ಸಿಎಂ ಬಿ ಎಸ್ ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ

Kannadaprabha News   | Asianet News
Published : Feb 25, 2021, 11:09 AM IST
ಸಿಎಂ ಬಿ ಎಸ್ ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ

ಸಾರಾಂಶ

ಮಾಜಿ ಸಿಎಂ ಸಿದ್ದರಾಮಯ್ಯ  ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಪತ್ರ ಬರೆದು ಈ ವಿಚಾರದ ಬಗ್ಗೆ ಉಲ್ಲೇಖ ಮಾಡಿದ್ದಾರೆ. 

ಶಿರಾ (ಫೆ.25):  ವಿಷಕಾರಿ ಮೇವು ಸೇವಿಸಿ ಶಿರಾ ತಾಲೂಕಿನ ಕುಂಟನಹಳ್ಳಿಯ ಚಿತ್ತಣ್ಣ ಎಂಬುವರ 200 ಕುರಿ ಸಾವು ಪ್ರಕರಣ ಸೇರಿದಂತೆ ಇಂತಹ ಎಲ್ಲ ಆಕಸ್ಮಿಕ ಜಾನುವಾರು ಸಾವು ಪ್ರಕರಣಗಳಿಗೆ ಕೂಡಲೇ ರಾಜ್ಯ ಸರ್ಕಾರ ಕನಿಷ್ಠ 5000 ರು.ನಿಂದ 10,000 ಸಾವಿರ ರು. ಪರಿಹಾರ ನೀಡಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯಗೆ ಆಹ್ವಾನಿಸಿದ BJP ಶಾಸಕ : 10 ಎಕರೆ ಜಮೀನು ನೀಡುವುದಾಗಿ ಹೇಳಿಕೆ ...

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಈ ಹಿಂದೆ ನಮ್ಮ ಸರ್ಕಾರ (ಕಾಂಗ್ರೆಸ್‌ ಸರ್ಕಾರ) ಇದ್ದಾಗ ಇಂತಹ ಆಕಸ್ಮಿಕ ದುರಂತಗಳನ್ನು ತಡೆದುಕೊಳ್ಳುವ ಶಕ್ತಿ ಬಡ ಪಶುಪಾಲಕರಿಗೆ, ರೈತರಿಗೆ ಇರಲಿ ಎಂದು ‘ಅನುಗ್ರಹ’ ಯೋಜನೆ ಜಾರಿಗೆ ತಂದಿದ್ದೆವು ಅದನ್ನು ಈ ಸರ್ಕಾರ ನಿಲ್ಲಿಸಿದೆ ಎಂದು ಉಲ್ಲೇಖಿಸಿದ್ದಾರೆ. 

ಅಲ್ಲದೇ ಏಕಾಏಕಿ ಈ ಯೋಜನೆಯನ್ನು ನಿಲ್ಲಿಸಿ ಪಶು ಪಾಲಕರ ವಿರೋಧಿ ನಿಲುವು ತೆಗೆದುಕೊಂಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!