ಹುನಗುಂದ: ಹುಲಿಗೆಮ್ಮನ ದರ್ಶನ ಪಡೆದು ವಾಪಸ್‌ ಬರೋ ವೇಳೆ ಭೀಕರ ಅಪಘಾತ, ನಾಲ್ವರ ದುರ್ಮರಣ

By Girish Goudar  |  First Published Sep 26, 2024, 8:50 AM IST

ಲಾರಿ-ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ ಟೋಲ್ ನಾಕಾದ ಬಳಿ ನಡೆದಿದೆ. 


ಬಾಗಲಕೋಟೆ(ಸೆ.26):  ಲಾರಿ-ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರ ಟೋಲ್ ನಾಕಾದ ಬಳಿ ಇಂದು(ಗುರುವಾರ) ನಡೆದಿದೆ. 

ಧನ್ನೂರ ಟೋಲ್‌ ನಾಕಾ‌ ಬಳಿ ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದೆ. ಮೃತರನ್ನ ಲಕ್ಣ್ಮಣ (55), ಬೈಲಪ್ಪ  (45), ರಾಮಣ್ಣ  (50), ಕಾರು ಚಾಲಕ ಮಹಮ್ಮದ್ ರಫೀಕ್ ಗುಡ್ನಾಳ (25) ಎಂದು ಗುರುತಿಸಲಾಗಿದೆ. 

Tap to resize

Latest Videos

undefined

ಚಿಕ್ಕಬಳ್ಳಾಪುರ: ಸತ್ತ ನಾಯಿಯನ್ನು ಪಕ್ಕಕ್ಕಿಡುವ ವೇಳೆ ಕಾರು ಡಿಕ್ಕಿ, ಯುವಕ ಸಾವು

ಮೃತರೆಲ್ಲರೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮೂಲದವರಾಗಿದ್ದಾರೆ. ಹುಲಿಗೆಮ್ಮನ ದರ್ಶನ ಮುಗಿಸಿಕೊಂಡು ವಾಪಸ್‌ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.  ಹುನಗುಂದ ಮೂಲಕ ಮುದ್ದೇಬಿಹಾಳಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀರಿ ಪರಿಶೀಲನೆ ನಡೆಸಿದ್ದಾರೆ. 

click me!