ಜನಪ್ರತಿದಿನಗಳ ಆಯ್ಕೆಯಲ್ಲಿ ವಿಫಲರಾದರೆ ನೋಟಾ ಒತ್ತಿ

By Kannadaprabha News  |  First Published Mar 19, 2023, 5:27 AM IST

ಮತದಾನ ನಮ್ಮ ಹಕ್ಕು. ಮತವನ್ನು ಚಲಾಯಿಸಲೇಬೇಕು. ಆದರೆ ಜನಪ್ರತಿನಿದಿಗಳ ಆಯ್ಕೆಯಲ್ಲಿ ವಿಫಲರಾದರೆ ಮತವನ್ನು ಬಹಿಷ್ಕರಿಸಬೇಡಿ. ನೋಟಾ ಮತವನ್ನು ನೀಡಿ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಪ್ರಥಮ್‌ ಮೈಸೂರು ಸಂಸ್ಥಾಪಕ ಟ್ರಸ್ಟಿಅಶ್ವಿನಿ ರಂಜನ್‌ ಹೇಳಿದರು.


 ಮೈಸೂರು :  ಮತದಾನ ನಮ್ಮ ಹಕ್ಕು. ಮತವನ್ನು ಚಲಾಯಿಸಲೇಬೇಕು. ಆದರೆ ಜನಪ್ರತಿನಿದಿಗಳ ಆಯ್ಕೆಯಲ್ಲಿ ವಿಫಲರಾದರೆ ಮತವನ್ನು ಬಹಿಷ್ಕರಿಸಬೇಡಿ. ನೋಟಾ ಮತವನ್ನು ನೀಡಿ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ಪ್ರಥಮ್‌ ಮೈಸೂರು ಸಂಸ್ಥಾಪಕ ಟ್ರಸ್ಟಿಅಶ್ವಿನಿ ರಂಜನ್‌ ಹೇಳಿದರು.

ಮಾನಸಗಂಗೋತ್ರಿಯ ರಾಣಿ ಬಹುದ್ದೂರ್‌ ಸಭಾಂಗಣದಲ್ಲಿ ಮೈಸೂರು ಮುಕ್ತ ವೇದಿಕೆಯು ಶನಿವಾರ ಆಯೋಜಿಸಿದ್ದ ಭಾರತದಲ್ಲಿ ಭ್ರಷ್ಟಚುನಾವಣಾ ವ್ಯವಸ್ಥೆ ಹಾಗೂ ಅದರ ಸುಧಾರಣಾ ಮಾರ್ಗಗಳು ಕುರಿತಾಗಿ ನಾಗರಿಕ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆ ಭರದಲ್ಲಿ ಪಕ್ಷಗಳು ಹಲವಾರು ಉಚಿತ ಆಶ್ವಾಸನೆಗಳನ್ನು ನೀಡುತ್ತವೆ. ಉಚಿತತೆಯನ್ನುವುದು ಮಾನವನನ್ನು ಆಲಸಿತನಕ್ಕೆ ಗುರಿ ಮಾಡುತ್ತವೆ. ನೀರುದ್ಯೋಗ ಹೆಚ್ಚುತ್ತದೆ ಎಂದರು.

Latest Videos

undefined

ಚುನಾವಣೆ ಸಮೀಪಿಸಿದಂತೆ ಹಣ, ಹೆಂಡ, ಊಟದ ಆಮಿಷಗಳನ್ನು ಒಡ್ದುತ್ತವೆ.ಈ ಸಮೀಕರಣಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಂಡು ಬರುತ್ತವೆ. ನಾವು ಪ್ರಜಾಪ್ರಭುತ್ವದ ಬಗ್ಗೆ ಎಷ್ಟೇ ಮಾತನಾಡಿದರ್ರೂ ಅದು ಭ್ರಷ್ಟತೆಯತ್ತ ಸಾಗುತ್ತಿದೆ ಎಂದು ಅವರು ವಿಷಾದಿಸಿದರು.

ನಾವು ಭ್ರಷ್ಟರಿಗೆ ಅಧಿಕಾರ ನೀಡಿದರೆ ಸುಲಭವಾಗಿ ಎಲ್ಲವು ಭ್ರಷ್ಟಾಚಾರದಿಂದ ಕೂಡಿರುತ್ತದೆ. ಹೆಚ್ಚು ಹೆಚ್ಚು ಕ್ರಿಮಿನಲ್‌ ಪ್ರಕರಣಗಳು ದಾಖಲಾಗುತ್ತವೆ. ಕೊನೆಗೆ ನಮಗೆ ದೊರಕುವ ಫಲಿತಾಂಶ ಕರ್ನಾಟಕ ಭ್ರಷ್ಟಚಾರದಲ್ಲಿ ದೇಶದಲ್ಲಿಯೇ ಉನ್ನತ ದರ್ಜೆಯಲ್ಲಿದೆ ಎಂದು ಸಾಬೀತಾಗುತ್ತದೆ.ಇದಕ್ಕೆ ಪರಿಹಾರವೆಂದರೆ ನಮ್ಮ ದೇಶದಲ್ಲಿ ಮತದಾನ ಪ್ರತೀಶತ 62 ರಿಂದ 64 ಕ್ಕೆ ಅಸ್ತು ಎನ್ನುತ್ತದೆ ಇನ್ನುಳಿದ 38 ಪ್ರತೀಶತ ಮತದಾನವನ್ನು ಪೂರ್ಣ ಗೊಳಿಸಿದರೆ ಇಂತಹ ಹಿಂತಹ ಪ್ರಮೇಯಗಳನ್ನ ತಡೆಯಬಹುದು ಎಂದರು.

ಕೆಬಿನೆಟ್‌ ಕಾರ್ಯಾಲಯದ ಮಾಜಿ ಅಧಿಕಾರಿ ರವಿ ಜೋಶಿ ಮಾತನಾಡಿ, ಅಪರಾಧ ಹಿನ್ನೆಲೆಯುಳ್ಳವರು ಶಾಸನಸಭೆಗೆ ಆಯ್ಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಹಣ ಮತ್ತು ತೋಳ್ಬಲದಿಂದಲೇ ದೇಶವನ್ನು ಆಳುವ ಸಂಸ್ಕೃತಿ ಪ್ರಾರಂಭವಾಗಿದೆ. ಇದಕ್ಕೆ ಕಡಿವಾಣ ಹಾಕಲು ಯುವ ಸಮೂಹ ನಿರ್ಧರಿಸಬೇಕು ಎಂದರುಉ.

ಮೈಸೂರು ಮುಕ್ತ ವೇದಿಕೆ ಸಂಚಾಲಕ ಪ್ರೊ.ಎಂ.ಉಮಾಪತಿ, ಮೈಸೂರು ಮಿತ್ರ ಮತ್ತು ಸ್ಟಾರ್‌ ಆಫ್‌ ಮೈಸೂರು ಸಂಸ್ಥಾಪಕ ಸಂಪಾದಕ ಕೆ.ಬಿ.ಗಣಪತಿ, ರಾಜ್ಯಶಾಸ್ತ್ರ ಮುಖ್ಯಸ್ಥ ಪ್ರೊ.ಕೃಷ್ಣ ಹೊಂಬಾಳ್‌, ವಿಶ್ರಾಂತ ಕುಲಪತಿ ಪ್ರೊ.ಕೆ.ಸಿ. ಬೆಳ್ಳಿಯಪ್ಪ ಇದ್ದರು.

ಬೇಡಿಕೆ ಈಡೇರದಿದ್ದರೆ ನೋಟಾ ಎಚ್ಚರಿಕೆ

ಉತ್ತರ ಕನ್ನಡ (ಜ.25): ಪರಿಶಿಷ್ಟ ಪಂಗಡದ ಮೀಸಲಾತಿ ಹಾಗೂ ಇತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾಲಕ್ಕಿ ಸಮುದಾಯದ ಜನರು ಮತ್ತೆ ಬೀದಿಗಿಳಿದಿದ್ದಾರೆ. ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮು ಗೌಡ ಹಾಗೂ ತುಳಸಿಗೌಡ ಅವರ ನೇತೃತ್ವದಲ್ಲಿ ಹೋರಾಟ ನಡೆದಿದ್ದು, ಸಮುದಾಯಕ್ಕೆ ನ್ಯಾಯ ದೊರಕದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಮತದಾನ ನೋಟಾ ಹಾಕುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ. 

ಹೌದು! ಸಾಂವಿಧಾನಿಕ ನ್ಯಾಯಕ್ಕಾಗಿ ದಶಕಗಳಿಂದಲೂ ಹೋರಾಟ ನಡೆಸುತ್ತಿರುವ ಉತ್ತರ ನ್ನಡ ಜಿಲ್ಲೆಯ ಹಾಲಕ್ಕಿ ಸಮುದಾಯದ ಜನರು ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಲ್ಲದೇ,  ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಇಂದು ಮತ್ತೆ ಹೋರಾಟ ನಡೆಸಿದ್ದಾರೆ. ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮು ಗೌಡ ಹಾಗೂ ತುಳಸಿ ಗೌಡ ಅವರ ನೇತೃತ್ವದಲ್ಲಿ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಾಲಕ್ಕಿ ಸಮುದಾಯದ ಜನರು ಧರಣಿ ನಡೆಸುವ ಮೂಲಕ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ. 

ಯಾವುದೇ ಅಮಿಷೆಗಳಿಗೆ ಒಳಗಾಗಿ ಬಿಜೆಪಿಗೆ ಹೋಗಿಲ್ಲ: ಸಿದ್ದು ವಿರುದ್ಧ ಸಚಿವ ಬೈರತಿ ಗರಂ

ಹಾಲಕ್ಕಿ ಒಕ್ಕಲಿಗರು ಬುಡಕಟ್ಟು ಸಮುದಾಯಕ್ಕೆ ಸೇರಿದ್ದರೂ ಪರಿಶಿಷ್ಟ ಪಂಗಡದ ಮೀಸಲಾತಿ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಸಮುದಾಯದ ಸಾಕಷ್ಟು ಮಂದಿ ವಿದ್ಯಾವಂತ ಯುವಕ, ಯುವತಿಯರು ಮೀಸಲಾತಿ ಸಮಸ್ಯೆಯಿಂದಾಗಿ ಹೆಚ್ಚಿನ ಶಿಕ್ಷಣ ಪಡೆದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಹಾಲಕ್ಕಿಗರನ್ನು ಎಸ್‌ಟಿಗೆ ಸೇರ್ಪಡೆಗೊಳಿಸಬೇಕೆಂದು ಪದ್ಮಶ್ರೀ ಪುರಸ್ಕೃತರಾದ ಸುಕ್ರಜ್ಜಿ ಹಾಗೂ ತುಳಸಜ್ಜಿ ಒತ್ತಾಯಿಸಿದ್ದಾರೆ. ಈ ಹಿಂದೆ ಕದಂಬ ನೌಕಾನೆಲೆಯಂತಹ ರಾಷ್ಟ್ರದ ಪ್ರತಿಷ್ಠಿತ ಯೋಜನೆಗಳಿಗೆ ಭೂಮಿ ನೀಡಿ ನಿರಾಶ್ರಿತರಾದವರಲ್ಲಿ ಹಾಲಕ್ಕಿ ಒಕ್ಕಲಿಗರ ಸಂಖ್ಯೆ ಹೆಚ್ಚಿದ್ದು, ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿರುವ ಈ ಸಮುದಾಯದ ಬೇಡಿಕೆಯನ್ನು ಸರ್ಕಾರ ಈಡೇರಿಸದಿರುವುದು ಬೇಸರ ಮೂಡಿಸಿದೆ ಎಂದು ಅವರು ಹೇಳಿದರು. 

click me!