Bengaluru: ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ವಿರುದ್ಧ ಪ್ರತಿಭಟಿಸುತ್ತೇವೆ: ರೆಡ್ಡಿ

By Kannadaprabha News  |  First Published Feb 3, 2022, 5:46 AM IST

*  ಬೆಂಗಳೂರಿಗೆ ಸ್ವತಃ ಸಿಎಂ ಉಸ್ತುವಾರಿಯಾಗಿದ್ದರೂ ಸ್ಪಂದಿಸುತ್ತಿಲ್ಲ
*  ಆರ್‌ಎಸ್‌ಎಸ್‌ ಕಚೇರಿಯಲ್ಲಿ ವಾರ್ಡ್‌ ಪುನರ್‌ವಿಂಗಡಣೆ
*  ನನ್ನ ಕ್ಷೇತ್ರದ ಫೈಲ್‌ಗಳು ವಿಧಾನಸೌಧದಲ್ಲಿ ಆರು ತಿಂಗಳಿನಿಂದ ಗೆದ್ದಲು ಹಿಡಿಯುತ್ತಿವೆ
 


ಬೆಂಗಳೂರು(ಫೆ.03):  ಬೆಂಗಳೂರಿನಲ್ಲಿ(Bengaluru) ಸರ್ಕಾರದ ನಿರ್ಲಕ್ಷ್ಯದಿಂದಾಗಿ ರಸ್ತೆಗುಂಡಿಗೆ 9 ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಕೂಡಲೇ ರಸ್ತೆ ಗುಂಡಿ ಮುಚ್ಚುವಂತೆ, ಬಿಬಿಎಂಪಿ(BBMP) ಪುನರ್‌ ವಿಂಗಡಣೆಯನ್ನು ಪಾರದರ್ಶಕವಾಗಿ ನಡೆಸುವಂತೆ ಹಾಗೂ ನಗರದಲ್ಲಿ ಟೋಯಿಂಗ್‌ ಕಿರುಕುಳ ನಿಲ್ಲಿಸುವಂತೆ ಆಗ್ರಹಿಸಿ ಶನಿವಾರ ಬಿಬಿಎಂಪಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ(Ramalinga Reddy) ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೈಕೋರ್ಟ್‌(High Court) ಸೂಚನೆ ಹೊರತಾಗಿಯೂ ಸರ್ಕಾರ ಹಾಗೂ ಬಿಬಿಎಂಪಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಿಲ್ಲ. ಮೊನ್ನೆ ಮೃತರಾದ ಶಾಲಾ ಶಿಕ್ಷಕಿ ಸೇರಿ ಈವರೆಗೆ 9 ಮಂದಿ ಬಲಿಯಾಗಿದ್ದಾರೆ. ಹೈಕೋರ್ಟ್‌ ಚಾಟಿ ಬೀಸಿದ್ದರೂ, ಗುಂಡಿ ಮುಚ್ಚದಿದ್ದರೆ ಎಂಜಿನಿಯರ್‌ಗಳಿಗೆ ಜೈಲಿಗೆ ಹಾಕುತ್ತೇವೆ ಎಂದಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಬೆಂಗಳೂರು ನಗರಕ್ಕೆ ಸ್ವತಃ ಮುಖ್ಯಮಂತ್ರಿಗಳೇ(Chief Minister of Karnataka) ಉಸ್ತುವಾರಿಯಾಗಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಪ್ರತಿಭಟನೆಗೆ(Protest) ನಿರ್ಧರಿಸಿದ್ದೇವೆ ಎಂದರು.

Latest Videos

undefined

Karnataka Politics: ಸಚಿವ ಅಶ್ವತ್ಥರನ್ನು ಸಂಪುಟದಿಂದ ಕೈಬಿಡಿ: ರಾಮಲಿಂಗಾರೆಡ್ಡಿ ಆಗ್ರಹ

ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಎಲ್ಲ ಕಾಮಗಾರಿ ಕೆಲಸಗಳು ಹಿಂದೆ ಸಿದ್ದರಾಮಯ್ಯ(Siddaramaiah) ಅವರು ಮುಖ್ಯಮಂತ್ರಿ ಆಗಿದ್ದಾಗ ನೀಡಿದ್ದ .7 ಸಾವಿರ ಕೋಟಿ ಹಾಗೂ ಕುಮಾರಸ್ವಾಮಿ(HD Kumaraswamy) ಸರ್ಕಾರ ನೀಡಿದ್ದ .1 ಸಾವಿರ ಕೋಟಿ ವೆಚ್ಚದಲ್ಲಿ ನಡೆಯುತ್ತಿವೆ. ನನ್ನ ಕ್ಷೇತ್ರದ ಫೈಲ್‌ಗಳು ವಿಧಾನಸೌಧದಲ್ಲಿ ಕಳೆದ ಆರು ತಿಂಗಳಿನಿಂದ ಗೆದ್ದಲು ಹಿಡಿಯುತ್ತಿವೆ ಎಂದು ಕಿಡಿಕಾರಿದರು.

ಈ ವೇಳೆ ವಿಧಾನಪರಿಷತ್‌ ಮಾಜಿ ಸದಸ್ಯ ಪಿ.ಆರ್‌.ರಮೇಶ್‌, ಮಾಜಿ ಮೇಯರ್‌ಗಳಾದ ರಾಮಚಂದ್ರಪ್ಪ, ಮಂಜುನಾಥರೆಡ್ಡಿ, ಸಂಪತ್‌ರಾಜ್‌, ಬೆಂಗಳೂರು ಕಾಂಗ್ರೆಸ್‌ ಸಮಿತಿಗಳ ಪದಾಧಿಕಾರಿಗಳು ಹಾಜರಿದ್ದರು.

ಆರ್‌ಎಸ್‌ಎಸ್‌ ಕಚೇರಿಯಲ್ಲಿ ವಾರ್ಡ್‌ ಪುನರ್‌ವಿಂಗಡಣೆ

ಮುಂದಿನ ಸೆಪ್ಟೆಂಬರ್‌ ಬಂದರೆ ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತ ಆರಂಭವಾಗಿ ಎರಡು ವರ್ಷ ಪೂರ್ಣಗೊಳ್ಳುತ್ತದೆ. ಕ್ಷೇತ್ರ ಪುನರ್‌ವಿಂಗಡಣೆ ಹೆಸರಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಡಿಲಿಮಿಟೇಷನ್‌ ಆಯೋಗ ರಚಿಸಿದ್ದಾರೆ. ಆದರೆ, ಕ್ಷೇತ್ರ ಪುನರ್‌ ವಿಂಗಡಣೆ ಕುರಿತು ಯಾವೊಂದು ಮಾಹಿತಿಯೂ ಅವರ ಬಳಿ ಇಲ್ಲ. ಮುಂಬರುವ ಚುನಾವಣೆ(Election) ಗೆಲ್ಲಲು ಬಿಜೆಪಿ ಶಾಸಕರು, ಕಾಂಗ್ರೆಸ್‌(Congress) ಶಾಸಕರಿರುವ ಕ್ಷೇತ್ರಗಳಲ್ಲಿ ಬಿಜೆಪಿ(BJP)  ಸಂಸದರು ಹಾಗೂ ಆರ್‌ಎಸ್‌ಎಸ್‌ ಕಚೇರಿಯಲ್ಲಿನ ಆರ್‌ಎಸ್‌ಎಸ್‌(RSS) ಮುಖಂಡರು ಕ್ಷೇತ್ರ ಪುನರ್‌ವಿಂಗಡಣೆ ಮಾಡುತ್ತಿದ್ದಾರೆ. ಇದು ವೈಜ್ಞಾನಿಕವಾಗಿ ನಡೆಯದೇ ಪಕ್ಷಪಾತ ಧೋರಣೆಯಿಂದ ನಡೆಯುತ್ತಿರುವ ವಿರುದ್ಧವೂ ಹೋರಾಟ ಮಾಡುತ್ತೇವೆ ಎಂದು ಇದೇ ವೇಳೆ ರಾಮಲಿಂಗಾರೆಡ್ಡಿ ತಿಳಿಸಿದರು.

Vidhan Parishat Election: ಯುವಕರಲ್ಲಿ ವಿಷ ಬೀಜ ಬಿತ್ತುತ್ತಿರುವ ಪ್ರಧಾನಿ ಮೋದಿ: ರಾಮಲಿಂಗಾರೆಡ್ಡಿ

ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಎಚ್ಚರಿಕೆ

ಬೆಂಗಳೂರಿನಲ್ಲಿ (Bengaluru) ಭಾರಿ ಮಳೆಗೆ (Heavy Rain) ಅಪಾರ ಹಾನಿಯಾಗಿದೆ.  ಬಿಜೆಪಿ ಶಾಸಕರು (BJP MLA) ಇರುವ ಕ್ಷೇತ್ರಗಳು ಮಾತ್ರ ಬೆಂಗಳೂರು ಅಂತ ಸಿಎಂ ಅಂದುಕೊಂಡಿದ್ದಾರೆ. ಬೆಂಗಳೂರು  28 ವಿಧಾನ ಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಇದನ್ನು ಗಮನದಲ್ಲಿ ಇಟ್ಟುಕೊಳ್ಳಲಿ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅಸಮಾಧಾನ ಹೊರಹಾಕಿದ್ದರು.  ಜ. 6 ರಂದು ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಸರ್ಕಾರ ತಾರತಮ್ಯದ ಬಗ್ಗೆ ವಾಕ್ ಪ್ರಹಾರ ನಡೆಸಿದ್ದರು.

ಕ್ಯಾಬಿನೆಟ್ ನಲ್ಲಿ (Karnataka Cabinet) 1500 ಕೋಟಿ ರು. ಮಂಜೂರಿಗೆ ಸಿಎಂ ಅವಕಾಶ ನೀಡಿದ್ದಾರೆ. ನನ್ನ ಕ್ಷೇತ್ರಕ್ಕೆ ಅಭಿವೃದ್ಧಿ ವಿಚಾರಕ್ಕೆ ಪತ್ರ ಬರೆದಿದ್ದೆ. 298 ಕೆಲಸಗಳಿಗೆ 1500 ಕೋಟಿ ರು. ಬಿಡುಗಡೆ ಮಾಡಿದ್ದಾರೆ.  ಇದರಲ್ಲಿ ಭಾರಿ ತಾರತಮ್ಯ ಮಾಡಿದ್ದಾರೆ.  ಕಾಂಗ್ರೆಸ್ ನ (Congress) ಒಂಬತ್ತು ಶಾಸಕರಿಗೆ 248 ಕೋಟಿ ರು. ಬಿಜೆಪಿ (BJP) 15 ಶಾಸಕರಿಗೆ 1100 ಕೋಟಿ ರು. ಕೊಟ್ಟಿದ್ದಾರೆ. ಜೆಡಿಎಸ್ (JDS) ಶಾಸಕರಿಗೆ 125 ಕೋಟಿ ಕೊಟ್ಟಿದ್ದಾರೆ. ಈ ಮೂಲಕ ಅನುದಾನ ಹಂಚಿಕೆಯಲ್ಲಿ ಸಿಎಂ ಭಾರಿ ತಾರತಮ್ಯ ಮಾಡಿದ್ದಾರೆ  ಎಂದರು.

click me!