ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜೂ.8): ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸ ಏನೂ ಇಲ್ಲ. ಕಾಂಗ್ರೆಸ್ ಗೆ ಇಡೀ ದೇಶದಲ್ಲಿ ಚಡ್ಡಿ ಬಿಚ್ಚಿ ಕಳಿಸಿದ್ದಾರೆ. ವಿರೋಧ ಪಕ್ಷವಾಗಿ ಕೆಲಸ ಮಾಡುವ ಶಕ್ತಿ ಸಹ ಅವರಿಗಿಲ್ಲ. ಬರುವ ಚುನಾವಣೆಯಲ್ಲಿ ಜನ ಲಂಗೋಟಿಯನ್ನು ಬಿಚ್ಚಿ ಕಳಿಸ್ತಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪರೋಕ್ಷ ಟಾಂಗ್ ಕೊಟ್ಟರು. ಹೊಣೆಗಾರಿಕೆ ಮರೆತು ಕಾಂಗ್ರೆಸ್ ನಾಯಕರಿಂದ ಸುಖಾ ಸುಮ್ಮನೆ ಟೀಕೆ ಮಾಡಲಾಗ್ತಿದೆ ಎಂದು ಗರಂ ಆದರು.
ಇನ್ನೂ ಇದೇ ವೇಳೆ ಬಿಜೆಪಿ ಸರ್ಕಾರ ಹಿಂದೂ ಸಂಘಟನೆಗಳನ್ನು ದುರಪಯೋಗ ಮಾಡಿಕೊಳ್ತಿದೆ ಎಂಬ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಟಾಂಗ್ ಕೊಟ್ಟರು. ಯಾರನ್ನೋ ದುರ್ಬಳಕೆ ಮಾಡಿಕೊಂಡು ಸರ್ಕಾರ ನಡೆಸುವ ದರಿದ್ರತನವಿಲ್ಲ ಸದ್ಯ ನಮ್ಮ ಪಕ್ಷಕ್ಕೆ ಬಂದಿಲ್ಲ. ಮುತಾಲಿಕ್ ಹೇಳಿಕೆಗೆಲ್ಲ ಪ್ರತಿಕ್ರಿಯೆ ನೀಡಲ್ಲ ಎಂದ ಸಚಿವ.
ಇನ್ನೂ ರಾಜ್ಯಸಭೆ ಚುನಾವಣೆಯಲಿ ಕಾಂಗ್ರೆಸ್ ನವರಿಗೆ ಜೆಡಿಎಸ್ ನ ಮಾಜಿ ಸಿಎಂ ಹೆಚ್ ಡಿಕೆ ಓಪನ್ ಆಫರ್ ಹಿನ್ನೆಲ್ಲೆ, ಕಾಂಗ್ರೆಸ್, ಜೆಡಿಎಸ್ ನವರು ಯಾವಾಗ ಜೊತೆಯಾಗುತ್ತಾರೆ, ಯಾವಾಗ ಬೇರೆ ಆಗುತ್ತಾರೋ ಗೊತ್ತಿಲ್ಲ. ಅವರಿಬ್ಬರ ಜಗಳದ ನಡುವೆ ನಾವಂತೂ ಸೇಫ್ ಆಗಿದ್ದೇವೆ. ಬಿಜೆಪಿ ಭದ್ರವಾಗಿದ್ದು ರಾಜ್ಯಸಭೆ ಸ್ಥಾನ ಗೆಲ್ಲಲಿದೆ ಎಂದರು.
ಶಿಕ್ಷಣ ಸಚಿವರ ಮನೆಗೆ ನುಗ್ಗಿದವರು ವಿದ್ಯಾರ್ಥಿಗಳೇ ಅಲ್ಲ: ARAGA JNANENDRA
ಈ ಬಿಜೆಪಿ ಸರ್ಕಾರ ಸಾಲದ ಸುಳಿಯಲ್ಲಿಯೇ ಇದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಭಿವೃದ್ಧಿಗಾಗಿ ಬಿಎಸ್ ವೈ ಆಡಳಿತದಲ್ಲಿ ಸಾಲ ಆಗಿರಬಹುದು. ಸಿದ್ಧರಾಮಯ್ಯ ಕಾಲದಲ್ಲಿ ಸಾಲವೇ ಮಾಡಿಲ್ಲವೇ? ದೇವಲೋಕವನ್ನೇ ಇಳಿಸಿದಂತೆ ಸಿದ್ಧರಾಮಯ್ಯ ಮಾತಾಡ್ತಾರೆ.
ಸಿದ್ಧರಾಮಯ್ಯ ಆಡಳಿತದಲ್ಲೂ ಗುತ್ತಿಗೆದಾರರಿಗೆ ಬಿಲ್ ಕೊಡದೆ ಸತಾಯಿಸಿದ್ದು ಜನ ಮರೆತಿಲ್ಲ ಎಂದು ಗರಂ ಆದರು.
ಬಿ.ವೈ.ವಿಜಯೇಂದ್ರ ಮುಂದಿನ ಸಿಎಂ ಎಂಬ ವಿಚಾರ. ಸದ್ಯ ಸಿಎಂ ಖುರ್ಚಿ ಖಾಲಿ ಇಲ್ಲ, ಬೊಮ್ಮಾಯಿ ಸಮರ್ಥ ಆಡಳಿತ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಭಯೋತ್ಪಾದಕನ ಬಂಧನ ಆಗಿದೆ. ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ, ನಮ್ಮ ಪೊಲೀಸರು ಸಾಥ್ ನೀಡಿದ್ದಾರೆ. ಭಯೋತ್ಪಾದಕಗೆ ಆಶ್ರಯ ನೀಡಿದವರು, ಸಂಪರ್ಕದಲ್ಲಿದ್ದವರ ಬಗ್ಗೆ ತನಿಖೆ ನಡೆಯುತ್ತಿದೆ. MLC ಚಲವಾದಿ ನಾರಾಯಣಸ್ವಾಮಿ ತಲೆ ಮೇಲೆ ಚಡ್ಡಿ ಹೊತ್ತ ಬಗ್ಗೆ ಸಿದ್ಧರಾಮಯ್ಯ ಟೀಕೆ. ಚಲವಾದಿ ನಾರಾಯಣಸ್ವಾಮಿ ಪ್ರತಿಭಟನೆ ನಡೆಸಿದ್ದಾರೆಂದು ಸಮರ್ಥಿಸಿಕೊಂಡ ಗೃಹ ಸಚಿವ.
CHIKKAMAGALURU : ಗಾಂಜಾ ದಂಧೆಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಹೊಸ ಪ್ಲಾನ್
ಇನ್ನೂ ಇಂದು ಎಸ್ಪಿ ಆಫೀಸ್ ನಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಸಚಿವರು, ಚಿತ್ರದುರ್ಗ ಜಿಲ್ಲೆಗೆ ಮತಾಂತರ ಎಂಬುದು ದೊಡ್ಡ ಪಿಡುಗು. ಮತಾಂತರ ಹಿನ್ನೆಲೆ ಕೆಲ ಕೇಸ್ ಸಹ ಈಗಾಗಲೇ ದಾಖಲಾಗಿವೆ. ಆಮಿಷ, ಬಲವಂತದ ಮತಾಂತರ ತಡೆಗೆ ಸೂಚನೆ. ಮತಾಂತರ ಪಿಡುಗಿನಿಂದ ಶಾಂತಿ ಸುವ್ಯವಸ್ಥೆ ಹಾಳಾಗುತ್ತದೆ. ಗೂಳಿಹಟ್ಟಿ ಶೇಖರ್ ತಾಯಿ ಮತಾಂತರ ಪ್ರಕರಣ ಹಿನ್ನೆಲೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಮತಾಂತರ ಕಾಯ್ದೆ ತಂದಿದೆ. ಮತಾಂತರ ವಿಚಾರದಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ ಫಸ್ಟ್ ಇರಬಹುದು.
ಡಿಸಿಯಿಂದ ಪರವಾನಿಗೆ ಪಡೆದು ಮತಾಂತರ ಆಗಲು ಅವಕಾಶವಿದೆ. ಮತಾಂತರ ಬಳಿಕ ಮೂಲ ಮತದಿಂದ ಸಿಗಬೇಕಿದ್ದ ಬೆನಿಫಿಟ್ ರದ್ದು. ಮತಾಂತರ ಆಗಿರುವ ಧರ್ಮಕ್ಕೆ ಸಿಗಲಿರುವ ಬೆನಿಫಿಟ್ ಸಿಗಲಿದೆ. ಮಸೀದಿ, ಮಂದಿರಗಳ ಮೈಕ್ ಬಗ್ಗೆ ಪರಿಶೀಲಿಸಿ ಕ್ರಮ. 122 ಮಸೀದಿ, 24 ದೇವಸ್ಥಾನ, 16 ಚರ್ಚ್ ಗಳಿಗೆ ಮೈಕ್ ಲೈಸನ್ಸ್. ಅಕ್ರಮ ಖಸಾಯಿಖಾನೆ ಸಂಪೂರ್ಣ ಬಂದ್ ಗೆ ಕ್ರಮ. ಜೂಜಾಟ ತಡೆಗೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ತಡೆಗೆ ಎಚ್ಚರಿಕೆಯ ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದರು.