JDSನವರಿಂದ ಹಣಕ್ಕಾಗಿ ಬೇರೆ ಪಕ್ಷಕ್ಕೆ ವೋಟ್ : ಪಕ್ಷ ಬಿಡಲು ಸಾ ರಾ ಖಡಕ್ ಸವಾಲ್

Kannadaprabha News   | Asianet News
Published : Sep 30, 2021, 12:43 PM IST
JDSನವರಿಂದ ಹಣಕ್ಕಾಗಿ ಬೇರೆ ಪಕ್ಷಕ್ಕೆ ವೋಟ್ : ಪಕ್ಷ ಬಿಡಲು ಸಾ ರಾ ಖಡಕ್ ಸವಾಲ್

ಸಾರಾಂಶ

KR  ನಗರದಲ್ಲಿ ಎರಡು ದಿನಗಳ ಹಿಂದೆ ನಡೆದ ತಾಲೂಕು ಎಪಿಎಂಸಿ ಅಧ್ಯಕ್ಷರ ಚುನಾವಣೆ ಜೆಡಿಎಸ್‌ಗೆ ದ್ರೋಹ ಮಾಡಿ ಬೇರೆ ಪಕ್ಷದವರಿಗೆ ಮತ ಹಾಕಿದ ನಿರ್ದೇಶಕರಿಗೆ ಎಚ್ಚರಿಕೆ

ಕೆ.ಆರ್‌. ನಗರ (ಸೆ.30):  ಎರಡು ದಿನಗಳ ಹಿಂದೆ ನಡೆದ ತಾಲೂಕು ಎಪಿಎಂಸಿ (APMC) ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್‌ಗೆ (JDS) ದ್ರೋಹ ಮಾಡಿ ಬೇರೆ ಪಕ್ಷದವರಿಗೆ ಮತ ಹಾಕಿದ ನಿರ್ದೇಶಕರಿಗೆ ಮುಂದಿನ ದಿನಗಳಲ್ಲಿ ಮತದಾರರು ತಕ್ಕಪಾಠ ಕಳಿಸಲಿದ್ದಾರೆ ಎಂದು ಶಾಸಕ ಸಾ.ರಾ ಮಹೇಶ್‌ (Sa Ra Mahesh) ಎಚ್ಚರಿಕೆ ನೀಡಿದರು.

ಜೆಡಿಎಸ್‌ ಬೆಂಬಲದಿಂದ ಗೆದ್ದು 2 ಲಕ್ಷದ ಆಸೆಗೆ ಬೇರೆ ಪಕ್ಷಕ್ಕೆ ಮತ ಹಾಕಿರುವವರು ತಾಕತ್ತಿದ್ದರೆ ಪಕ್ಷ ನೀಡಿರುವ ಅಧಿಕಾರವನ್ನು ತ್ಯಜಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಲಿ ಎಂದು ಸವಾಲು ಹಾಕಿದರು. 

ಧಾರ್ಮಿಕ ಭಾವನೆಗಳ ಜೊತೆ ಆಟ ಆಡಬಾರದು : ಸಾರಾ ಮಹೇಶ್

ಪಕ್ಷದಿಂದ ಎಲ್ಲ ಅಧಿಕಾರ ಅನುಭವಿಸಿ, ಹೊರ ಹೋಗಿರುವವರ ಹಿಂದೆ ಜೆಡಿಎಸ್‌ ಕಾರ್ಯಕರ್ತರ ಶ್ರಮ, ಪ್ರಧಾನ ಪಾತ್ರ ವಹಿಸಿದ್ದು, ಈಗ ಪಕ್ಷ ದ್ರೋಹಿಗಳು ಈ ಕೆಲಸ ಮಾಡುತ್ತಿರುವುದು ಸಂಕಟ ತಂದಿದೆ ಎಂದರು. ಜೆಡಿಎಸ್‌ ಮುಖಂಡರನ್ನು ಹುಟ್ಟುಹಾಕುವ ಕಾರ್ಖಾನೆಯಾಗಿದ್ದು, ನಮ್ಮ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ನಮಗೆ ಬೆನ್ನೆಲುಬಾಗಿರುವುದರಿಂದ ಈಗ ಜೊಳ್ಳುಗಳು ಗಾಳಿಯಲ್ಲಿ ತೂರಿ ಹೋಗಿವೆ ಎಂದು ಟೀಕಿಸಿದರು.

 ಬಹುಮತವಿದ್ದರೂ ಅಧಿಕಾರ ಕಳೆದುಕೊಂಡ ಜೆಡಿಎಸ್‌

ತಾಲೂಕು ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಹರದನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ (Congress) ಬೆಂಬಲಿತ ನಿರ್ದೇಶಕ ಕೆಡಗ ನಟರಾಜ್‌ ಆಯ್ಕೆಯಾಗಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ (Election) ಕಾಂಗ್ರೆಸ್‌ ಬೆಂಬಲಿತರಾಗಿ ಕೆಡಗ ನಟರಾಜು ಮತ್ತು ಜೆಡಿಎಸ್‌ (JDS) ಬೆಂಬಲಿತರಾಗಿ ಆರ್‌. ಮಲ್ಲಿಕಾ ನಾಮಪತ್ರ ಸಲ್ಲಿಸಿದ್ದರು.

ನಂತರ ನಡೆದ ಚುನಾವಣೆಯಲ್ಲಿ ಕೆಡಗ ನಟರಾಜು 9 ಮತಗಳನ್ನು ಪಡೆದು 6 ಮತಗಳಿಸಿದ ಮಲ್ಲಿಕಾ ಅವರನ್ನು 3 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

ಧಾರ್ಮಿಕ ಭಾವನೆಗಳ ಜೊತೆ ಆಟ ಆಡಬಾರದು : ಸಾರಾ ಮಹೇಶ್

ಚುನವಾಣಾ ಸಭೆಯಲ್ಲಿ ಉಪಾಧ್ಯಕ್ಷ ಚಂದ್ರಶೇಖರ, ನಿರ್ದೇಶಕರಾದ ಕೆ.ಆರ್‌. ಹಿರಣ್ಣಯ್ಯ, ಎಚ್‌. ಪ್ರಕಾಶ್‌, ಬಿ. ಗಾಯಿತ್ರಿ, ಎಚ್‌.ಸಿ. ಕೃಷ್ಣೇಗೌಡ, ಕುಪ್ಪಳಿ ಸೋಮು, ಬಿ.ಎಂ. ನಾಗರಾಜು. ಎಚ್‌.ಪಿ. ಅನಿಲ್‌ಕುಮಾರ್‌, ಎಚ್‌.ಎನ್‌. ನಾಗೇಂದ್ರ, ಸಿದ್ದಲಿಂಗಮ್ಮ, ಎಚ್‌.ಸಿ. ಪ್ರಶಾಂತ್‌, ದಾಕ್ಷಾಯಿಣಿ, ಜಿ.ಆರ್‌. ಸ್ವರೂಪ, ಕಾರ್ಯದರ್ಶಿ ಡಿ. ಮಹೇಶ್‌, ಸಹ ಕಾರ್ಯದರ್ಶಿ ಆರ್‌.ಆರ್‌. ವಾಸು, ಲೆಕ್ಕಾಧಿಕಾರಿ ಚಲುವರಾಜು ಇದ್ದರು.

ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ  ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಸ್ಪಷ್ಟಬಹುಮತವಿದ್ದರೂ ಅಧಿಕಾರ ಉಳಿಸಿಕೊಳ್ಳುವಲ್ಲಿ ವಿಫಲವಾಗಿ ತೀವ್ರ ಮುಖಭಂಗ ಅನುಭವಿಸಿತು.  ಒಟ್ಟು 16 ನಿರ್ದೇಶಕ ಸ್ಥಾನಕ್ಕೆ ಪೈಕಿ 10 ಸ್ಥಾನಗಳನ್ನು ಹೊಂದಿದ್ದ ಜೆಡಿಎಸ್‌ ಮೂವರು ನಿರ್ದೇಶಕರನ್ನು ಹೊಂದಿದ್ದ ಕಾಂಗ್ರೆಸ್‌ (Congress) ಪಕ್ಷದ ತಂತ್ರದ ಮುಂದೆ ಸೋತು ಶರಣಾಯಿತು.

PREV
click me!

Recommended Stories

ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್
ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ