'ನಮ್ಮ ನಾಯಕರು ಬಳಿ ಹಾಕಿಕೊಂಡ್ರೆ, ನಿಮ್ಮ ನಾಯಕರು ಸೀರೆ ಉಡ್ತಾರಾ'...?

Published : May 16, 2019, 10:34 PM IST
'ನಮ್ಮ ನಾಯಕರು ಬಳಿ ಹಾಕಿಕೊಂಡ್ರೆ, ನಿಮ್ಮ ನಾಯಕರು ಸೀರೆ ಉಡ್ತಾರಾ'...?

ಸಾರಾಂಶ

ಕೆಲಸ ಮಾಡಲು ಆಗದಿದ್ದರೆ ಕೈಗೆ ಬಳೆ ತೊಟ್ಟಿಕೊಳ್ಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ತಿವಿದಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ.

ಧಾರವಾಡ, [ಮೇ.16]: ಬಳೆ ತೊಟ್ಟಿಕೊಳ್ಳಿ ಎನ್ನುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ವಿರುದ್ಧ ಮಾಜಿ ಸಚಿವೆ, ನಟಿ ಉಮಾಶ್ರೀ ಸಿನಿಮಾ ಶೈಲಿಯಲ್ಲಿ ಕಿಡಿಕಾರಿದ್ದಾರೆ.

ಕುಂದಗೋಳ ಉಪಚುನಾವಣೆ ಹಿನ್ನೆಲೆಯಲ್ಲಿ ಗುಡಗೇರಿಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ ಉಮಶ್ರೀ,  'ನಮ್ಮ ನಾಯಕರು ಬಳಿ ಹಾಕಿಕೊಂಡ್ರೆ, ನಿಮ್ಮ ನಾಯಕರು ಸೀರೆ ಉಡ್ತಾರಾ? ಎಂದು ಶೋಭಾ ಕರಂದ್ಲಾಜೆಗೆ ತಿವಿದರು. 

ಶೋಭಾ ಕರಂದ್ಲಾಜೆ ಅವರನ್ನು ಏನ ಮಾಡಬೇಕು. ಅವಳಿಗೆ ನಾಚಿಕೆ ಆಗಬೇಕು. ಒಂದು ಹೆಣ್ಣು ಮಗಳು ಹೆಂಗ ಇರಬೇಕು ಹಂಗ ಇರಬೇಕು. ನಮ್ಮ ನಾಯಕರು ಬಳಿ ತೊಟ್ಟರೆ, ನಿಮ್ಮ ನಾಯಕರು ಸೀರೆ ಉಡಬೇಕೆನೂ? ಎಂದು ಶೋಭಾ ವಿರುದ್ಧ ವಾಕ್ ಪ್ರಹಾರ ನಡೆಸಿದರು.

ಧರ್ಮ ಧರ್ಮದಲ್ಲಿ ಬೆಂಕಿ ಹಚ್ಚಿ ನಾವು ಮತ ಕೇಳಿಲ್ಲ.  ಅಭಿವೃದ್ಧಿಯನ್ನ ಇಟ್ಟುಕೊಂಡು ಏಕೆ ಮತ ಕೇಳುವುದಿಲ್ಲ. ಅವರು ಏನೂ ಅಭಿವೃದ್ಧಿ ಮಾಡಿಲ್ಲ, ಮಾಡೋದಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಕ್ತಿ ಇದ್ದರೆ ತಮ್ಮ ಶಾಸಕರನ್ನ ಹಿಡಿದಿಟ್ಟಿಕೊಳ್ಳಲಿ. ನೀವು ಬಲಹೀನರು, ನಿಮ್ಮ ಶಾಸಕರು ಎಲ್ಲಿದ್ದಾರೆ? ಅವರಿಗೆ ಸಮಾಧಾನಪಡಿಸುವ ಕೆಲಸ ನಿಮ್ಮದು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ ಬಳೆ ತೊಟ್ಟುಕೊಳ್ಳಿ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV
click me!

Recommended Stories

ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು
ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮನೆ ಸಂಪ್ ಕ್ಯಾಪ್ ಕಳ್ಳತನ ಮಾಡಿ 700 ರೂಗೆ ಮಾರಾಟ, ಆರೋಪಿ ಅರೆಸ್ಟ್