'ರಾಜ್ಯದಲ್ಲಿ ಸಿಎಂ ಯಾರು? ಬಿಎಸ್‌ವೈ ಇಲ್ಲ ಅವರ ಮಗನಾ?'

By Kannadaprabha NewsFirst Published Jul 19, 2021, 2:52 PM IST
Highlights

* ಯಾವ ರಾಜ್ಯ ಸರ್ಕಾರವೂ ಇಂತಹ ದುಸ್ಥಿತಿಯ ಆಡಳಿತ ನಡೆಸುತ್ತಿಲ್ಲ
* ಮೋದಿ ಅಧಿಕಾರಕ್ಕೆ ಬಂದ್ಮೇಲೆ ಬಂಗ್ಲಾದೇಶದ ಅಭಿವೃದ್ದಿಗಿಂತಲೂ ನಾವು ಹಿಂದೆ ಬಿದ್ದಿದ್ದೇವೆ
* ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ 
 

ಹುಣಸೂರು(ಜು.19): ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಈ ರೀತಿ, ದೇಶದ ಯಾವುದೇ ರಾಜ್ಯದಲ್ಲಿ ಯಾವುದೇ ಪಕ್ಷ ಇಂತಹ ದುಸ್ಥಿತಿಯಲ್ಲಿ ಆಡಳಿತ ನಡೆಸುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ಕಿಡಿಕಾರಿದ್ದಾರೆ. 

ಪಟ್ಟಣದ ಶಾಸಕರ ಕಚೇರಿಯಲ್ಲಿ ಭಾನುವಾರ ಶಾಸಕ ಎಚ್‌.ಪಿ. ಮಂಜುನಾಥ್‌ ಅವರ ಹುಟ್ಟುಹಬ್ಬ ಅಂಗವಾಗಿ ನೀಡಿದ್ದ ಪತ್ರಿಕಾ ವಿತರಕರು ಹಾಗೂ ಏಜೆಂಟರು, ವರದಿಗಾರರಿಗೆ ಜರ್ಕಿನ್‌ ವಿತರಣೆ ಮಾಡಿದ ನಂತರ ಕಾವೇರಿ ನೀರಿಗಾಗಿ ಹೋರಾಟ ನಡೆಸಿದ, ಮಾಜಿ ಸಂಸದ ಜಿ. ಮಾದೇಗೌಡರ ನಿಧನಕ್ಕೆ ಸಂತಾಪ ಸೂಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಭಿವೃದ್ದಿ ಮಾಡುತ್ತಿಲ್ಲ, ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಪಕ್ಷದ ರಾಷ್ಟ್ರ ಮತ್ತು ರಾಜ್ಯದ ನಾಯಕರು ನನ್ನನ್ನು ರಾಜ್ಯದ ಕೆಪಿಸಿಸಿಗೆ ಕಾಯಾಧ್ಯಕ್ಷ ಸ್ಥಾನ ನೀಡಿ 9 ಮೈಸೂರು ಪ್ರಾಂತ್ಯದ ಜಿಲ್ಲೆಗಳ ಹೊಣೆ ನೀಡಿದ್ದಾರೆ. ಪಕ್ಷ ಸಂಘಟನೆ ಮೂಲಕ ರಾಜ್ಯದಲ್ಲಿ ಭ್ರಷ್ಟಚಾರದಲ್ಲಿ ತೊಗಿಡುವ ಬಿಜೆಪಿ ಸರ್ಕಾರವನ್ನು ತೆಗೆದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

ಕೇಂದ್ರದಲ್ಲಿ ಬಿಜೆಪಿಯ ಮೋದಿ ಸರ್ಕಾರ ಬಂದ ಮೇಲೆ ಸುಧಾರಣೆ ಮತ್ತು ಅಡಳಿತ ಬಗ್ಗೆ ಮತ್ತು ಪ್ರತಿ ವ್ಯಕ್ತಿಯ ತಲಾ ಆದಾಯ ಎಷ್ಟಿತ್ತು? ಎಂದು ಘೋಷಣೆ ಮಾಡಲಿ? ಜೆಡಿಪಿ ಬಿದ್ದು ಹೋಗಿದೆ, ಅಭಿವೃದ್ದಿ ಕುಂಟಿತವಾಗಿದೆ, ಉದ್ಯಮಿಗಳು ಮತ್ತು ಶ್ರೀಮಂತರ ಪಾಲಾಗಿದೆ. ಬಂಗ್ಲಾದೇಶದ ಅಭಿವೃದ್ದಿಗಿಂತಲೂ ನಾವು ಹಿಂದೆ ಬಿದ್ದಿದ್ದೇವೆ ಎಂದರೆ ನಮ್ಮ ದೇಶದ ಸ್ಥಿತಿ ಎಲ್ಲಿಗೆ ತಲುಪಿದೆ ಎಂದು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.

ಚುನಾವಣೆ ಸ್ಪರ್ಧೆ ಮಾಡ್ತಾರಾ ಜಿಟಿಡಿ ಪುತ್ರ : ಬೆಂಬಲಿತರ ಸ್ಪರ್ಧೆಗೆ ಯಾವ ಪಕ್ಷ ..?

ಕಾಂಗ್ರೆಸ್‌ ಕಚೇರಿಗೆ ಭೇಟಿ

ಕೆಪಿಸಿಸಿ ಕಾಯಾಧ್ಯಕ್ಷ ಆರ್‌. ಧ್ರುವನಾರಾಯಣ್‌, ಹುಣಸೂರು ಬ್ಲಾಕ್‌ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಬಗ್ಗೆ ಸಭೆ ನಡೆಸಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ ಎಂದರು.

ರಾಜು ಕೆಪಿಸಿಸಿ ವತಿಯಿಂದ ಆರೋಗ್ಯ ಹಸ್ತದ ಎಂಬ ಹೆಸರಿನಡಿ ಹೆಲ್ತ್‌ಕಿಟ್‌ ನೀಡಲಾಗಿತ್ತು. ನಂತರ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಸೀಲ್ಡ್‌ ಡೌನ್‌ ಗ್ರಾಮಗಳಿಗೆ ಕಾಂಗ್ರೆಸ್‌ ಆಶ್ರಯ ಎಂಬುದಾಗಿ ಸಹಕಾರ ನೀಡಿದ್ದೆವು. ಕೋವಿಡ್‌ನಿಂದ ಸತ್ತವರಿಗೆ ಶವ ಸಂಸ್ಕಾರ ದಾಖಲೆಗಳ ಸಂಗ್ರಹ ಮಾಡಲು ನಮ್ಮ ಕಾಂಗ್ರೆಸ್‌ ಪಡೆ ಸೇವೆ ಸಲ್ಲಿಸುತ್ತಿದ್ದೇವೆ ಎಂದರು.

ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ

ರಾಜ್ಯದಲ್ಲಿ ಸೋನಿಯಾ ಗಾಂಧಿ ಮತ್ತು ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ ಯಾವುದೇ ಗೊಂದಲಗಳಿಲ್ಲ ಎಂದರು.

ಶಾಸಕ ಎಚ್‌.ಪಿ. ಮಂಜುನಾಥ್‌ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಕೇಂದ್ರಕ್ಕೆ 75 ವರ್ಷ ತುಂಬಿದವರಿಗೆ ಸರ್ಕಾರದ ಸಂಪುಟದಲ್ಲಿ ಸ್ಥಾನ ಇಲ್ಲ ಎಂದು ಕೇಂದ್ರ ಸರ್ಕಾರ ಹವರನ್ನು ನಿವೃತ್ತರನ್ನಾಗಿಸಿದೆ. ರಾಜ್ಯದಲ್ಲೂ ಕೂಡ ಆದೇ ನಿಯಾಮವಿದೆ. ಆದರೆ ಯಡಿಯೂರಪ್ಪ ಅವರು ಒಬ್ಬ ದೊಡ್ಡ ಸಮುದಾಯದ ನಾಯಕನೆಂದು ವಿನಾಯಿತಿ ನೀಡಿ ಎರಡು ವರ್ಷ ಅಧಿಕಾರ ನೀಡಿದ್ದರು. ಜುಲೈ 26ಕ್ಕೆ ಮುಗಿಯುತ್ತಿದೆ ಈಗ ಮತ್ತೇ ರಿನೀವಲ್‌ ಮಾಡಲು ದೆಹಲಿಗೆ ತೆರಳಿ ಕೇಂದ್ರದ ನಾಯಕರನ್ನು ಸರಿ ಮಾಡಿಕೊಂಡಿರುವುದು ಒಂದು ದೊಡ್ಡ ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

ಮೂರು ಪ್ರಶ್ನೆಗಳಿಗೆ ಉತ್ತರ ನೀಡಿದರೆ ರಾಜೀನಾಮೆ

ರಾಜ್ಯದಲ್ಲಿ ಸಿಎಂ ಯಾರು? ಬಿಎಸ್‌ವೈ ಇಲ್ಲ ಅವರ ಮಗನಾ ಹಾಗೂ ಇಲಾಖೆಗಳನ್ನು ಮಾರಿ ಹಣ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ನಾಯಕ ಯಾರು? ರಾಜ್ಯದಲ್ಲಿ ಎರಡು ವರ್ಷ ಲೂಟಿ ಮಾಡಿ ತುಂಬಿಸಲಾಗಿದೆ, ಮುಂದಿನ ಎರಡು ವರ್ಷದೊಳಗೆ ರಾಜ್ಯವನ್ನು ಕ್ಲೀನ್‌ ಚಿಟ್‌ ಮಾಡುತ್ತೇನೆ ಎನ್ನುತ್ತಿರುವ ಯಡಿಯೂರಪ್ಪ ಅವರು ಏನನ್ನು ಕ್ಲೀನ್‌ ಮಾಡುತ್ತಾರೆ? ಎಂಬ ಬಗ್ಗೆ ತಿಳಿಸಿದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಎಚ್‌.ಪಿ. ಮಂಜುನಾಥ್‌ ಘೋಷಿಸಿದರು.

ನಗರಸಭೆ ಅಧ್ಯಕ್ಷೆ ಅನುಷಾ ರಾಘು, ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ್‌, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಲ್ಕುಣಿಕೆ, ಟಿ.ವಿ. ನಾರಾಯಣ್‌, ದೇವರಾಜ್‌, ಅಸ್ವಾಳು ಕೆಂಪೇಗೌಡ ಇದ್ದರು.
 

click me!