* ಬಿಜೆಪಿ ಸರ್ಕಾರಗಳನ್ನು ಜನತೆ ಬೇರು ಸಮೇತ ಕಿತ್ತುಹಾಕುವ ಕಾಲ ದೂರವಿಲ್ಲ
* ಯುವಕರನ್ನು ನಿರುದ್ಯೋಗಿಗಳಾಗುವಂತೆ ಮಾಡಿದ ಪ್ರಧಾನಿ ಮೋದಿ
* ಜನರ ಬದುಕಿನ ಜೊತೆ ಬಿಜೆಪಿಯ ಚೆಲ್ಲಾಟ ಸರಿಯಲ್ಲ
ಯಲಬುರ್ಗಾ(ಸೆ.30): ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು ಇಂಧನ ಬೆಲೆ ಮತ್ತೆ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್(Congress) ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದ್ದಾರೆ.
ಪಟ್ಟಣದ ಕಾಂಗ್ರೆಸ್ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲಬಹುದ್ದೂರ ಶಾಸ್ತ್ರಿಯವರ ಜಯಂತಿ ಆಚರಣೆ ದಿನದಂದು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮವಿದ್ದು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ವಿವಿಧ ಘಟಕಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
undefined
ಬಿಜೆಪಿ(BJP) ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಯುವಕರಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದ ಪ್ರಧಾನಿ ಮೋದಿ ಅವರು ಸುಳ್ಳು ಹೇಳುವ ಮೂಲಕ ಮತ್ತಷ್ಟು ಯುವಕರನ್ನು ನಿರುದ್ಯೋಗಿಗಳಾಗುವಂತೆ ಮಾಡಿದ್ದಾರೆ. ವಿದ್ಯುತ್ಖಾಸಗಿಕರಣ, ಪಡಿತರ ಕಾರ್ಡ್ರದ್ಧತಿ ಸೇರಿದಂತೆ ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇವರಿಂದ ದೇಶ ಉದ್ಧಾರವಾಗಲೂ ಸಾಧ್ಯವಿಲ್ಲ. ಕೇಂದ್ರ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳನ್ನು ಜನತೆ ಬೇರು ಸಮೇತ ಕಿತ್ತುಹಾಕುವ ಕಾಲ ದೂರವಿಲ್ಲ ಎಂದು ಆರೋಪಿಸಿದರು.
'ಪ್ರಧಾನಿ ಮೋದಿಯಿಂದ ಭಾರತದ ಪರಿಕಲ್ಪನೆ ನಾಶ'
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಕೆರೆ ತುಂಬಿಸುವ ಯೋಜನೆಗೆ ಅನುದಾನ ನೀಡಲಾಗಿದೆ. ಆದರೆ, ಈ ಯೋಜನೆ ಬಿಜೆಪಿ ಸರ್ಕಾರ ನಮ್ಮದು ಎಂದು ಬಿಂಬಿಸುತ್ತಿದೆ ಇದು ಕಾಂಗ್ರೆಸ್‌ನ ಯೋಜನೆಯಾಗಿದೆ. ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ ಬಳಿಕ ಕೆರೆ ತುಂಬಿಸುವ ಯೋಜನೆ ಕುರಿತಾದ ಪುಸ್ತಕವನ್ನು ಮಾಜಿ ಸಚಿವ ಬಸವರಾಜ ರಾಯರಡ್ಡಿ ಬಿಡುಗಡೆಗೊಳಸಲಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ರಾಮಣ್ಣ ಸಾಲಭಾವಿ, ವಕ್ತಾರ ಡಾ. ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಮಲ್ಲು ಜಕ್ಕಲಿ, ಬಸವರಾಜ ಕುಡಗುಂಟಿ, ಬಸವರಾಜ ಈಳಿಗೇರ, ಬಸವರಾಜ ಜಂಬಾಳಿ ಇದ್ದರು.