ಹೆಚ್ಚಿದ ಕಡಲ್ಕೊರೆತ: ನೆಲಕಚ್ಚುತ್ತಿದೆ ತಿಮ್ಮಕ್ಕ ವನದ ಬೇಲಿ

Published : Jun 27, 2020, 08:53 AM IST
ಹೆಚ್ಚಿದ ಕಡಲ್ಕೊರೆತ: ನೆಲಕಚ್ಚುತ್ತಿದೆ ತಿಮ್ಮಕ್ಕ ವನದ ಬೇಲಿ

ಸಾರಾಂಶ

ಮಳೆಗಾಲ ಆರಂಭವಾಗುತ್ತಿದ್ದಂತೆ ಸಮುದ್ರದಲ್ಲಿ ಅಲೆಗಳಬ್ಬರ ಹೆಚ್ಚಾಗಿದ್ದು, ಇಲ್ಲಿನ ಸಾಲು ಮರದ ತಿಮ್ಮಕ್ಕ ವನದ ಬಳಿ ಕಡಲ್ಕೊರೆತವಾಗಿ ಬೇಲಿಗಳು ನೆಲಕಚ್ಚುತ್ತಿವೆ.

ಕಾರವಾರ(ಜೂ.27): ಮಳೆಗಾಲ ಆರಂಭವಾಗುತ್ತಿದ್ದಂತೆ ಸಮುದ್ರದಲ್ಲಿ ಅಲೆಗಳಬ್ಬರ ಹೆಚ್ಚಾಗಿದ್ದು, ಇಲ್ಲಿನ ಸಾಲು ಮರದ ತಿಮ್ಮಕ್ಕ ವನದ ಬಳಿ ಕಡಲ್ಕೊರೆತವಾಗಿ ಬೇಲಿಗಳು ನೆಲಕಚ್ಚುತ್ತಿವೆ.

ಈ ವನದ ಒಂದು ಪಾಶ್ರ್ವ ಅರಬ್ಬಿ ಸಮುದ್ರದ ತೀರಕ್ಕೆ ಸಮೀಪ ಇರುವುದರಿಂದ ವನಕ್ಕೆ ಭದ್ರತಾ ದೃಷ್ಟಿಯಿಂದ ನಿರ್ಮಿಸಿದ್ದ ಆವಾರದ ಬೇಲಿಯ 6-8 ಕಂಬಗಳು ಕಿತ್ತುಕೊಂಡು ಹೋಗಿದೆ. ವನದಲ್ಲಿ ಇರುವ 11 ಮರ ಈಗಾಗಲೇ ಉಳುಳಿವೆ. 6 ಮರಗಳು ವಾಲಿವೆ. ಅಲೆಗಳ ನೀರಿನಿಂದ ಮಣ್ಣು ಸಡಿಲಗೊಂಡು ಧರೆಗುರುಳುತ್ತಿವೆ.

ಹಿರೇಕೆರೂರು: ಕೊರೋನಾ ಭೀತಿ, ಬಸ್‌ಗಳಲ್ಲಿ ಸಾಮಾಜಿಕ ಅಂತರಕ್ಕೆ ಡೋಂಟ್‌ ಕೇರ್‌

2 ವರ್ಷಗಳ ಹಿಂದೆ ಇಲ್ಲಿನ ರಾಕ್‌ ಗಾರ್ಡನ್‌ ಹಿಂಭಾಗದಲ್ಲಿ ಕಡಲ್ಕೊರೆತ ಆಗುತ್ತಿತ್ತು. ಆದರೆ, ಪ್ರಸಕ್ತ ವರ್ಷ ರಾಕ್‌ ಗಾರ್ಡನ್‌ ಸಮೀಪ ಹೆಚ್ಚಿನ ಪ್ರಮಾಣದಲ್ಲಿ ಕಡಲ್ಕೊರೆತ ಉಂಟಾಗಿಲ್ಲ. ಬದಲಾಗಿ ಸಾಲು ಮರದ ತಿಮ್ಮಕ್ಕ ವನದ ಬಳಿ ಕೊರೆತ ಆಗುತ್ತಿದೆ. ರಾಜ್ಯ ಸರ್ಕಾರ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಸಾಲು ಮರದ ತಿಮ್ಮಕ್ಕ ಹೆಸರಿನಲ್ಲಿ ವನ ನಿರ್ಮಾಣ ಮಾಡಿದೆ. ಆದರೆ, ಇಲ್ಲಿನ ವನ ಸಮುದ್ರ ಭಾಗದಲ್ಲಿ ಅಲೆ ತಡೆಗೋಡೆ ಇಲ್ಲದೇ ಅಪಾಯವನ್ನು ಎದುರಿಸುತ್ತಿವೆ.

ಛಿದ್ರವಾದ ಹಸಿರು ತಡೆಗೋಡೆ:

ಪಶ್ಚಿಮ ಘಟ್ಟಕಾರ್ಯಪಡೆ ದಶಕದ ಹಿಂದೆ ನಗರದ ಸಾಗರ ದರ್ಶನದ ಹಿಂಭಾಗದ ಸಮುದ್ರದ ಅಂಚಿನಲ್ಲಿ ಸಾವಿರಾರು ಹೊನ್ನೆ ಜಾತಿಯ ಗಿಡಗಳನ್ನು ನೆಟ್ಟು ಹಸಿರು ತಡೆಗೋಡೆ ಎಂದು ನಾಮಕರಣ ಮಾಡಿತ್ತು. ಆದರೆ ಈಗ ಈ ಹಸಿರು ತಡೆಗೋಡೆ ಛಿದ್ರವಾಗಿದೆ. ಕಡಲ್ಕೊರೆತದಿಂದ ಹೊನ್ನೆ ಮರಗಳು ಧರೆಗೆ ಉರುಳಿ ಬೆರಳೆಣಿಕೆಯಷ್ಟುಉಳಿದುಕೊಂಡಿದೆ. ಅಲೆ ತಡೆಗೋಡೆ ಎಂದು ಕಲ್ಲುಗಳನ್ನು ಹಾಕುವ ಬದಲು ಗಿಡ ನೆಟ್ಟು ಕಡಲ್ಕೊರೆತ ತಪ್ಪಿಸುವ ಉದ್ದೇಶವಿತ್ತು. ಆದರೆ, ಸಮುದ್ರದ ಅಲೆಗಳು ಮರಗಳನ್ನು ಆಪೋಷನ ತೆಗೆದುಕೊಳ್ಳುತ್ತಿವೆ.

ಹಾವೇರಿ: ಜುಲೈನಲ್ಲಿ ಕೊರೋನಾ ಸ್ಫೋಟ, 3 ಸಾವಿರಕ್ಕೂ ಹೆಚ್ಚು ಪಾಸಿಟಿವ್‌ ಕೇಸ್‌!

ಕಂಬ, ಮರ ಬಿದ್ದಿರುವುದು ಗಮನಕ್ಕೆ ಇರಲಿಲ್ಲ. ಕೂಡಲೇ ಪರಿಶೀಲನೆ ಮಾಡಲು ಸೂಚನೆ ಕೊಡುತ್ತೇನೆ. ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ವಸಂತ ರೆಡ್ಡಿ, ಡಿಎಫ್‌ಒ ಕಾರವಾರ

-ಜಿ.ಡಿ. ಹೆಗಡೆ

PREV
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!