ಬಿಜೆಪಿಗೆ ಕಾಂಗ್ರೆಸ್‌ ಮುಖಂಡರ ಸೇರ್ಪಡೆ

By Kannadaprabha News  |  First Published Apr 27, 2023, 5:16 AM IST

ಕಾಂಗ್ರೆಸ್‌ ಪಕ್ಷ ತೊರೆದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶಿವರಾಮಯ್ಯ ಮತ್ತು ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ಕೆಂಪೇಗೌಡ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.


 ಕುಣಿಗಲ್‌ :  ಕಾಂಗ್ರೆಸ್‌ ಪಕ್ಷ ತೊರೆದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶಿವರಾಮಯ್ಯ ಮತ್ತು ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ಕೆಂಪೇಗೌಡ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಮುಖಂಡ ಡಿ. ಕೃಷ್ಣಕುಮಾರ್‌ ಮಾತನಾಡಿ, ಈ ಬಾರಿ ಕುಣಿಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳುವುದು ಖಚಿತ. ಯುವಕರ ಸೇರ್ಪಡೆಯಿಂದ ಕ್ಷೇತ್ರದ ಬಿಜೆಪಿಗೆ ಆನೆ ಬಲ ಬಂದಂತಾಗಿದೆ ಎಂದರು.

Latest Videos

undefined

ಬಿ.ಎಸ್‌.ಯಡಿಯೂರಪ್ಪ ಮೇ 1ರ ಸೋಮವಾರ ಪಟ್ಟಣದ ಕುದುರೆ ಫಾಮ್‌ರ್‍ನಿಂದ ಹುಚ್ಚಮಾಸ್ತಿ ಗೌಡ ವೃತ್ತದವರೆಗೆ ರೋಡ್‌ ಶೋ ಕಾರ್ಯಕ್ರಮದಲ್ಲಿ ಬಿಜೆಪಿ ಪರ ಮತಯಾಚನೆ ಮಾಡಲು ಬರುತ್ತಿದ್ದಾರೆ. ಈ ವಿಧಾನಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಬಿಜೆಪಿ ಬಾವುಟ ಹಾರಿಸುವುದು ಖಚಿತ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಬಲರಾಮ್‌, ಸಂತೋಷ್‌, ಕೊಡಗೆಹಳ್ಳಿ ದಿನೇಶ್‌, ತಿಮ್ಮೇಗೌಡ, ದಿಲೀಪ್‌, ದೇವರಾಜ್‌, ಆನಂದ್‌, ಸಂದೀಪ್‌ ಸೇರಿದಂತೆ ಇತರರು ಇದ್ದರು.

 ಬಿಜೆಪಿ ಕಾಂಗ್ರೆಸ್‌ನಿಂದ ಮತದಾರರ ಮೇಲೆ ಅಸ್ತ್ರ

ಮಂಡ್ಯ (ಏ.23): ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಪರ ಪ್ರಚಾರ ನಡೆಸುವುದಕ್ಕೆ ಟಕ್ಕರ್ ಕೊಡಲು ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್ ಪರ ಮಾಜಿ ಸಂಸದೆ ರಮ್ಯಾ ಕ್ಯಾಂಪೇನ್ ನಡೆಲಿದ್ದಾರೆ. ಈ ಮೂಲಕ ಬಿಜೆಪಿ ಪರ ನಿಂತ ಸುಮಲತಾಗೆ ಕಾಂಗ್ರೆಸ್ ನಿಂದ‌ ಪ್ರತ್ಯಾಸ್ತ್ರ ಪ್ರಯೋಗ ಮಾಡಲಾಗುತ್ತಿದೆ.  ಮುಂದಿನ ವಾರ ಮಂಡ್ಯ ಅಖಾಡಕ್ಕೆ ಸ್ಯಾಂಡಲ್ ವುಡ್ ಕ್ವೀನ್ ಎಂಟ್ರಿ ಕೊಡಲಿದ್ದಾರೆ. ರೋಡ್ ಶೋ, ಪ್ರಚಾರ‌ ಸಭೆ, ಕಾರ್ನರ್ ಮೀಟಿಂಗ್ ನಲ್ಲಿ ರಮ್ಯಾ ಭಾಗಿಯಾಗಿದ್ದಾರೆ. ರಮ್ಯಾ ಮೂಲಕ ಜೆಡಿಎಸ್ ಹಾಗೂ ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ಕೊಡಿಸಲು ಕಾಂಗ್ರೆಸ್ ನಿಂದ ಚಿಂತನೆ ನಡೆದಿದೆ. ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ನಟಿ ರಮ್ಯಾ ಸಂಸದರಾಗಿದ್ದರು.

ಬಳಿಕ ಅಂತರ ಕಾಯ್ದುಕೊಂಡಿದ್ದ ರಮ್ಯಾ ಹಲವು ವರ್ಷಗಳ ನಂತರ ಮಂಡ್ಯ ರಾಜಕಾರಣಕ್ಕೆ ರೀ ಎಂಟ್ರಿ ಕೊಡಲು ತಯಾರಿ ನಡೆಸಿದ್ದಾರೆ. ರಮ್ಯಾ ಪ್ರಚಾರಕ್ಕೆ ಬರುವ ಬಗ್ಗೆ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರವಿಕುಮಾರ್ ಮಾಹಿತಿ‌ ನೀಡಿದ್ದಾರೆ. ಮಂಡ್ಯ ಪ್ರಚಾರಕ್ಕೆ ಬರುವಂತೆ ಕೇಳಿಕೊಂಡಿದ್ದೇವೆ. ಮೇ 1, 2 ರಂದು ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ.  ರೋಡ್ ಶೋ  ಅಥವಾ ಸಮಾವೇಶ ನಡೆಸುವುದೇ ಎಂಬ ಬಗ್ಗೆ  ಪ್ಲಾನ್ ಮಾಡುತ್ತೇವೆ.

ಅಭಿವೃದ್ಧಿಗೆ ಒತ್ತು ಕೊಟ್ಟು ರಾಜಕೀಯಕ್ಕೆ ಬಂದಿದ್ದೇನೆ: ಕಾಂಗ್ರೆಸ್ ವಿರುದ್ಧ ರೆಡ್ಡಿ ವಾಗ್ದಾಳಿ

ರೋಡ್ ಶೋ ಜೊತೆ ಕಾರ್ನರ್ ಮೀಟಿಂಗ್ ಮಾಡಬೇಕು ಎಂಬ ಪ್ಲಾನ್ ಇದೆ. ರಮ್ಯಾ ಜೊತೆ 4 ರಿಂದ 5 ಮಂದಿ ಸಿನಿಮಾ ನಟ-ನಟಿಯರು ಬರ್ತಾರೆ. ಹಳ್ಳಿ ಕಡೆ ಹೋದಾಗ ರಮ್ಯಾಾರನ್ನ ಕರೆ ತರುವಂತೆ ಕೇಳ್ತಿದ್ದಾರೆ. ರಮ್ಯಾಾ ಬರುವುದರಿಂದ ಮಹಿಳಾ ಮತದಾರರನ್ನ ಸೆಳೆಯಬಹುದು. ಅಲ್ಲದೇ ಆರು ತಿಂಗಳ ಕಾಲ ಎಂಪಿಯಾಗಿ ಕೆಲಸ ಮಾಡಿದ್ದಾರೆ. ರಮ್ಯಾ ಬರುವುದರಿಂದ ಖಂಡಿತವಾಗಿಯೂ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಹೆಲ್ಪ್ ಆಗುತ್ತೆ.
ಮಂಡ್ಯದಲ್ಲಿ ಕೈ ಅಭ್ಯರ್ಥಿ ಗಣಿಗ ರವಿಕುಮಾರ್ ಹೇಳಿಕೆ ನೀಡಿದ್ದಾರೆ.

ರಾಹುಲ್ ಬಿಜೆಪಿಯ ಸ್ಟಾರ್ ಪ್ರಚಾರಕ; ರೋಡ್ ಶೋಗೆ ಯತ್ನಾಳ್ ಲೇವಡಿ 

ಸುಮಲತಾರನ್ನ ಗೆಲಿಸಿದ್ದು ಕಾಂಗ್ರೆಸ್ ಕಾರ್ಯಕರ್ತರು: ರವಿ ಕುಮಾರ್ 
ಬಿಜೆಪಿಗೆ ಸೇರಿದ್ದೀನಿ ಅಂತೇಳಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯ ಮಾಡಬೇಡಿ. ಸುಮಲತಾರನ್ನ ಗೆಲಿಸಿದ್ದು ಕಾಂಗ್ರೆಸ್ ಕಾರ್ಯಕರ್ತರು ಎಂದು ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಋಣ ತೀರಿಸಬೇಕಂದ್ರೆ ಅವಕಾಶವಿದೆ. ಅದನ್ನ ಬಿಟ್ಟು ನಾವೇ ಗೆದ್ವಿ ಅನ್ನೋ ಮೊಂಡತನ ತೋರಬಾರದು. ಕಾಂಗ್ರೆಸ್ ಕಾರ್ಯಕರ್ತರು ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದಾರೆ.

click me!