'ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವ ಯೋಗ್ಯತೆ ಶ್ರೀರಾಮುಲುಗಿಲ್ಲ

By Web DeskFirst Published Nov 24, 2019, 8:27 AM IST
Highlights

ಸಿದ್ದು ವಿರುದ್ಧವಲ್ಲ ಶ್ರೀ ರಾಮುಲು ಮೊದಲು ನನ್ನ ವಿರುದ್ಧ ಗೆಲ್ಲಲಿ| ಶ್ರೀರಾಮುಲುಗೆ ಶಾಸಕ ಜಿ.ಎಸ್‌. ಗಣೇಶ ಸವಾಲು| ಶ್ರೀರಾಮುಲು ಚುನಾವಣೆ ತಾನು ಗೆದ್ದ ನಂತರ ಪರಿಶಿಷ್ಟ ಪಂಗಡದ ಮಿಸಲಾತಿ ಶೇ 7.5ಕ್ಕೆ ಹೆಚ್ಚಿಸುತ್ತೇನೆ ಎಂದಿದ್ದರು| ಆದರೆ, ಗೆದ್ದು 8 ತಿಂಗಳು ಕಳೆದರೂ ಮಾಡಿಲ್ಲ| ಅದು ಕೇವಲ ರಾಜಕೀಯ ಗಿಮಿಕ್‌ ಅಷ್ಟೇ|

ಕುರುಗೋಡು(ನ.24): ಸಚಿವ ಶ್ರೀರಾಮುಲು ಕಾಂಗ್ರೆಸ್‌ನ ಬಹು ದೊಡ್ಡ ನಾಯಕರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ್ದು, ಅವರ ಸ್ಥಾನಕ್ಕೆ ಶೋಭೆಯಲ್ಲ. ಶ್ರೀರಾಮುಲು ಮೊದಲು ನನ್ನ ವಿರುದ್ಧ ಗೆದ್ದು ತೋರಿಸಲಿ ಎಂದು ಶಾಸಕ ಜೆ.ಎನ್‌. ಗಣೇಶ್‌ ಸವಾಲು ಹಾಕಿದ್ದಾರೆ.

ಸಮೀಪದ ಬಾಳಪುರ ಗ್ರಾಮದಲ್ಲಿ ಶನಿವಾರ 26 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಾಜಿ ಸಿಎಂ ಸಿದ್ದರಾಮಯ್ಯ ಹಿಂದೆ ಯಾರೂ ಇಲ್ಲ, ಒಂಟಿಯಾಗಿದ್ದಾರೆ. ಅವರು ರಾಜೀನಾಮೆ ನೀಡಿ ಹೊರ ಬರಲಿ ಎಂದು ಹಗುರವಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹಿಂದೆ ರಾಜ್ಯದಲ್ಲಿರುವ ಕಾಂಗ್ರೆಸ್‌ನ ಎಲ್ಲ ಶಾಸಕರೂ ಇದ್ದಾರೆ, ಅವರು ಒಬ್ಬಂಟಿಯಲ್ಲ. ಮಾಸ್‌ ಲೀಡರ್‌ ಬಗ್ಗೆ ಸಚಿವ ಶ್ರೀ ರಾಮುಲುಗೆ ಮಾತನಾಡುವ ಯೋಗ್ಯತೆ ಕೂಡ ಇಲ್ಲ. ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಶ್ರೀ ರಾಮುಲು ವಿರುದ್ಧ ನಾನು ಸ್ಪರ್ಧಿಸುತ್ತೇನೆ. ಆಗ ನನ್ನ ವಿರುದ್ಧ ಗೆದ್ದು ನಂತರ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲಿ ಎಂದು ಶಾಸಕ ಗಣೇಶ್‌ ಸಾವಲು ಹಾಕಿದರು.

ಶ್ರೀರಾಮುಲು ಚುನಾವಣೆ ತಾನು ಗೆದ್ದ ನಂತರ ಪರಿಶಿಷ್ಟ ಪಂಗಡದ ಮಿಸಲಾತಿ ಶೇ 7.5ಕ್ಕೆ ಹೆಚ್ಚಿಸುತ್ತೇನೆ ಎಂದಿದ್ದಾರೆ. ಆದರೆ, ಅವರು ಗೆದ್ದು 8 ತಿಂಗಳು ಕಳೆದರೂ ಮಾಡಿಲ್ಲ. ಅದು ಕೇವಲ ರಾಜಕೀಯ ಗಿಮಿಕ್‌ ಅಷ್ಟೇ ಎಂದು ಟಾಂಗ್‌ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಎ. ಬನಶಂಕರಿ ವಿರೇಂದ್ರರೆಡ್ಡಿ, ತಾಪಂ ಸದಸ್ಯ ಹೊಬಳೇಶ, ಸೇರಿದಂತೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.
 

click me!