ಗುಂಡ್ಲುಪೇಟೆ ತಾಲೂಕು ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ(ಹಾಪ್‌ಕಾಮ್ಸ್)ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 14 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚಾಮರಾಜನಗರ(ಫೆ.25): ಗುಂಡ್ಲುಪೇಟೆ ತಾಲೂಕು ತೋಟದ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ(ಹಾಪ್‌ಕಾಮ್ಸ್)ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 14 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 2 ಸ್ಥಾನಗಳಿಗೆ ಬಿಜೆಪಿ ಬೆಂಬಲಿತ ಶಿಂಡನಪುರ ಶಿವಪ್ಪ, ಕಬ್ಬಹಳ್ಳಿಸ್ವಾಮಿ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆವ ಮೂಲಕ ಕಾಂಗ್ರೆಸ್ ಬೆಂಬಲಿತ ಅವಿರೋಧ ಆಯ್ಕೆಗೆ ಸಹಕಾರಿಯಾಗಿದೆ. ಕಾಂಗ್ರೆಸ್ ಬೆಂಬಲಿತ 14 ಮಂದಿಯೂ ಅವಿರೋಧ ಆಯ್ಕೆಗೆ ಪ್ರತಿಪಕ್ಷವಾದ ಬಿಜೆಪಿ ಬೆಂಬಲಿತ ಇಬ್ಬರು ನಾಮಪತ್ರ ವಾಪಸ್ ಪಡೆವ ಮೂಲಕ ಬಿಜೆಪಿ ಭಾರೀ ಮುಖಭಂಗ ಅನುಭವಿಸಿತು.
undefined
ಸಿ.ಎಂ. ಇಬ್ರಾಹಿಂ BJP ಬಗ್ಗೆ ಯೋಚಿಸೋದು ಬಿಡಲಿ: ನಳಿನ್
ಕಾಂಗ್ರೆಸ್ ಬೆಂಬಲಿತರಾದ ವೈ.ಎನ್.ರಾಜಶೇಖರ್, ಎಸ್.ರಾಜಶೇಖರ್, ನೀಲಕಂಠಪ್ಪ, ಎ.ಬಿ.ಬೋರೇಗೌಡ, ಎಚ್.ಎಂ.ನಾಗರಾಜಪ್ಪ, ಎಂ.ಶಿವಣ್ಣ, ನಾಗರಾಜು, ಎಚ್.ಬಿ.ಶಿವಕುಮಾರ್, ಕೆ.ಬಸವಣ್ಣ, ಎಚ್.ಎಸ್.ನಂಜುಂಡಸ್ವಾಮಿ, ಎಂ.ಮಲಿಯಶೆಟ್ಟಿ, ಅಬ್ದುಲ್ ಜಬ್ಬಾರ್, ಸರೋಜಮ್ಮ, ಶಿವಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
14 ಮಂದಿಯೂ ಅವಿರೋಧವಾಗಿ ಆಯ್ಕೆಯಾದರು ಎಂದು ರಿಟರ್ನಿಂಗ್ ಅಧಿಕಾರಿ ದಯಾನಂದ ಅಧಿಕೃತವಾಗಿ ಘೋಷಿಸಿದರು. ಹಾಪ್‌ಕಾಮ್ಸ್ ಕಾರ್ಯದರ್ಶಿ ಎಸ್. ಶ್ರೀಕಂಠಪ್ಪ ಹಾಗೂ ಸಿಬ್ಬಂದಿ ಇದ್ದರು.
ಹಳಬರ ಮೇಲುಗೈ:
ಹಾಪ್‌ಕಾಮ್ಸ್‌ನ ಚುನಾವಣೆಯಲ್ಲಿ 12 ಮಂದಿ ಹಳಬರು ಆಯ್ಕೆಯಾಗುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಸಂಘದ ಮಾಜಿ ಅಧ್ಯಕ್ಷರಾದ ವೈ.ಎನ್.ರಾಜಶೇಖರ್, ಎಸ್.ರಾಜಶೇಖರ್, ಎಚ್.ಎಸ್.ನಂಜುಂಡಸ್ವಾಮಿ, ನೀಲಕಂಠಪ್ಪ, ಎಚ್.ಎಂ.ನಾಗರಾಜಪ್ಪ, ಎಂ.ಶಿವಣ್ಣ, ಎ.ಬಿ.ಬೋರೇಗೌಡ, ಎಚ್.ಬಿ.ಶಿವಕುಮಾರ್, ಎಂ.ಮಲಿಯಶೆಟ್ಟಿ, ಅಬ್ದುಲ್ ಜಬ್ಬಾರ್, ಸರೋಜಮ್ಮ, ಶಿವಮ್ಮ ಹಳಬರು ಆಯ್ಕೆಯಾದವರು. ಹಂಗಳ ಜಿಪಂ ಕ್ಷೇತ್ರದ ಮಾಜಿ ಸದಸ್ಯ ನಾಗರಾಜು,ಅರೇಪುರ ಕೆ.ನಂದೀಶ್ ಇದೇ ಮೊದಲ ಭಾರಿಗೆ ಆಯ್ಕೆಯಾಗಿದ್ದಾರೆ.
4 ಬಾರಿಗೆ ವೈಎನ್‌ಆರ್:
ಸಂಘದ ಮಾಜಿ ಅಧ್ಯಕ್ಷ ವೈ.ಎನ್.ರಾಜಶೇಖರ್ ಸತತವಾಗಿ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. ಎಚ್.ಎಂ.ನಾಗರಾಜಪ್ಪ 3 ಬಾರಿ, ಎಸ್.ರಾಜಶೇಖರ್, ನೀಲಕಂಠಪ್ಪ, ಎಂ.ಶಿವಣ್ಣ, ಎ.ಬಿ.ಬೋರೇಗೌಡ, ಎಂ.ಮಲಿಯಶೆಟ್ಟಿ, ಎಚ್.ಬಿ.ಶಿವಕುಮಾರ್, ಸರೋಜಮ್ಮ, ಶಿವಮ್ಮ 2 ಬಾರಿಗೆ ಆಯ್ಕೆಯಾಗಿದ್ದಾರೆ.