ಸಂಗಮವಾಯ್ತು ನೇತ್ರಾವತಿ-ಕುಮಾರಧಾರ, ಕಣ್ತುಂಬಿಕೊಳ್ಳಲು ಸೇರಿದ ಜನ ಸಾಗರ

Published : Aug 10, 2019, 03:04 PM ISTUpdated : Aug 10, 2019, 03:08 PM IST
ಸಂಗಮವಾಯ್ತು ನೇತ್ರಾವತಿ-ಕುಮಾರಧಾರ, ಕಣ್ತುಂಬಿಕೊಳ್ಳಲು ಸೇರಿದ ಜನ ಸಾಗರ

ಸಾರಾಂಶ

ನೇತ್ರಾವತಿ ಹಾಗೂ ಕುಮಾರಧಾರಾ ನದಿ ಸಂಗಮವಾಗಿದ್ದು, ಸಮಾನಾಂತರವಾಗಿ ಉಕ್ಕಿ ಹರಿದಿದೆ. ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡೂ ಸಮಾನಾಂತರವಾಗಿ ಉಕ್ಕಿ ಹರಿದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಳದ ಎದುರುಗಡೆ ಸಮಾಗಮಗೊಂಡಿತು. ನಂತರ ಗಂಗಾ ಪೂಜೆ ನಡೆಯಿತು.

ಮಂಗಳೂರು(ಆ.10): ದಿನವಿಡೀ ನಿರೀಕ್ಷೆಯಲ್ಲಿದ್ದ ಉಪ್ಪಿನಂಗಡಿಯ ಪವಿತ್ರ ಸಂಗಮವು ಕೊನೆಗೂ ಘಟಿಸಿದ್ದು, ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡೂ ಸಮಾನಾಂತರವಾಗಿ ಉಕ್ಕಿ ಹರಿದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಳದ ಎದುರುಗಡೆ ಸಮಾಗಮಗೊಂಡಿತು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಳಿಕ ವೈದಿಕರಿಂದ ಮಂತ್ರಘೋಷ ಮಂಗಲವಾದ್ಯಗಳೊಂದಿಗೆ ಗಂಗಾ ಪೂಜೆ ನಡೆಯಿತು. ವೇ.ಮೂ. ಹರೀಶ್‌ ಉಪಾಧ್ಯಾಯ ಪೂಜಾವಿಧಿ ವಿಧಾನಗಳನ್ನು ನೆರವೇರಿಸಿ ಗಂಗಾಮಾತೆಗೆ ಭಾಗೀನ ಅರ್ಪಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ಮುಂದಾಳುಗಳಾದ ಹರಿರಾಮಚಂದ್ರ, ಕಂಗ್ವೆ ವಿಶ್ವನಾಥ ಶೆಟ್ಟಿಮತ್ತಿತರರಿದ್ದರು.

 

ಕರಾವಳಿಯಲ್ಲಿ ಮಳೆ ಮುಂದುವರಿದಿದ್ದು, ನೇತ್ರಾವತಿ ನದಿ ಮಟ್ಟವೂ ಹೆಚ್ಚುತ್ತಲೇ ಹೋಗಿದೆ. ಸಂಗಮ ಪೂಜೆಯ ಬಳಿಕವೂ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳ ಕಾಣಿಸಿದ ಕಾರಣ ಉಪ್ಪಿನಂಗಡಿ ಜನತೆ ನೆರೆ ಭೀತಿಗೆ ತುತ್ತಾಗಿದ್ದಾರೆ.

ಬೆಳಗಾವಿ: ಸಿಕ್ಕಾಕೊಂಡಿದ್ದಾರೆ 200ಕ್ಕೂ ಹೆಚ್ಚು ಜನ

PREV
click me!

Recommended Stories

ಬೆಳಗಾವಿಯಲ್ಲಿ ಅಪ್ರಾಪ್ತೆಯ ಅತ್ಯಾ*ಚಾರವೆಸಗಿದಾತನಿಗೆ 30 ವರ್ಷ ಜೈಲು, ಮಂಡ್ಯದಲ್ಲಿ ಚಿಂದಿ ಆಯುತ್ತಿದ್ದ ಅತ್ಯಾ*ಚಾರಿಗಳಿಗೆ ಜೀವಾವಧಿ ಪ್ರಕಟ
Lakkundi Excavation: ಬಯೋಮೆಟ್ರಿಕ್ ಹಾಜರಾತಿಗೆ ಹೈರಾಣಾದ ಕಾರ್ಮಿಕರು, ಬೆನ್ನಲ್ಲೇ ಹಣತೆ ಆಕಾರದ ಲೋಹದ ತುಂಡು ಪತ್ತೆ