ ಪದೇಪದೆ ಪ್ರಚಾರ ಭಾಷಣದಲ್ಲಿ ಇದನ್ನೇ ಕೇಳುತ್ತಿದ್ದರು. ಹೊರಗಿನ ಜಿಲ್ಲೆಯ ಜನ ನಂಗೆ ಅಪಮಾನ ಮಾಡುತ್ತಾರೆ, ನಿಮ್ಮ ಸ್ವಂತ ಜಿಲ್ಲೆಯಲ್ಲಿ ಒಂದು ಸ್ಥಾನ ಗೆಲ್ಲುವುದು ನಿಮಗೆ ಸಾಧ್ಯವಿಲ್ಲ, ಮೊದಲು ಅಲ್ಲಿ ಗೆದ್ದುಕೊಂಡು ಬನ್ನಿ ಎಂದು ಹೇಳುತ್ತಾರೆ. ಆ ಕಾರಣಕ್ಕಾದರೂ ನಾರಾಯಣಗೌಡ ಅವರನ್ನು ಗೆಲ್ಲಿಸಿ ನನ್ನ ಮಾನ ಉಳಿಸಿ ಎಂದು ಕೋರಿದ್ದ ಮನವಿಗಳಿಗೆ ಮತದಾರರು ಈ ಬಾರಿ ಸ್ಪಂದಿಸಿದ್ದಾರೆ. ಯಡಿಯೂರಪ್ಪನವರಿಗೂ ಒಂದು ಸಿಂಪಥಿ ತೋರಿದ್ದಾರೆ ಕೆ.ಆರ್‌.ಪೇಟೆ ಮತದಾರರು.

click me!