ಬೆಳಗಾವಿ: ಸಿಕ್ಕಾಕೊಂಡಿದ್ದಾರೆ 200ಕ್ಕೂ ಹೆಚ್ಚು ಜನ

By Kannadaprabha NewsFirst Published Aug 10, 2019, 1:32 PM IST
Highlights

ರಾಜ್ಯಾದ್ಯಂತ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ನೆರೆ, ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಎಲ್ಲೆಡೆ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದರೂ ಇನ್ನೂ ಹಲವಾರು ಮಂದಿ ಸಂಪರ್ಕ ಸಿಗದೆ, ಪರದಾಡುತ್ತಿದ್ದಾರೆ. ಚಿಕ್ಕೋಡಿ ತಾಲೂಕಿನ ಸದಲಗಾ ಸಮೀಪ ಸಿಕ್ಕಿಹಾಕಿಕೊಂಡಿರುವ 200ಕ್ಕೂ ಹೆಚ್ಚು ಜನ ನೆರವು ಕೋರಿ ಸುವರ್ಣ ನ್ಯೂಸ್‌ಗೆ ಕರೆ ಮಾಡಿದ್ದಾರೆ.

ಬೆಳಗಾವಿ(ಆ.10): ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿರುವ 200ಕ್ಕೂ ಹೆಚ್ಚು ಜನ ದಯವಿಟ್ಟು ನಮಗೆ ಸಹಾಯ ನೀಡಿ. ನಾವಿಲ್ಲಿ ಸಿಕ್ಕಿಹಾಕಿಕೊಂಡಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತನ್ನಿ ಎಂದು ಸಂತ್ರಸ್ತರು ಸುವರ್ಣ ನ್ಯೂಸ್‌ಗೆ ಕರೆ ಮಾಡಿ ತಿಳಿಸಿದ್ದಾರೆ.

ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಪಡಾರದಡ್ಡಿಯಲ್ಲಿ 200 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ. ನಮ್ಮನ್ನ ಕಾಪಾಡಿ ಎಂದು ರಕ್ಷಣೆ ಕೇಳುತ್ತಿದ್ದಾರೆ. ದಯವಿಟ್ಟು ನಮ್ಮ ನೆರವಿಗೆ ಧಾವಿಸಿ ಎಂದು ಸುವರ್ಣ ನ್ಯೂಸ್‌ಗೆ ಕರೆ ಮಾಡಿ ತಿಳಿಸಿದ್ದಾರೆ.

ಸುವರ್ಣ ನ್ಯೂಸ್ ಗೆ ಕರೆ ಮಾಡಿ ಅಳಲನ್ನ ತೋಡಿಕೊಂಡಿರುವ ಸಂತ್ರಸ್ಥರು, ಕಳೆದ ಒಂದು ವಾರದಿಂದ ಪಡಾರಮಡ್ಡಿಯಲ್ಲಿ ಸಿಲುಕಿ ಹಾಕಿಕೊಂಡಿದ್ದೇವೆ. 10 ಜನರು ಜ್ವರದಿಂದ ಬಳಲುತ್ತಿದ್ದು, 20 ಜನರು ಅಸ್ವಸ್ಥರಾಗಿದ್ದಾರೆ. ನಮಗೆ ಊಟದ ವ್ಯವಸ್ಥೆ ಇಲ್ಲ. ನಾವು ನೆರವಿಗಾಗಿ ಕಾಯುತ್ತಿದ್ದೆವೆ ಎಂದಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಲ್ಲಾಡಳಿತ ಮೂರು ದಿನದಿಂದ ರಕ್ಷಣೆಗೆ ಬರುತ್ತೇವೆ ಅಂತ ಹೆಳಿದ್ದರು. ಯಾವುದೇ ಅಧಿಕಾರಿಗಳಾಗಲಿ, ಹೆಲಿಕಾಪ್ಟರ್ ಆಗಲಿ ನಮ್ಮ ರಕ್ಷಣೆ ಬಂದಿಲ್ಲ. ರಕ್ಷಣೆಗೆ ಬರುತ್ತೇವೆ ಎಂದು ಜಿಲ್ಲಾಡಳಿತ ಕೇವಲ ಭರವಸೆಯನ್ನಷ್ಟೇ ಕೊಟ್ಟಿದೆ. ನಾವು ಎಲ್ಲ ರಸ್ತೆ ಸಂಪರ್ಕಗಳನ್ನು ಕಳೆದುಕ್ಕೊಂಡಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

ಶಿವಮೊಗ್ಗ: ಜಿಲ್ಲಾಡಳಿತದಿಂದ 14 ನೆರೆ ಪರಿಹಾರ ಕೇಂದ್ರ

ನಮ್ಮ ನೆರವಿಗೆ ಇಂದು ಹೆಲಿಕಾಪ್ಟರ್ ಬರುತ್ತದೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಈ ವರದಿಯನ್ನ ನೋಡಿಯಾದರೂ ಜಿಲ್ಲಾಡಳಿತ ಎಚ್ಚೆತ್ತಕ್ಕೊಂಡು ಹೆಲಿಕಾಪ್ಟರ್ ಮುಖಾಂತರ ರಕ್ಷಣೆ ಮಾಡಬೇಕಿದೆ ಎಂದು ವಿನಂತಿಸಿದ್ದಾರೆ.

click me!