ಮಂಗಳೂರು ಬಂದರಿಗೆ ಬಂತು ಐಷಾರಾಮಿ ಪ್ರವಾಸಿ ನೌಕೆ..!

By Kannadaprabha News  |  First Published Nov 24, 2019, 8:16 AM IST

ನವಮಂಗಳೂರು ಬಂದರಿಗೆ ಮತ್ತೊಂದು ಐಷಾರಾಮಿ ಪ್ರವಾಸಿ ಹಡಗು ಆಗಮಿಸಿದೆ. 600 ಪ್ರವಾಸಿಗರು ಹಾಗೂ 490 ಮಂದಿ ಸಿಬ್ಬಂದಿ ಒಳಗೊಂಡಂತೆ ಬರೋಬ್ಬರಿ 1,090 ಮಂದಿಯನ್ನು ಹೊತ್ತು ಶನಿವಾರ ಎನ್‌ಎಂಪಿಟಿಗೆ ಆಗಮಿಸಿದೆ. ನವೆಂಬರ್‌ ತಿಂಗಳಿನಲ್ಲಿ ಒಟ್ಟು ಆರು ಪ್ರವಾಸಿ ನೌಕೆಗಳು ಆಗಮಿಸಲಿದ್ದು, ಸೆವೆನ್‌ಸೀಸ್‌ ವೊಯೇಜರ್‌ ನೌಕೆ ಸೇರಿ ಇದುವರೆಗೆ ಒಟ್ಟು ನಾಲ್ಕು ನೌಕೆಗಳ ಆಗಮನವಾಗಿದೆ.


ಮಂಗ​ಳೂ​ರು(ನ.24): ನವಮಂಗಳೂರು ಬಂದರಿಗೆ ಮತ್ತೊಂದು ಐಷಾರಾಮಿ ಪ್ರವಾಸಿ ಹಡಗು ಆಗಮಿಸಿದೆ. 600 ಪ್ರವಾಸಿಗರು ಹಾಗೂ 490 ಮಂದಿ ಸಿಬ್ಬಂದಿ ಒಳಗೊಂಡಂತೆ ಬರೋಬ್ಬರಿ 1,090 ಮಂದಿಯನ್ನು ಹೊತ್ತು ಶನಿವಾರ ಎನ್‌ಎಂಪಿಟಿಗೆ ಆಗಮಿಸಿದೆ.

ಬೆಳಗ್ಗೆ ಈ ಬೃಹತ್‌ ನೌಕೆ ಗೋವಾ ಮೂಲಕವಾಗಿ ಮಂಗಳೂರಿಗೆ ಆಗಮಿಸಿದೆ. ಮಂಗಳೂರಿಗೆ ಸತತವಾಗಿ ಪ್ರವಾಸಿ ನೌಕೆಗಳ ಆಗಮನವಾಗುತ್ತಿದೆ. ನವೆಂಬರ್‌ ತಿಂಗಳಿನಲ್ಲಿ ಒಟ್ಟು ಆರು ಪ್ರವಾಸಿ ನೌಕೆಗಳು ಆಗಮಿಸಲಿದ್ದು, ಸೆವೆನ್‌ಸೀಸ್‌ ವೊಯೇಜರ್‌ ನೌಕೆ ಸೇರಿ ಇದುವರೆಗೆ ಒಟ್ಟು ನಾಲ್ಕು ನೌಕೆಗಳ ಆಗಮನವಾಗಿದೆ. ಇನ್ನೂ ಎರಡು ನೌಕೆಗಳು ಎನ್‌ಪಿಎಂಟಿ ಪ್ರವೇಶಿಸುವ ಪಟ್ಟಿ​ಯ​ಲ್ಲಿವೆ. ಈ ವರ್ಷ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿ ಹಡಗುಗಳು ನವಮಂಗಳೂರು ಬಂದರು ಪ್ರವೇಶಿಸಿರುವುದು ಗಮನಾರ್ಹ ವಿಷಯ.

Tap to resize

Latest Videos

undefined

ಈ ತಿಂಗಳಲ್ಲಿ ಬಂದಿತ್ತು ಐಡಾವೀಟಾ:

ನ.4ರಂದು ಐಡಾವೀಟಾ ಹೆಸರಿನ ಪ್ರವಾಸಿ ಹಡಗು ಮತ್ತು ನ.11ರಂದು ಕೋಸ್ಟಾವಿಕ್ಟೋರಿಯಾ ಹೆಸರಿನ ಪ್ರವಾಸಿ ನೌಕೆ ನವಮಂಗಳೂರು ಬಂದರಿಗೆ ಪ್ರವಾಸಿಗರನ್ನು ಹೊತ್ತು ಬಂದಿತ್ತು. ವಿದೇಶಿ ಪ್ರವಾಸಿಗರು ಮಂಗಳೂರಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ತೆರಳಿದ್ದಾರೆ. ಎನ್‌ಎಂಪಿಟಿಯಲ್ಲಿ ಪ್ರವಾಸಿಗರಿಗಾಗಿ ಸಕಲ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮಂಗಳೂರಿಗೆ ಬಂದ ಎರಡನೇ ಪ್ರವಾಸಿ ನೌಕೆ, ಕರಾವಳಿಯ ಸೊಬಗು ಸವಿದ ವಿದೇಶಿಗರು

ನ. 26ರಂದು ಕೋಸ್ಟಾವಿಕ್ಟೋರಿಯಾ ಪ್ರವಾಸಿ ಹಡಗು ಮಂಗಳೂರಿಗೆ ಆಗಮಿಸಲಿದೆ. ಅಂದು ಬೆಳಗ್ಗೆ 8 ಗಂಟೆಗೆ ಎನ್‌ಎಂಪಿಟಿ ತಲುಪುವ ಈ ಹಡಗಿನಲ್ಲಿ 1,928 ಪ್ರವಾಸಿಗರು ಹಾಗೂ 766 ಸಿಬ್ಬಂದಿ ಇರಲಿದ್ದಾರೆ. ಅಲ್ಲದೆ ನ.27ರಂದು ಬೆಳಿಗ್ಗೆ 7 ಗಂಟೆಗೆ ಮರೆಲ್ಲಾ ಹೆಸರಿನ ಬೃಹತ್‌ ಹಡಗು ಆಗಮಿಸಲಿದ್ದು, ಇದರಲ್ಲಿ 2,000 ಪ್ರವಾಸಿಗರು ಹಾಗೂ 800 ಸಿಬ್ಬಂದಿ ಆಗಮಿಸಲಿದ್ದಾರೆ.

ಸಾರ್ವಜನಿಕ ರಸ್ತೆಯ ಬದಿಯಲ್ಲೇ ನಡೆಯಿತು ಶವಸಂಸ್ಕಾರ..!

click me!