ಬಂಗಾರಪೇಟೆ (ಅ.08): ಕ್ಷೇತ್ರದಲ್ಲಿ ಸತತ 8 ವರ್ಷಗಳಿಂದ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು ಯಾರ ಅಪ್ಪಂದೂ ಅಲ್ಲ, ಬಿಜೆಪಿ (BJP) ಸರ್ಕಾರದ್ದು ಅನ್ನುವುದಾದರೇ ಅವರದೇ ಬಿಜೆಪಿ ಸರ್ಕಾರವೇ ಇದೆಯಲ್ಲಾ, ತಾಕತ್ತು ಇದ್ದರೇ ಅನುದಾನ ತಂದು ಅಭಿವೃದ್ಧಿ ಮಾಡಲಿ ನೋಡೋಣ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ (SN Narayanaswamy) ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿಯೇ ನಡೆಸಿದರು.
ಪಟ್ಟಣದ ಎಸ್.ಎನ್.ರೆಸಾರ್ಟ್‌ನಲ್ಲಿ ಡಿಸಿಸಿ ಬ್ಯಾಂಕ್ (DCC Bank) ವತಿಯಿಂದ ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳಿಗೆ ಸುಮಾರು 7.64 ಕೋಟಿ ರು. ಬಡ್ಡಿ ರಹಿತ ಸಾಲ ವಿತರಿಸಿ ಮಾತನಾಡಿದ ಅವರು, ಸರ್ಕಾರದ ಕೆಲಸಗಳನ್ನು ನಿಲ್ಲಿಸುವುದು ಸುಲಭ. ಆದರೆ, ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಲು ಎಷ್ಟುಕಷ್ಟಎನ್ನುವುದು ನನಗೆ ಗೊತ್ತು ಎಂದರು.
undefined
ಕೈನಲ್ಲಿ ಗೆದ್ದು ಈಗ ಬಿಜೆಪಿಗೆ ಬೆಂಬಲ ಕೊಟ್ಟವರಿಗೆ ರಾಜಕೀಯ ಭವಿಷ್ಯವಿಲ್ಲ : ಶಾಸಕ ಗರಂ
ಕೆಲಸದ ಮೂಲಕ ಉತ್ತರ
ಡಿಸಿಸಿಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷಾತೀತವಾಗಿ ನಾನು ಕೆಲಸ ಮಾಡುತ್ತಿರುವುದಾಗಿ ಬೆನ್ನ ಹಿಂದೆ ಮಾತನಾಡುವವರಿಗೆ ನಾನು ನನ್ನ ಕೆಲಸ ಮತ್ತು ಮೌನದಿಂದಲೆ ಉತ್ತರ ನೀಡುತ್ತಿದ್ದೇನೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದವರನ್ನು ಮರೆಯಬಾರದು. ಮುಂದೆ ಪ್ರತಿ ಮಹಿಳೆಗೆ 1 ಲಕ್ಷ ರು. ಸಾಲ ನೀಡುವ ಗುರಿಯಿದೆ. ಜಿಲ್ಲೆಯ ಹೆಣ್ಣುಮಕ್ಕಳ ಮೇಲೆ ನನಗೆ ನಂಬಿಕೆ ಇದೆ ಇದರ ಉಪಯೋಗದಿಂದ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೋಲಾರದ ಅನಿಲ್‌ಕುಮಾರ್, ನಾಗನಾಳ ಸೋಮಣ್ಣ ಮುಂತಾದವರು ಹಾಜರಿದ್ದರು.
ಬಿಜೆಪಿಯಿಂದ ಆಫರ್ ಬಂದಿತ್ತು
ಬಿಜೆಪಿ (BJP) ಸೇರಿದರೆ ಹಣದ ಜೊತೆ ಮಂತ್ರಿಗಿರಿ ಸಹ ಕೊಡಲಾಗುವುದೆಂದು ನನಗೂ ಆಫರ್ ನೀಡಿದ್ದರು, ಆದರೆ ಮಾತೃಪಕ್ಷಕ್ಕೆ ದ್ರೋಹ ಬಗೆಯಬಾರದೆಂದು ಬಿಜೆಪಿಗರ ಆಫರ್ ನಿರಾಕರಿಸಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ (Narayana Swamy) ಹೇಳಿದರು.
ನನಗೆ ಹಣದ ವ್ಯಾಮೋಹವಿದ್ದಿದ್ದರೆ ಯಡಿಯೂರಪ್ಪ (Yediyurappa) ಮುಖ್ಯಮಂತ್ರಿಯಾಗಿದ್ದಾಗ ನನಗೂ ಪಕ್ಷ ಸೇರುವಂತೆ ಮುಖಂಡರು ಆಮಿಷವೊಡ್ಡಿದ್ದರು. ಆದರೆ ನಾನು ಅವರ ಆಹ್ವಾನವನ್ನು ನಿರಾಕರಿಸಿದೆ ಎಂದು ತಿಳಿಸಿದರು.
40 ಅಲ್ಲ, 4 ಬಿಜೆಪಿ ಶಾಸಕರನ್ನು ಕರೆದುಕೊಂಡು ಹೋಗಲಿ
ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧನೆ : ಕಳೆದ 8ವರ್ಷಗಳಿಂದ ಶಾಸಕನಾಗಿ ಕ್ಷೇತ್ರದದಲ್ಲಿ ಅಭಿವೃದ್ದಿಯಲ್ಲಿ ಹಿಂದೆದೂ ಕಾಣಷ್ಟುಸಾಧನೆ ಮಾಡಿರುವೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ (JDS) ಅಭ್ಯರ್ಥಿಗೆ 54ಸಾವಿರ ಮತಗಳನ್ನು ನೀಡಿದ್ದು ಬೇಸರ ತಂದಿದೆ. ಎಚ್.ಡಿ.ಕುಮಾರಸ್ವಾಮಿ (HD Kumaraswamy) ಮುಖ್ಯಮಂತ್ರಿಯಾದರೆ ರೈತರ ಸಾಲ ಮನ್ನಾ ಮಾಡುವರೆಂದು ನಂಬಿ ಮತ ಹಾಕಿದರು. ಆದರೆ ಅವರು ಮುಖ್ಯಮಂತ್ರಿಯಾದರೂ ಏನೂ ಮಾಡಲಿಲ್ಲ ಎಂದು ವ್ಯಂಗ್ಯವಾಡಿದರು.