ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ಎಂ ರಾಜಣ್ಣ ನೇತೃತ್ವದಲ್ಲಿ ಮಾಜಿ ಕಾಂಗ್ರೆಸ್ ಶಾಸಕ ರಾಜಣ್ಣ ಬಿಜೆಪಿ ಸೇರ್ಪಡೆಯಾದರು. ರಾಜ್ಯದಲ್ಲಿ ರಾಜಕೀಯ ಬಿರುಸುಗೊಂಡ ಬೆನ್ನಲ್ಲೇ ಪಕ್ಷಾಂತರವೂ ಜೋರಾಗಿದೆ.
ಚಿಕ್ಕಬಳ್ಳಾಪುರ (ಡಿ.07): ಜಿಲ್ಲೆಯ ಶಿಡ್ಲಘಟ್ಟಕ್ಷೇತ್ರದ ಮಾಜಿ ಶಾಸಕ ಎಂ.ರಾಜಣ್ಣ, ಭಾನುವಾರ 30 ವರ್ಷಗಳ ಕಾಲದ ತಮ್ಮ ಜನತಾ ಪರಿವಾರದ ನಂಟು ಕಳಚಿಕೊಂಡು ತೆನೆ ಇಳಿಸುವ ಮೂಲಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಮ್ಮುಖದಲ್ಲಿ ಕಮಲ ಬಾವುಟ ಹಿಡಿದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಮಾಜಿ ಶಾಸಕ ದಿ.ಎಸ್.ಮುನಿಸ್ವಾಮಿ ಅವರ ಪುತ್ರ ಜಿಪಂ ಸದಸ್ಯ ಡಾ.ಎಂ.ಜಯರಾಮರೆಡ್ಡಿ ಮತ್ತಿತರರು ಬಿಜೆಪಿ ಸೇರಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸುಧಾಕರ್, ಇದು ಬರೀ ಟ್ರೈಲರ್ ಅಷ್ಟೇ ಸಿನಿಮಾ ಇನ್ನೂ ಬಾಕಿದೆ. 2023ಕ್ಕೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆಲ್ಲುವ ಗುರಿ ನಮ್ಮದು. ರಾಜಣ್ಣ ಯಾವುದೇ ಷರತ್ತು ಇಲ್ಲದೇ ಬೇಷರತ್ತಾಗಿ ಬಿಜೆಪಿ ಸೇರಿದ್ದಾರೆ ಎಂದರು.
'ಅದು ಅನೈತಿಕ ಸಂಬಂಧ : ಎಷ್ಟ್ ಸಾರಿ ಮದುವೆ, ಡಿವೋರ್ಸ್ ಆಗೋದು' : ಸುಧಾಕರ್ ಟಾಂಗ್ ...
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಮಾಜಿ ಶಾಸಕ ರಾಜಣ್ಣ, ಜೆಡಿಎಸ್ ರಾಜ್ಯದಲ್ಲಿ ಮುಳಗುತ್ತಿರುವ ಹಡುಗು, ಕಳೆದ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ನನಗೆ ಟಿಕೆಟ್ ಕೊಡದೇ ಬೆನ್ನಿಗೆ ಚೂರಿ ಹಾಕಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ, ಮೋದಿ ನಾಯಕತ್ವ ಮೆಚ್ಚಿ ಬಿಜೆಪಿ ಸೇರಿದ್ದೇನೆ ಎಂದು ತಿಳಿಸಿದರು.