ಮೋದಿ, ಅಮಿತ್‌ ಶಾ ಅಂಬಾನಿ ಸಾಕಿದ ನಾಯಿಗಳು: ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ನಾಯಕ

By Kannadaprabha News  |  First Published Dec 9, 2020, 9:38 AM IST

ಪ್ರಧಾನಿಗೆ ನಾಯಿ ಪದ ಬಳಸಿದ ಕೈ ಮುಖಂಡ| ಭಾಷಣದ ವೇಳೆ ಪಿ.ಎಚ್‌. ನೀರಲಕೇರಿ ಎಡವಟ್ಟು| ತೆರಿಗೆ ವಂಚನೆ ಮಾಡಿದ ಕೀರ್ತಿ ಅಂಬಾನಿಗೆ ಸಲ್ಲುತ್ತದೆ| ಭರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಷಾ ಅವರನ್ನು ನಾಯಿಗೆ ಹೋಲಿಕೆ ಮಾಡಿದ ನೀರಲಕೇರಿ| 


ಧಾರವಾಡ(ಡಿ.09): ಭಾರತ್‌ ಬಂದ್‌ ಅಂಗ​ವಾಗಿ ಆಲೂರು ವೆಂಕ​ಟ​ರಾವ್‌ ವೃತ್ತ​ದಲ್ಲಿ ನಡೆದ ಪ್ರತಿ​ಭ​ಟ​ನೆ​ಯಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್‌. ನೀರಲಕೇರಿ ನಾಲಿಗೆ ಹರಿಬಿಟ್ಟ ಸಂಗ ನಡೆಯಿ​ತು.

ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವ ಭರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಷಾ ಅವರನ್ನು ನಾಯಿಗೆ ಹೋಲಿಕೆ ಮಾಡಿದ್ದಾರೆ. 

Tap to resize

Latest Videos

'ಲಾಭ​ದಾ​ಯಕ ಹುದ್ದೆ​ ಹೊಂದಿದವರು​ ಚುನಾ​ವಣೆಗೆ ನಿಲ್ಲು​ವಂತಿ​ಲ್ಲ'

ತೆರಿಗೆ ವಂಚನೆ ಮಾಡಿದ ಕೀರ್ತಿ ಅಂಬಾನಿಗೆ ಸಲ್ಲುತ್ತದೆ. ಹೀಗೆ ತೆರಿಗೆ ವಂಚನೆ ಮಾಡಿದ ಅಂಬಾನಿ ಸಾಕಿದ ನಾಯಿಗಳು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ಎಂದು ಟೀಕಿಸಿದ್ದಾರೆ. 
 

click me!