
ಚಿಕ್ಕಬಳ್ಳಾಪುರ: ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನ ಒಂದೊಂದೇ ಕರಾಳ ಮುಖ ಬಯಲಾಗುತ್ತಿದೆ. ತನಗೆ ಮದುವೆ ಮಾಡಿದ್ದ ಪುರೋಹಿತನಿಗೂ ಲಾಂಗ್ ತೋರಿಸಿ ಹಲ್ಲೆ ಮಾಡಿದ್ದ ಎಂಬ ವಿಚಾರ ತಿಳಿದುಬಂದಿದೆ.
ಈ ಸಂಬಂಧ ಸ್ವತಃ ಪುರೋಹಿತ ಮಣಿಕಂಠ ಶರ್ಮಾ ವಿಡಿಯೋ ಮಾಡಿ ಗಂಭೀರ ಆರೋಪ ಮಾಡಿದ್ದಾರೆ. ‘ರಾಜೀವ್ ಗೌಡನನ್ನು ನಂಬಿ ನಾನು ಅವನಿಗೆ ಸಾಕಷ್ಟು ಪ್ರಚಾರವನ್ನು ಕೊಟ್ಟೆ. ಆದರೆ, ಈ ವ್ಯಕ್ತಿ ಸರಿಯಿಲ್ಲ ಎಂದು ಭಗವಂತ ಪ್ರೇರಣೆ ಕೊಟ್ಟಿದ್ದ.
4 ವರ್ಷಗಳ ಹಿಂದೆ ರಾಜೀವ್ ಸೈಟ್ ಖರೀದಿ ಮಾಡುವ ವೇಳೆ 420 ಕೆಲಸ ಮಾಡಿದ್ದ, ಯಾರು ಸೈಟ್ ಖರೀದಿ ಮಾಡಬೇಡಿ ಎಂದು ಹೇಳಿದ್ದೆ, ನನ್ನ ವ್ಯವಹಾರಕ್ಕೆ ಅಡ್ಡ ಬರುತ್ತಿಯಾ ಎಂದು ಎಂದು ನನ್ನ ಮೇಲೆ ಹಲ್ಲೆ ಮಾಡಿಸಿದ್ದ’ ಎಂದು ಮಣಿಕಂಠ ಶರ್ಮಾ ಆರೋಪಿಸಿದ್ದಾರೆ.