ಕಾಂಗ್ರೆಸ್‌ಗೆ 136 ಸೀಟು: ಉರುಳು ಸೇವೆ ನಡೆಸಿ ಹರಕೆ ಪೂರೈಸಿದ 'ಕೈ' ನಾಯಕ ಕೃಷ್ಣ ಮೂರ್ತಿ

By Girish Goudar  |  First Published May 20, 2023, 1:18 PM IST

ಉಡುಪಿ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷೇತರನಾಗಿ ಸ್ಪರ್ಧಿಸಿ ನಂತರ ಸೈಲೆಂಟ್ ಆಗಿರುವ ನಾಯಕ ಕೃಷ್ಣ ಮೂರ್ತಿ ಆಚಾರ್ಯ ಉಡುಪಿಯ ಕನ್ನರ್ಪಾಡಿ ಜಯದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉರುಳು ಸೇವೆ ನಡೆಸಿದರು. 


ಉಡುಪಿ(ಮೇ.20): ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು ಅಧಿಕಾರ ಸ್ವೀಕಾರ ಸಮಾರಂಭ ನಡೆದಿದೆ. ಇದೇ ಸಂಧರ್ಭದಲ್ಲಿ ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಹರಕೆಯನ್ನು ಪೂರೈಸಲು ಉರುಳು ಸೇವೆ ಮಾಡಿದ್ದಾರೆ. 

ಉಡುಪಿ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷೇತರನಾಗಿ ಸ್ಪರ್ಧಿಸಿ ನಂತರ ಸೈಲೆಂಟ್ ಆಗಿರುವ ನಾಯಕ ಕೃಷ್ಣ ಮೂರ್ತಿ ಆಚಾರ್ಯ ಉಡುಪಿಯ ಕನ್ನರ್ಪಾಡಿ ಜಯದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉರುಳು ಸೇವೆ ನಡೆಸಿದರು. ಕಾಂಗ್ರೆಸ್ ಪಕ್ಷಕ್ಕೆ 130- 136 ಸೀಟ್ ಗೆದ್ದು ಬಹುಮತದೊಂದಿಗೆ ಸರಕಾರ ರಚನೆ ಮಾಡುವಂತಾದರೆ 5 ಶುಕ್ರವಾರ ಉರುಳು ಸೇವೆ ನಡೆಸಿ, 9 ಅಟ್ಟೆ ಮಲ್ಲಿಗೆಯನ್ನು ಜಯದುರ್ಗಾಪರಮೇಶ್ವರಿಗೆ ಸಮರ್ಪಿಸುತ್ತೇನೆ  ಎಂದು ಹರಕೆ ಹೊತ್ತಿದ್ದರು.

Tap to resize

Latest Videos

undefined

ರಾಜ್ಯವನ್ನು ಕೇರಳ, ಪ.ಬಂಗಾಳ ಮಾಡಲು ಬಿಡುವುದಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ಆ ಪ್ರಕಾರ  ಶುಕ್ರವಾರ ಮೇ 19 ರಂದು ಉರುಳು ಸೇವೆಗೆ ಚಾಲನೆ ನೀಡಿದ್ದಾರೆ.ಮೇ 19 ರಿಂದ ಪ್ರಾರಂಭಿಸಿ ಮುಂದಿನ 5 ಶುಕ್ರವಾರದ ವರೆಗೆ ಕೃಷ್ಣ ಮೂರ್ತಿ ಆಚಾರ್ಯ ಉರುಳು ಸೇವೆ ನಡೆಸಿ, ಶ್ರೀ ದೇವಿಗೆ 9 ಅಟ್ಟೆ ಮಲ್ಲಿಗೆಯನ್ನು ಸಮರ್ಪಣೆ ಮಾಡಲಿದ್ದಾರೆ. 

ಉರುಳು ಸೇವೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೃಷ್ಣ ಮೂರ್ತಿ ಆಚಾರ್ಯ ಅವರು, ಚುನಾವಣೆ ಸಂಧರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರಕ್ಕೆ 130 ರಿಂದ 136 ಸೀಟ್ ಗೆದ್ದು ಬಹುಮತದ ಸರಕಾರ ರಚಿಸುವ ಅವಕಾಶ ಒದಗಿ ಬಂದಲ್ಲಿ ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ಅಮ್ಮನಿಗೆ 5 ಶುಕ್ರವಾರದಂದು ಉರುಳು ಸೇವೆ ನಡೆಸಿ 9 ಅಟ್ಟೆ ಮಲ್ಲಿಗೆಯನ್ನು ಸಮರ್ಪಣೆ ಮಾಡುತ್ತೆನೆ ಎಂದು ಹರಕೆ ಹೊತ್ತಿದ್ದೆ.  ಅಮ್ಮ ಜಯದುರ್ಗಾಪರಮೇಶ್ವರಿ ಸರ್ವ ಜನರ ಪ್ರಾರ್ಥನೆಯನ್ನು ಮನ್ನಿಸಿದ್ದಾಳೆ. ನನ್ನ ಪ್ರಾರ್ಥನೆಯನ್ನು ಕೂಡಾ ಮನ್ನಿಸಿ ಈ ಬಾರಿ ಬಹುಮತದ ಸೀಟ್ ಗೆದ್ದು ಕಾಂಗ್ರೆಸ್ ಪಕ್ಷ ಸರಕಾರ ರಚನೆ ಮಾಡುವಂತೆ ಮಾಡಿದ್ದಾಳೆ. ಈಗ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಗ್ಯಾರಂಟಿಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲು ಸಹಕಾರಿಯಾಗಲಿದೆ ಅತ ತಿಳಿಸಿದ್ದಾರೆ. 

112 - 115  ಸೀಟ್ ಬಂದರೂ ಕೂಡಾ ಬಿಜೆಪಿ ಪಕ್ಷ ಅನೈತಿಕವಾಗಿ ಕಳೆದ ಬಾರಿ ಸರಕಾರ ರಚನೆ ಮಾಡಿರುವುದನ್ನು ನೋಡಿದ್ದೇವೆ. ಆದುದರಿಂದ ಈ ಬಾರಿ ಸ್ವಷ್ಟವಾಗಿ ಬಹುಮತ ಬರಲು ಪ್ರಾರ್ಥಿಸಿದ್ದು, ಪ್ರಾರ್ಥನೆ ಸಿದ್ದಿಸಿದ್ದು ಈಗ ಹರಕೆಯನ್ನು ಸಂಪೂರ್ಣ ಗೊಳಿಸುತ್ತೆನೆ ಎಂದರು. ಈ ಸಂಧರ್ಭದಲ್ಲಿ ಹಲವಾರು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.

click me!