ಕಾಂಗ್ರೆಸ್‌ ಸರ್ಕಾರ ಜನರ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ: ಚಕ್ರವರ್ತಿ ಸೂಲಿಬೆಲೆ ಆಕ್ರೋಶ

By Kannadaprabha News  |  First Published Oct 1, 2023, 11:29 AM IST

ಕಾವೇರಿ ವಿಚಾರಕ್ಕೆ ಬಂದರೇ ನಾನು ಈಗಾಗಲೇ ಸಾಕಷ್ಟು ಮಾತನಾಡಿದ್ದು, ಒಂದು ಇಡಿ ಅಲಯನ್ಸ್‌ ಅನ್ನು ಉಳಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಶಾಂತಿಯುತವಾಗಿ ಪ್ರಯತ್ನ ಪಡುತ್ತಿದ್ದಾರೆ. ಕನ್ನಡ ಜನತೆಗೆ ಗೊತ್ತಾಗದಂತೆ ಸುಪ್ರಿಂ ಕೋರ್ಟ್ ಹೇಳುವ ಮೊದಲೇ ನೀರನ್ನು ಬಿಡುವ ಪ್ರಯತ್ನ ಮಾಡಿರುವುದು ನಿಜಕ್ಕೂ ಅಕ್ಷ್ಯಮವಾದ ಅಪರಾಧ: ಚಕ್ರವರ್ತಿ ಸೂಲಿಬೆಲೆ 


ಹಾಸನ(ಅ.01):  ಕಾಂಗ್ರೆಸ್‌ ಸರ್ಕಾರ ಬಂದ ದಿನದಿಂದ ತನ್ನನ್ನು ಪ್ರಶ್ನಿಸುವವರ ಮೇಲೆ ಅನೇಕ ಪ್ರಕರಣಗಳನ್ನು ಹಾಕಲಾಗುತ್ತಿರುವುದನ್ನು ನೋಡಿದರೆ ಇದು ಎಫ್‌.ಐ.ಆರ್‌. ಸರ್ಕಾರ ಎನ್ನುವುದು ಸ್ಪಷ್ಟವಾಗುತ್ತಿದೆ. ಜನರ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವನ್ನು ಈ ಸರಕಾರ ಮಾಡುತ್ತಿದೆ ಎಂದು ವಾಗ್ಮಿ, ಚಿಂತಕರಾದ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿ ಬೇಸರ ವ್ಯಕ್ತಪಡಿಸಿದರು.

ನಮೋ ಬ್ರಿಗೇಡ್ ಮೂಲಕ ಸದೃಢ, ಸಮೃದ್ಧ ಭಾರತಕ್ಕಾಗಿ ಮತ್ತೊಮ್ಮೆ ಮೋದಿ ಎನ್ನುವ ಶೀರ್ಷಿಕೆಯಲ್ಲಿ ಶನಿವಾರ ನಗರಕ್ಕೆ ಬಂದ ಬೈಕ್‌ ರ್‍ಯಾಲಿಯನ್ನು ಕೆಲ ಸಮಯ ಹೇಮಾವತಿ ಪ್ರತಿಮೆ ಮುಂದೆ ನಿಲ್ಲಿಸಿ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಮುಂದಿನ ಗುರಿ ಎಂದರೇ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವ ದೃಷ್ಠಿಕೋನವನ್ನು ಇಟ್ಟುಕೊಂಡು ನಾವುಗಳೆಲ್ಲಾ ರಾಜ್ಯಾದ್ಯಂತ ಪ್ರವಾಸವನ್ನು ಮಾಡುತ್ತಿದ್ದೇವೆ. ಇದರ ಉದ್ದೇಶ ಎನೆಂದರೇ ಜನಗಣಮನ ಬೆಸೆಯೋಣ ಎನ್ನುವ ಟೈಟಲ್‌ ನಲ್ಲಿ ಎಲ್ಲಾ ಭಾಗದ ಭಿನ್ನಭಿನ್ನ ಜನರನ್ನು ಒಂದು ಕಡೆ ಸೇರಿಸುವಂತಹ ಪ್ರಯತ್ನ ಮಾಡುತ್ತಿದ್ದೇವೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಕಾಣಬೇಕು ಎನ್ನುವ ಧ್ವನಿ ಕೇಳಿ ಬಂದಿದೆ ಎಂದರು.

Latest Videos

undefined

ನೀರು ಬಿಡುವುದಿಲ್ಲ ಎಂದು ಹೇಳುವ ಧೈರ್ಯ ರಾಜ್ಯ ಸರ್ಕಾರಕ್ಕೆ ಇಲ್ಲ: ಸೂಲಿಬೆಲೆ

ಕಾವೇರಿ ವಿಚಾರಕ್ಕೆ ಬಂದರೇ ನಾನು ಈಗಾಗಲೇ ಸಾಕಷ್ಟು ಮಾತನಾಡಿದ್ದು, ಒಂದು ಇಡಿ ಅಲಯನ್ಸ್‌ ಅನ್ನು ಉಳಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಶಾಂತಿಯುತವಾಗಿ ಪ್ರಯತ್ನ ಪಡುತ್ತಿದ್ದಾರೆ. ಕನ್ನಡ ಜನತೆಗೆ ಗೊತ್ತಾಗದಂತೆ ಸುಪ್ರಿಂ ಕೋರ್ಟ್ ಹೇಳುವ ಮೊದಲೇ ನೀರನ್ನು ಬಿಡುವ ಪ್ರಯತ್ನ ಮಾಡಿರುವುದು ನಿಜಕ್ಕೂ ಅಕ್ಷ್ಯಮವಾದ ಅಪರಾಧ. ಮೊದಲೆ ಎಲ್ಲಾ ಪಕ್ಷದ ವಿಶ್ವಾಸಕ್ಕೆ ತೆಗೆದುಕೊಂಡು ನೀರನ್ನು ಬಿಡಬೇಕೊ ಬೇಡವೋ ಬಗ್ಗೆ ಯೋಚನೆ ಮಾಡಬೇಕಾಗಿತ್ತು. ಅಲೆಯನ್ಸ್‌ ಉಳಿಸಿಕೊಳ್ಳಲು ಹೋಗಿ ಕನ್ನಡ ನಾಡಿನ ಜನರಿಗೆ ಮಾಡಿರುವ ಅನ್ಯಾಯ. ಕನ್ನಡಿಗರೂ ಅವರನ್ನು ಕ್ಷಮಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೂಗಳು ಜಾತ್ಯತೀತರಲ್ಲ ಎಂದು ಯಾರಾದರೂ ಹೇಳಿದರೇ ಅದು ಮೂರ್ಖತನವೇ! ಹಾಗೆ ನೋಡಿದರೇ ಅದು ಜಾತ್ಯತೀತರಾಗಿರುವುದು ಹಿಂದುಗಳೆ. ಸ್ವಾಮಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನದಲ್ಲಿ ಮೊದಲನೆ ಭಾಷಣದಲ್ಲಿ ಹೇಳಿರುವುದು ಹಿಂದೂ ಯಾವತ್ತು ಸಹಿಷ್ಣು ಆಗಲ್ಲ ಎಂದರೇ ಸಹಿಸಿಕೊಳ್ಳುವುದಿಲ್ಲ ಆದರೇ ಎಲ್ಲರನ್ನು ಒಪ್ಪಿಕೊಳ್ಳುತ್ತಾರೆ. ಇನ್ನು ಮೈತ್ರಿಗೆ ಸಂಬಂಧಪಟ್ಟಂತೆ ಹೇಳುವುದಾದರೇ ಒಟ್ಟಾರೆ ಎರಡು ಪಾರ್ಟಿಗಳ ಕ್ಯಾಲಿಕಿಕೇಷನ್‌ ಇರಬಹುದು, ಜೆಡಿಎಸ್ ಗೆ ಅತ್ಯಂತ ಕಡಿಮೆ ಮತಗಳು ಪರ್ಸಂಟೇಜ್‌ ಈ ಸಲ ಬಂದಿದೆ. ಈ ದೃಷ್ಠಿಯಿಂದ ಜೆಡಿಎಸ್‌ ಮತದಾರರು ಮತ್ತು ಬಿಜೆಪಿಯ ಮತದಾರರು ಉಳಿದುಕೊಂಡಿದ್ದಾರೆ ಅಂತಹವರು ಸೇರಿಕೊಂಡರೇ ಅರ್ಧ ಭಾಗದಷ್ಟು ಪರ್ಸಂಟೇಜ್‌ ಅವರಿಗೆ ಸಿಗುತ್ತದೆ. ಸಹಜವಾಗಿ ಕರ್ನಾಟಕದ ಅಷ್ಟು ಸೀಟುಗಳನ್ನು ಗೆಲ್ಲಲು ಸಾಧ್ಯವಾಗಬಹುದು ಎನ್ನುವ ಅವರ ಲೆಕ್ಕಚಾರ ಇರಬಹುದು ಎಂದು ಅಭಿಪ್ರಾಯಪಟ್ಟರು.

ನಾನು ಮಾಧ್ಯಮದಲ್ಲಿ ನೋಡಿರುವಂತೆ ಒಬ್ಬ ತರುಣನ ಬಂಧನ, ಸಾಹಿತಿಗಳ ಬಂಧನ, ಬಂಜಗೆರೆ ಜಯಪ್ರಕಾಶ್‌ ಅವರ ಹೆಸರನ್ನು ಕೂಡ ನೋಡಿದೆ. ಎಲ್ಲೊ ಒಂದು ಕಡೆ ವಿಚಾರವನ್ನು ತಿರುಗಿಸುವುದಕ್ಕೆ, ಮತ್ತೊಂದು ಕಡೆ ಈ ವಿಚಾರವನ್ನು ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡುತ್ತಿದೆ. ಕಾಂಗ್ರೆಸ್‌ ಸರ್ಕಾರ ಬಂದ ದಿನದಿಂದ ಈ ತರಹದ ಪ್ರಕರಣಗಳು ಒಂದೆರಡಲ್ಲ ಹೆಚ್ಚು ಇದೆ ಅನಿಸುತ್ತದೆ. ಅವರು ಅನೇಕ ಎಫ್‌.ಐ.ಆರ್‌. ಹಾಕುವುದನ್ನು ನೋಡಿದರೇ ಇದು ಕಾಂಗ್ರೆಸ್‌ ಸರಕಾರವೊ ಎಫ್.ಐ.ಆರ್. ಸರಕಾರವೊ ಅಂತ ಕೇಳಬೇಕು ಎಂದು ಹೇಳಿದರು.

‘ಸನಾತನ’ ವಿವಾದ ಹಿಂದೆ ವಿದೇಶಿ ಷಡ್ಯಂತ್ರ: ಚಕ್ರವರ್ತಿ ಸೂಲಿಬೆಲೆ

ಸಿದ್ದರಾಮಯ್ಯನವರ ಸರಕಾರದಲ್ಲಿ ಗಣೇಶನನ್ನು ಕೂರಿಸುವುದಕ್ಕೆ ಮತ್ತು ವಿಸರ್ಜನೆ ಮಾಡಲು ಅನುಮತಿ ಪಡೆಯಬೇಕು ಎನ್ನುತ್ತದೆ. ಸ್ಟ್ಯಾಲಿನ್ ಪ್ರತಿಕೃತಿ ಧಹನ ಮಾಡಿದರೆಂದು ಕೆಲ ಕಾವೇರಿ ಹೋರಾಟಗಾರರ ಮೇಲೆ ಸಿರಿಯಸ್ ಲಾಂಗ್ ಬಿಲೆಬಲ್ ವಾರೆಂಟ್ ಹೊರಡಿಸಿದ್ದಾರೆ. ಇದೆಲ್ಲಾ ನೋಡಿದರೇ ಎಲ್ಲೊ ಒಂದು ಕಡೆ ಜನರ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದು, ಹಿಟ್ಲರ್ ಮಾಧರಿಯಲ್ಲಿ ಕಾಂಗ್ರೆಸ್ ಸರಕಾರ ವ್ಯವಹಾರ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಹಿಂದೂ  ಧರ್ಮ ಎನ್ನುವುದು ಒಂದು ಮಹಾ ಪ್ರವಾಹ. ಇದು ನಿನ್ನೆ, ಮೊನ್ನೆ ಹುಟ್ಟಿದಲ್ಲ. ೧೬ ಸಾವಿರ ವರ್ಷಗಳ ಹಿಂದೆಯೇ ಹುಟ್ಟಿದೆ. ಇದನ್ನು ನಾಶ ಮಾಡಲೆಂದು ಬಾಬರ್‌ ಔರಂಗಜೇಬರು, ಪೂರ್ವದಲ್ಲಿ  ಮೊಹಮದ್ ಘಸ್ನಿ, ಕ್ರಿಶ್ಚಯನರ್ ಇದ್ದರು. ಹಾಳು ಮಾಡಲೆಂದು ಅನೇಕರು ಬಂದರು. ಅವರಿಂದ ಏನು ಮಾಡಲು ಆಗಲಿಲ್ಲ. ಇಂತಹ ಪ್ರಕರಣಗಳು ನಡೆಯುತ್ತಲೆ ಇರುತ್ತವೆ. ನನ್ನನ್ನೆ ಹೇಳುವುದಾದರೇ ಸಾವಿರ ಚಕ್ರವರ್ತಿ ಹಿಂದು ಧರ್ಮದ ಪ್ರವಾಹದಲ್ಲಿ ಬರುತ್ತಾರೆ ಹೋಗುತ್ತಾರೆ. ಈ ಪ್ರವಾಹ ಬರುತ್ತಲೆ ಇರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

click me!