ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಈ ರೀತಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹೇಳಿದ್ದಾರೆ.
ದಾವಣಗೆರೆ (ಸೆ.16): ಕ್ಯಾಸಿನೋಗೆ ಹೋದವರೆಲ್ಲಾ ಡ್ರಗ್ಸ್ ಸೇವಿಸಲ್ಲ, ಅಲ್ಲಿಗೆ ಹೋದವರೆಲ್ಲಾ ದುಡ್ಡು ಕಳೆದುಕೊಂಡು ಬರಬೇಕಷ್ಟೇ ಎಂದು ದಾವಣಗೆರೆ ದಕ್ಷಿಣ ಶಾಸಕ, ಕಾಂಗ್ರೆಸ್ ಹಿರಿಯ ನಾಯಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಸಿನೋಗಳಲ್ಲಿ ಜೂಜಾಟ ನಡೆಯುತ್ತದೆ. ಅಲ್ಲಿಗೆ ಹೋದವರೆಲ್ಲಾ ಡ್ರಗ್ಸ್ ಸೇವಿಸುವುದಿಲ್ಲ. ಜೂಜಾಡಲು ಹೋದವರು ಹಣ ಕಳೆದುಕೊಂಡು ಬರುತ್ತಾರೆ ಅಷ್ಟೇ ಎಂದರು.
ಡ್ರಗ್ ಮಾಫಿಯಾ : ಆದಿತ್ಯ ಆಳ್ವಾ ಮ್ಯಾನೇಜರ್ ಅರೆಸ್ಟ್ ..
ಜೂಜಾಟದ ಕ್ಯಾಸಿನೋ ನಡೆಸಿದವರಿಗೆ ಲಾಭವೇ ಹೊರತು, ಆಡಿದವನಿಗೆ ಅಲ್ಲ. ಸಿನಿಮಾ ನಟಿಯರ ಫೋಟೋ ತೆಗೆಸಿಕೊಂಡವರು, ಕುಣಿದವರೆಲ್ಲಾ ಡ್ರಗ್ಸ್ ವ್ಯಸನಿಗಳಲ್ಲ. ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದು ಅವರು ರಾಜ್ಯ, ದೇಶದಲ್ಲಿ ಹರಡಿರುವ ಡ್ರಗ್ಸ್ ಜಾಲದ ಬಗ್ಗೆ ಶಾಮನೂರು ಪ್ರತಿಕ್ರಿಯಿಸಿದರು.