ಹುಣಸೋಡು ಸ್ಫೋಟ ಪ್ರಕರಣ : ಕ್ರಷರ್‌ ಪರವಾನಗಿ ರದ್ದು

By Kannadaprabha NewsFirst Published Jan 31, 2021, 7:09 AM IST
Highlights

ಶಿವಮೊಗ್ಗದ ಹುಣಸೋಡಿನಲ್ಲಿ ನಡೆದ ಮಹಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಪರವಾನಗಿಯನ್ನು ರದ್ದು ಮಾಡಿ ಜಿಲ್ಲಾಡಳಿತ ಆದೇಶ ನೀಡಿದೆ. 6 ಜನರ ಸಾವಿಗೆ ಕಾರಣವಾದ ಕ್ರಶರ್‌ನ್ನು ಈಗ ಮುಚ್ಚಲಾಗಿದೆ. 

ಶಿವಮೊಗ್ಗ (ಜ.31):  ತಾಲೂಕಿನ ಹುಣಸೋಡು ಕಲ್ಲು ಗಣಿ ಸ್ಫೋಟದ ಹಿನ್ನೆಲೆ ಸ್ಫೋಟ ನಡೆದ ಎಸ್‌.ಎಸ್‌ ಕ್ರಷರ್‌ ಪರವಾನಗಿಯನ್ನು ಜಿಲ್ಲಾಧಿಕಾರಿ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

ತಾಲೂಕಿನ ಕಲ್ಲುಗಂಗೂರು ಸ.ನಂ.2ರಲ್ಲಿ ಸುಧಾಕರ್‌ ಎಂಬುವರ ಮಾಲಿಕತ್ವದ ಎಸ್‌.ಎಸ್‌ ಕ್ರಷರ್‌ ಕಾರ್ಯನಿರ್ವಹಿಸುತ್ತಿದ್ದು, ಈ ಪರವಾನಗಿ ಪಡೆದ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಸ್ಫೋಟಕ ವಸ್ತುಗಳನ್ನು ತರಿಸಲಾಗಿತ್ತು. ಜೊತೆಗೆ ಇದೇ ಪ್ರದೇಶದಲ್ಲಿ ಕಲ್ಲುಗಣಿ ಕೂಡ ನಡೆಸಲಾಗುತ್ತಿತ್ತು ಎಂಬುದಕ್ಕೆ ಸ್ಥಳದಲ್ಲಿರುವ ಕಲ್ಲು ಗಣಿಗಾರಿಕೆ ಸಾಕ್ಷಿಯಾಗಿ ನಿಂತಿತ್ತು. ಇಲ್ಲಿಗೆ ತರಲಾದ ಸ್ಫೋಟಕ ವಸ್ತು ಸ್ಫೋಟಿಸಿ ಆರು ಜನ ಮೃತಪಟ್ಟು ವಿಶ್ವಮಟ್ಟದಲ್ಲಿ ಇದು ಸುದ್ದಿಯಾಗಿತ್ತು. ಸ್ವತಃ ಪ್ರಧಾನಿಗಳೇ ಈ ವಿಷಯದ ಕುರಿತು ಆಸಕ್ತಿ ವಹಿಸಿದ್ದರು.

ಗಣಿಗಾರಿಕೆ ನಡೆಸುವವರಿಗೆ ಸರ್ಕಾರದಿಂದ ತರಬೇತಿ ..

ಅಲ್ಲದೇ ಹಲವು ಆಯಾಮಗಳ ಕುರಿತು ತನಿಖೆ ನಡೆಸುತ್ತಿರುವ ಹೊತ್ತಿನಲ್ಲಿಯೇ ಸ್ಫೋಟ ನಡೆದ ಸ್ಥಳದ ಮಾಲಿಕತ್ವ ಹೊಂದಿದ ಎಸ್‌.ಎಸ್‌ ಕ್ರಷರ್‌ಗೆ ನೀಡಿದ ಪರವಾನಗಿಯನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ. ಇದರ ಬೆನ್ನಲ್ಲೇ ಇಲ್ಲಿ ಅಕ್ರಮ ಚಟುವಟಿಕೆ ನಡೆದಿತ್ತು ಎಂಬುದನ್ನೂ ಜಿಲ್ಲಾಡಳಿತ ಒಪ್ಪಿಕೊಂಡಂತಾಗಿದೆ. ಅವಿನಾಶ್‌ ಕುಲಕರ್ಣಿ ಮಾಲಿಕತ್ವದ ಜಮೀನನ್ನು ಸುಧಾಕರ್‌ ಎಂಬಾತ ಲೀಸ್‌ಗೆ ಪಡೆದು ಕಲ್ಲು ಕ್ವಾರಿ ಮತ್ತು ಕ್ರಷರ್‌ ನಡೆಸುತ್ತಿದ್ದಾರೆ.

click me!