ಮೈಸೂರು ಒಡೆಯರ ಕುಟುಂಬ ರಾಜ್ಯ ಮತ್ತು ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ. ಆದರೆ ಹೊಸ ರೈಲು ತರಲು ಯೋಗ್ಯತೆ ಇಲ್ಲದ ಬಿಜೆಪಿ ಸರ್ಕಾರ ಹಳೆ ರೈಲಿಗೆ ಪೈಂಟ್ ಹೊಡೆದು ಒಡೆಯರ್ ಹೆಸರು ಹಾಕುವ ಬದಲು ಹೊಸ ರೈಲು ತಂದು ಅವರ ಹೆಸರು ಹಾಕಿದರೆ ಒಡೆಯರ್ ಕುಟುಂಬಕ್ಕೆ ಗೌರವ ಕೊಟ್ಟಂತಾಗುತ್ತದೆ.
ಮಂಗಳೂರು (ಅ.10): ಮೈಸೂರು ಒಡೆಯರ ಕುಟುಂಬ ರಾಜ್ಯ ಮತ್ತು ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ. ಆದರೆ ಹೊಸ ರೈಲು ತರಲು ಯೋಗ್ಯತೆ ಇಲ್ಲದ ಬಿಜೆಪಿ ಸರ್ಕಾರ ಹಳೆ ರೈಲಿಗೆ ಪೈಂಟ್ ಹೊಡೆದು ಒಡೆಯರ್ ಹೆಸರು ಹಾಕುವ ಬದಲು ಹೊಸ ರೈಲು ತಂದು ಅವರ ಹೆಸರು ಹಾಕಿದರೆ ಒಡೆಯರ್ ಕುಟುಂಬಕ್ಕೆ ಗೌರವ ಕೊಟ್ಟಂತಾಗುತ್ತದೆ. ಬಿಜೆಪಿಯವರೇ, ನಿಮ್ಮ ರಾಜಕೀಯಕ್ಕಾಗಿ ಒಡೆಯರ್ ಕುಟುಂಬದ ಗೌರವಕ್ಕೆ ಧಕ್ಕೆ ತರಬೇಡಿ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.
ಬೆಂಗಳೂರು- ಮೈಸೂರು ನಡುವೆ ಸಂಚರಿಸುವ ‘ಟಿಪ್ಪು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್’ಗೆ ಒಡೆಯರ್ ಹೆಸರಿಟ್ಟಿರುವ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಟಿಪ್ಪು ಹೆಸರು ಈಗಾಗಲೇ ಲಂಡನ್ ಮ್ಯೂಸಿಯಂ ಮತ್ತು ಫ್ರಾನ್ಸ್ ದೇಶಗಳ ಸಹಿತ ವಿಶ್ವಾದ್ಯಂತ ಇದೆ. ಆದರೆ ಹಳೆ ರೈಲಿಗೆ ಹೊಸ ಹೆಸರಿಡುವ ಬದಲು ಕನಿಷ್ಠ ಹೊಸ ರೈಲು ತಂದು ಒಡೆಯರ್ ಹೆಸರಿಡಬೇಕಿತ್ತು. ಆದರೆ ಬಿಜೆಪಿ ತನ್ನ ಅಗ್ಗದ ರಾಜಕಾರಣಕ್ಕಾಗಿ ಹಳೆ ರೈಲಿಗೆ ಅವರ ಹೆಸರಿಟ್ಟಿದ್ದಾರೆ ಎಂದು ಆಕ್ಷೇಪಿಸಿದರು.
ಪರೇಶ್ ಮೇಸ್ತಾ ಸಾವು ಕೇಸ್: ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ, ಖಾದರ್
ಪುಲ್ವಾಮ ಚರ್ಚೆಯಾಗಲಿ: ರಾಹುಲ್ ಗಾಂಧಿ ಅವರ ‘ಭಾರತ್ ಜೋಡೊ’ ಯಾತ್ರೆಯ ಯಶಸ್ಸನ್ನು ಸಹಿಸದ ಬಿಜೆಪಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ರಾಹುಲ್ ಗಾಂಧಿಯ ಬಗ್ಗೆ ಇಲ್ಲಸಲ್ಲದ ಮಾತನಾಡುವವರು ಪುಲ್ವಾಮದಲ್ಲಿ 80ಕ್ಕೂ ಅಧಿಕ ಸೈನಿಕರು ಪಾಕಿಸ್ತಾನದ ಭಯೋತ್ಪಾದಕರಿಂದ ಹತ್ಯೆಗೀಡಾದಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಎಲ್ಲಿದ್ದರು ಎನ್ನುವುದನ್ನು ಬಹಿರಂಗಪಡಿಸಲಿ. 250 ಕೆಜಿ ಆರ್‌ಡಿಎಸ್ ತುಂಬಿದ್ದ ವಾಹನ ಎಲ್ಲ ಭದ್ರತೆಗಳನ್ನೂ ದಾಟಿ ಸೈನಿಕರ ಬಸ್ ಬರುವಾಗಲೇ ಅಲ್ಲಿಗೆ ಬಂದು ತಲುಪಿದ್ದು ಹೇಗೆ? ಈ ಬಗ್ಗೆ ಇನ್ನೂ ತನಿಖೆ ಆಗದಿರುವುದೇಕೆ? ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎನ್ನುವ ತನಿಖಾ ವರದಿಯನ್ನು ಬಹಿರಂಗಪಡಿಸಲಿ ಎಂದು ಖಾದರ್ ಆಗ್ರಹಿಸಿದರು.
ಗ್ರಾಮ ಪಂಚಾಯ್ತಿಗಳು ತಮ್ಮ ಅನುದಾನದಿಂದ ಧ್ವಜಸ್ತಂಭ ಕಟ್ಟಲು 3.5 ಲಕ್ಷ ರು. ಕಾಯ್ದಿರಿಸುವಂತೆ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ನಿರ್ದೇಶನ ನೀಡಿದೆ. ಅದರ ನಿರ್ಮಾಣವನ್ನೂ ಒಂದೇ ಕಂಪೆನಿಗೆ ಕೊಡಬೇಕೆನ್ನುವ ಫರ್ಮಾನು ಹೊರಡಿಸಿದೆ. ಧ್ವಜಸ್ತಂಭದಲ್ಲೂ 40 ಪರ್ಸೆಂಟ್ ಕಮಿಷನ್ ಮಾಡುವ ಉದ್ದೇಶವಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ಕಳ್ಳಿಗೆ ತಾರಾನಾಥ ಶೆಟ್ಟಿ, ಉಸ್ಮಾನ್ ಕಲ್ಲಾಪು, ಝಕರಿಯಾ ಮಲಾರ್, ಪಿಯುಸ್ ಮೊಂತೆರೊ ಮತ್ತಿತರರಿದ್ದರು.
ಸರ್ಕಾರವನ್ನು ಕೋಮುವಾದಿಗಳ ಮತ್ತು ಗೂಂಡಾಗಳ ಕೈಗೆ ಕೊಡಲಾಗಿದೆ: ಖಾದರ್ ಆಕ್ರೋಶ
ಆಂಬ್ಯುಲೆನ್ಸ್ ಸಿಬ್ಬಂದಿಗೆ ವೇತನ ಕೊಡಿ: ತುರ್ತು ಸೇವೆಯಾಗಿದ್ದ 108 ಆಂಬ್ಯುಲೆನ್ಸ್‌ಗೆ ಸೂಕ್ತ ಸಮಯದಲ್ಲಿ ಅನುದಾನ ಬಿಡುಗಡೆ ಮಾಡ ಕಾರಣ ಚಾಲಕ, ದಾದಿಯರಿಗೆ ಮೂರು ತಿಂಗಳ ವೇತನ ಸಿಕ್ಕಿಲ್ಲ. ಇದರಿಂದಾಗಿ ಜನರಿಗೆ ಅಗತ್ಯವಾಗಿರುವ ತುರ್ತು ಸೇವೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಖಾದರ್ ಆರೋಪಿಸಿದರು. ತಾನು ಆರೋಗ್ಯ ಸಚಿವನಾಗಿದ್ದಾಗ ಆರಂಭಿಸಿದ್ದ ಬೈಕ್ ಆಂಬ್ಯುಲೆನ್ಸ್ ಮಾದರಿಯನ್ನು ಬೇರೆ ರಾಜ್ಯ, ದೇಶಗಳು ಅಳವಡಿಸಿಕೊಂಡಿದ್ದರೂ ಬಿಜೆಪಿ ಸರ್ಕಾರ ಮಾತ್ರ ಅದನ್ನು ಸ್ಥಗಿತಗೊಳಿಸಿದೆ ಎಂದು ಖೇದ ವ್ಯಕ್ತಪಡಿಸಿದರು.