ಕಾಂಗ್ರೆಸ್ ಶಾಸಕರ ಸಹೋದರನ ಪುತ್ರ ನಿಧನರಾಗಿದ್ದಾರೆ. ದೇಗುಲಕ್ಕೆ ತೆರಳಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಪಾವಗಡ (ಮಾ.02): ಶಾಸಕ ವೆಂಕಟರಮಣಪ್ಪ ಅವರ ಸಹೋದರ ದೊಡ್ಡಹನುಮಂತಪ್ಪರ ಪುತ್ರ, ಗುತ್ತಿಗೆದಾರ ಸಣ್ಣ ವೆಂಕಟರಮಣಪ್ಪ ಅವರು ಅನಾರೋಗ್ಯ ನಿಮಿತ್ತ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಆಂಧ್ರಪ್ರದೇಶದ ಪೇರೂರು ಗ್ರಾಮದ ಗಂಗಮ್ಮ ತಾಯಿ ದೇವಸ್ಥಾನಕ್ಕೆ ಸಣ್ಣ ವೆಂಕಟರಮಣಪ್ಪ ಅವರು ಕುಟುಂಬ ಸಮೇತ ತೆರಳಿದ್ದರು. ಈ ವೇಳೆ ಕುಸಿದು ಬಿದ್ದಿದ್ದಾರೆ. ಅವರನ್ನು ತುರ್ತು ವಾಹನದಲ್ಲಿ ಪಾವಗಡಕ್ಕೆ ಕರೆತಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
200 ಆಶಾ ಕಾರ‍್ಯಕರ್ತರಿಗೆ ರೇಷ್ಮೆ ಸೀರೆ ವಿತರಣೆ ...
ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತರು ಪುತ್ರ ಪಿಎಸ್‌ಐ ಲೋಕೇಶ್‌ಕುಮಾರ್ ಹಾಗೂ ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.
ಮೃತರ ನಿಧನಕ್ಕೆ ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ,ಹಿರಿಯ ಮುಖಂಡ ತಿಮ್ಮಾರೆಡ್ಡಿ, ನರಸಿಂಹಯ್ಯ ತಾಲೂಕು ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.