ನೀರು ಬಿಡುವ ವಿಚಾರವನ್ನು ಇದೀಗ ಬಿಜೆಪಿಯವರು ಎಲೆಕ್ಷನ್‌ಗಾಗಿ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯಿಂದ ಹೈ ಡ್ರಾಮ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಿರಾ (ಸೆ.10): ಮದಲೂರು ಕೆರೆಗೆ 2009ರಲ್ಲಿಯೇ 0.4 ಟಿಎಂಸಿ. ನೀರು ನಿಗದಿಯಾಗಿದ್ದು, ಕುಡಿಯುವ ನೀರಿಗೆ ಆದ್ಯತೆ ಮೇರೆಗೆ ನೀರನ್ನು ನೀಡಬಹುದೆಂದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ ಸರಕಾರಕ್ಕೆ ವರದಿಯನ್ನು ಕೊಟ್ಟಿದೆ. ಅದರ ಪ್ರಕಾರ ನೀರನ್ನು ಬಿಡುವುದನ್ನು ಬಿಟ್ಟು ಈಗ ಚುನಾವಣೆ ವಿಷಯವಾಗಿ ಬಿಜೆಪಿ ಪಕ್ಷದವರು ಬಳಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಕುಟುಕಿದರು.
ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಶಿರಾ ಭಾಗದ ಬಿಜೆಪಿ ಮುಖಂಡರು ಮುಖ್ಯಮಂತ್ರಿಗಳ ಬಳಿ ಮದಲೂರು ಕೆರೆಗೆ ನೀರು ಹರಿಸುವಂತೆ ಮನವಿ ಮಾಡಲು ಹೋಗಿದ್ದೀರಿ, ಸಂತೋಷದ ವಿಷಯ ಆದರೆ ಜಿಲ್ಲೆಯ ಉಸ್ತುವಾರಿ ಸಚಿವರು ನೀರು ಹರಿಸಲು ಅದರದೇ ಆದ ಸಾಂವಿಧಾನಿಕ ಸಮಿತಿ ಇದೆ. ಮುಖ್ಯಮಂತ್ರಿಗಳಿಗೆ ಇದರ ಅಧಿಕಾರ ಇಲ್ಲ ಎಂಬುವ ರೀತಿಯಲ್ಲಿ ಹೇಳಿದ್ದರೂ ಈಗ ಅವರೇನು ಮಾಡುತ್ತಾರೆ ಎಂದು ಪ್ರಶ್ನಿಸಿದರು.
undefined
ಇದು ರಾಜ್ಯ ಸರ್ಕಾರದ ದುಷ್ಟತನದ ಪರಮಾವಧಿ: ಸಿದ್ದರಾಮಯ್ಯ .
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾಮಾಂತರ ಅಧ್ಯಕ್ಷ ಬರಗೂರು ನಟರಾಜ್, ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಹೆಚ್.ಗುರುಮೂರ್ತಿ, ವಕೀಲರು ಹಾಗೂ ನೋಟರಿಯ ಹೆಚ್.ಸಿ.ಈರಣ್ಣ, ನಸ್ರುಲ್ಲಾ ಖಾನ್, ವಕೀಲರಾದ ಧರಣೇಶ್ ಗೌಡ, ಹೊನ್ನೇಶ್ ಗೌಡ, ಡಿ.ಸಿ.ಅಶೋಕ್ ಮತ್ತಿತರರು ಹಾಜರಿದ್ದರು.