ಜೆಡಿಎಸ್ ಪ್ರಭಾವಿ ಮುಖಂಡರೋರ್ವರು ಇದೀಗ ಪಕ್ಷ ತೊರೆದು ಕೈ ಹಿಡಿದಿದ್ದಾರೆ. ಪ್ರಮುಖ ಮುಖಂಡರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ತುರುವೇಕೆರೆ (ಜ.17): ತಾಲೂಕಿನ ಸಮಾಜ ಸೇವಕ ಗುಡ್ಡೇನಹಳ್ಳಿಯ ಮಂಜುನಾಥ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಕೆ ನಾಗೇಶ್ ಪ್ರಸನ್ನಕುಮಾರ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಚೌದ್ರಿ ಟಿ ರಂಗಪ್ಪ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ತಾಲೂಕಿನಲ್ಲಿ ಜೆಡಿಎಸದ ಪಕ್ಷ ಸಧೃಡಗೊಳ್ಳಲು ತಮ್ಮ ತಂದೆ ಉಮೇಶಣ್ಣ ಹಾಗೂ ತಾವೂ ಸೇರದಿಂತೆ ಹಲವಾರು ಮುಖಂಡರು ಶ್ರಮಪಟ್ಟಿದ್ದೆವು. ಆದರೆ ಮಾಜಿ ಶಾಸಕ ಎಂ.ಟಿ ಕೃಷ್ಣಪ್ಪನವರು ಪಕ್ಷಕ್ಕೆ ದುಡಿದವರನ್ನು ಕಡೆಗಣಿಸಿದರು.
ಸಚಿವರೇ, ಪಕ್ಷ ಸಂಘಟನೆಗೆ ಟೈಂ ಕೊಡಿ: ಅಮಿತ್ ಶಾ ...
ಅವರು ಶಾಸಕರಾಗಲು ನಮ್ಮೆಲ್ಲರ ಶ್ರಮ ಇದೆ.ಆದರೆ ಕನಿಷ್ಠ ಸೌಜನ್ಯವನ್ನೂ ತೋರಿಸದೇ ತಾತ್ಸಾರ ಮನೋಭಾವದಿಂದ ನೋಡಿದರು. ಇದರಿಂದ ನೊಂದು ಕಾಂಗ್ರೆಸ್ ಸೇರಿದ್ದಾಗಿ ಹೇಳಿದರು.
ಪಕ್ಷ ಸೇರ್ಪಡೆ ವೇಳೆ ಕಾಂಗ್ರೆಸಿನ ಹಲವು ಮುಖಂಡರು ಇದ್ದರು.