ಬಗರ್‌ಹುಕುಂ ರೈತರಿಗೆ ಸಾಗುವಳಿ ಪತ್ರ ನೀಡಲು ಒತ್ತಾಯ

By Kannadaprabha News  |  First Published Mar 19, 2023, 5:31 AM IST

ಬಗರ್‌ಹುಕುಂ ರೈತರಿಗೆ ಅಕ್ರಮ ಸಕ್ರಮ ಸಮಿತಿಯ ಮೂಲಕ ಸಾಗುವಳಿ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟಿಸಿತು.


  ಹುಣಸೂರು :  ಬಗರ್‌ಹುಕುಂ ರೈತರಿಗೆ ಅಕ್ರಮ ಸಕ್ರಮ ಸಮಿತಿಯ ಮೂಲಕ ಸಾಗುವಳಿ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟಿಸಿತು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಸಂಘದ ಕಾರ್ಯಕರ್ತರು ಬಗರ್‌ಹುಕುಂ ರೈತರು ಬದುಕಲಿ, ಸರ್ಕಾರ ಸಾಗುವಳಿ ಪತ್ರ ನೀಡಲಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.

Tap to resize

Latest Videos

ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್‌ ಸೂರ್ಯ, ಗುಂಡು ತೋಪು, ಗೋಮಾಳ ಮತ್ತು ಅರಣ್ಯ ಪ್ರದೇಶಗಳಲ್ಲಿ ಕಳೆದ 40 ವರ್ಷಗಳಿಂದ ಬಡ ಬಗರ್‌ ಹುಕುಂ ರೈತರು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ರೈತರು ಆನುಭವಿಸುತ್ತಿರುವ ಭೂಮಿಗೆ ಸಾಗುವಳಿ ಪತ್ರ ನೀಡಲು ಸರ್ಕಾರ ಫಾರಂ ನಂ. 50, 53ರ ಮೂಲಕ ಅರ್ಜಿ ಸಲ್ಲಿಸಲು ಘೋಷಿಸಿದ ಪರಿಣಾಮ ದಶಕಗಳ ಹಿಂದೆಯೇ ಬಡ ಅರ್ಜಿ ಸಲ್ಲಿಸಿದ್ದಾರೆ. ತಾಲೂಕು ಆಡಳಿತ ಕೂಡಲೇ ಬಗರ್‌ಹುಕುಂ ಸಾಗುವಳಿದಾರರನ್ನು ಪರಿಗಣಿಸಿ ಶೀಘ್ರ ಸಾಗುವಳಿ ಪತ್ರ ನೀಡಬೇಕೆಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಚಿಕ್ಕಣ್ಣೇಗೌಡ, ತಾಲೂಕು ಅಧ್ಯಕ್ಷ ಚಂದ್ರಶೇಖರ್‌, ಕಾರ್ಯದರ್ಶಿ ಪುಟ್ಟರಾಜು, ದಲಿತ ಹಕ್ಕುಗಳ ಸಮಿತಿ ಮುಖಂಡ ವೆಂಕಟೇಶ್‌ ಬೆಳ್ತೂರು, ಉಪೇಂದ್ರ, ಕೃಷ್ಣ, ಯಶೋದಮ್ಮ ಇದ್ದರು. ಶಿರಸ್ತೇದಾರ್‌ ಶಕೀಲಾಬಾನು ಅವರಿಗೆ ಮನವಿ ಸಲ್ಲಿಸಿತು.

ರೈತರ ಜೊತೆ ಚೆಲ್ಲಾಟ

 ತಿಪಟೂರು (ನ.15):  ಹಲವು ದಶಕಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಅರ್ಹ ರೈತರಿಗೆ ಹಕ್ಕು ಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ಬಗರ್‌ಹುಕುಂ ರೈತರ ಪ್ರತಿಭಟನಾ ಮೆರವಣಿಗೆ ನಗರದ ಕೋಡಿಸರ್ಕಲ್‌ನಿಂದ ತಾಲೂಕು ಕಚೇರಿಯವರೆಗೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಸಂಘಟನೆಯ ಜಿಲ್ಲಾ ಸಂಚಾಲಕ ಎಸ್‌. ಎನ್‌ . ಸ್ವಾಮಿ ಮಾತನಾಡಿ,  (Govt)  ಬಗರ್‌ಹುಕುಂ ರೈತರ ಸಂಕಷ್ಟವನ್ನು ಅರ್ಥಮಾಡಿಕೊಳ್ಳದೆ ಅವರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಬಗರ್‌ಹುಕುಂ  (Farmers)  ಅರಣ್ಯದಂಚಿನ ಭೂಮಿಯನ್ನು ಹಗಲು ರಾತ್ರಿ ಎನ್ನದೆ ಬೆವರು ಸುರಿಸಿ ಭೂಮಿ ಹಸನು ಮಾಡಿ ಅದನ್ನು ಕೃಷಿಯೋಗ್ಯವನ್ನಾಗಿಸಿ ದೇಶದ ಆಹಾರೋತ್ಪಾದನೆಗೆ ಕಾಣಿಕೆ ನೀಡುವಲ್ಲಿ ಅವರ ಪರಿಶ್ರಮ ಅಪಾರವಾಗಿದೆ. ಜೀವನೋಪಾಯಕ್ಕಾಗಿ ಸುಮಾರು 90 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಾ ಬರುತ್ತಿದ್ದಾರೆ. ಇವರಿಗೆ ಬರುವ ಅಲ್ಪಸ್ವಲ್ಪ ವರಮಾನವೇ ಜೀವನಾಧಾರವಾಗಿದ್ದು ಇಲ್ಲಿಯವರಗೆ ಆಳ್ವಿಕೆ ಮಾಡಿದ ಎಲ್ಲಾ ಸರ್ಕಾರಗಳು ಈ ಬಡ ಜನರ ಜೀವನದ ವಸ್ತುಸ್ಥಿತಿ ತಿಳಿದಿದ್ದು ಸರ್ಕಾರಕ್ಕೆ ಸೇರಿದ ಈ ಜಮೀನಿನಲ್ಲಿ ಉಳುಮೆಗೆ ಅವಕಾಶ ನೀಡುತ್ತ ಬಂದಿವೆ. ಆದರೆ ಸರ್ಕಾರಗಳು ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಶಾಸನ ಬದ್ಧವಾಗಿ ಭೂಮಿಯ ಹಕ್ಕು ದೊರೆಯದೆ ನೆಮ್ಮದಿ ಇಲ್ಲದೆ ದಶಕಗಳಿಂದ ತೀವ್ರ ಮಾನಸಿಕ ತೊಳಲಾಟದಿಂದ ಜರ್ಜರಿತರಾಗಿದ್ದಾರೆ. ಸಾಗುವಳಿ ರೈತರಿಗೆ ಭೂಮಿ ಮಂಜೂರಾತಿಯಾಗಿ ಖಾತೆ ಕೂಡ ಆಗಿದೆ. ಆದರೆ ಇಲಾಖೆಯ ತಪ್ಪಿನಿಂದಾಗಿ ರೈತರಿಗೆ ಸೇರಿದ ಭೂಮಿಯ ಗಣಕೀಕೃತ ಪಹಣಿಯಲ್ಲಿ ತಪ್ಪಾಗಿ ಅರಣ್ಯವೆಂದು ಸೇರಿಸಲಾಗಿದೆ. ಇದರಿಂದ ಹಸನು ಮಾಡಿ ಸುಸ್ತಾದ ರೈತರು ಮತ್ತೆ ಕೋರ್ಚ್‌, ಕಚೇರಿ ಸುತ್ತುವಂತಾಗಿದೆ. ಇದರ ನಡುವೆ ಈ ಜಮೀನುಗಳಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ, ಎತ್ತಿನಹೊಳೆ ಯೋಜನೆ, ಗ್ಯಾಸ್‌ ಲೈನ್‌, ಎಕಾನಾಮಿಕ್‌ ಕಾರಿಡಾರ್‌ ಮತ್ತು ಇಲಾಖೆಯ ಇತರೆ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಬೇಕು. ರೈತ ಹೋರಾಟ ಫಲವಾಗಿ ರೈತರಿಗೆ ಹಕ್ಕುಪತ್ರವನ್ನು ನೀಡಿದ್ದು, ಇನ್ನೂ ಲಕ್ಷಾಂತರ ರೈತರು ಹಕ್ಕುಪತ್ರ ಸಿಗದೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸರ್ಕಾರ ಕಂದಾಯ ಇಲಾಖೆಯ ಹೊಸ ನೀತಿ ಮತ್ತು ಅರಣ್ಯ ಇಲಾಖೆಯ ದಾಳಿಗಳಿಂದ ರೈತರ ಸಾಗುವಳಿ ಮಾಡುವುದೇ ದುಸ್ತರವಾಗಿದ್ದು, ಈ ಎಲ್ಲಾ ಬಗರ್‌ಹುಕುಂ ರೈತರ ಕಷ್ಟಗಳನ್ನು ಅರಿತು ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

click me!