ಶೀಘ್ರವೇ ಶಿರಾದಲ್ಲಿ ಉಪ ಚುನಾವಣೆ ನಡೆಯಲಿದ್ದು, ಇದೇ ವೇಳೆ ರಾಜಕೀಯ ಜಟಾಪಟಿ ಆರಂಭವಾಗಿದೆ.
ಶಿರಾ (ಸೆ.11): ತುಮಕೂರು ಜಿಲ್ಲೆಯ ಶಿರಾದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮಿನಿ ವಿಧಾನಸೌಧವನ್ನು ಗುರುವಾರ ಉದ್ಘಾಟಿಸಿರುವುದು ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ.
ಉಪಚುನಾವಣೆ ಹಿನ್ನೆಲೆ ಬಿಜೆಪಿ ಸರ್ಕಾರ ವಿಧಾನಸೌಧಕ್ಕೆ ಯಾವುದೇ ಸೌಲಭ್ಯ ಇಲ್ಲದಿದ್ದರೂ ಉದ್ಘಾಟಿಸಲಾಗಿದೆ. ಅಲ್ಲದೇ ಈ ಕಾರ್ಯಕ್ರಮಕ್ಕೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಆಹ್ವಾನಿಸಿಲ್ಲದ ಎಂದು ಆರೋಪಿಸಿ ಕಾಂಗ್ರೆಸ್ ಕಾರ‍್ಯಕರ್ತರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂತನ ಮಿನಿ ವಿಧಾನಸೌಧದಲ್ಲಿ ಪೀಠೋಪಕರಣಗಳು ಇನ್ನು ವ್ಯವಸ್ಥೆಯಾಗಿಲ್ಲ. ಸದ್ಯದಲ್ಲಿಯೇ ವಿಧಾನಸಭೆ ಉಪಚುನಾವಣೆ ಬರುವುದರಿಂದ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
undefined
'ಬಿಜೆಪಿಗೆ ಸಡ್ಡು ಹೊಡೆಯಲು ಕಾಂಗ್ರೆಸಿಗರಿಗೆ ತರಬೇತಿ' .
ಇದಕ್ಕೆ ಕಿಡಿಕಾರಿರುವ ಕಂದಾಯ ಸಚಿವ ಆರ್.ಅಶೋಕ್, ಎಲ್ಲಾ ಸರ್ಕಾರ ಏನು ಮಾಡಿದೆಯೋ ಅದನ್ನು ನಾವು ಮಾಡುತ್ತಿರುವುದು. ಇನ್ನು ಕಾರ್ಯಕ್ರಮಕ್ಕೆ ಜಯಚಂದ್ರರನ್ನು ಕರೆಯಬೇಕೆಂಬ ಯಾವುದೇ ಪ್ರೋಟೋಕಾಲ್ ಇಲ್ಲ. ಅವರು ಶಾಸಕರೂ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.