ಯತ್ನಾಳ ಫೋಟೋ ಹಾಕಿ ಸೀಡಿ ಬಿಡುಗಡೆ ಪೋಸ್ಟ್‌ : ಕೇಸ್‌ ದಾಖಲು

By Kannadaprabha News  |  First Published Oct 14, 2021, 7:39 AM IST
  • ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪೋಸ್ಟ್
  • ಫೋಟೋ ಹಾಕಿ ‘ಸೀಡಿ ಬಿಡುಗಡೆಗೆ ಕ್ಷಣಗಣನೆ’ ಎಂದು ಪೋಸ್ಟ್‌ ಮಾಡಿದವರ ವಿರುದ್ಧ ಬುಧವಾರ ರಾತ್ರಿ ಪ್ರಕರಣ 

 ವಿಜಯಪುರ (ಅ.14):  ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ (Instagram) ವಿಜಯಪುರ (Vjayapura) ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basanagouda Patil yatnal) ಅವರ ಫೋಟೋ ಹಾಕಿ ‘ಸೀಡಿ (CD) ಬಿಡುಗಡೆಗೆ ಕ್ಷಣಗಣನೆ’ ಎಂದು ಪೋಸ್ಟ್‌ ಮಾಡಿದವರ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಾಗಿದೆ. 

ಶಾಸಕರ ವಿರುದ್ಧ ಅಶ್ಲೀಲ ಪೋಸ್ಟ್‌ ಮಾಡಲಾಗಿದೆ ಎಂದು ಆರೋಪಿಸಿ ಲಕ್ಷ್ಮಣ ಜಾಧವ (Laxman Jadhav) ಎಂಬುವವರು ವಿಜಯಪುರದ ಸಿಇಎನ್‌ (CEN) ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Latest Videos

undefined

ಮೊದಲ ಬಾರಿಗೆ ಯಡಿಯೂರಪ್ಪಗೆ ಜೈ ಎಂದ ಯತ್ನಾಳ್‌..!

‘ನಮ್ಮ ಕಾಂಗ್ರೆಸ್‌’ (Namma Congress) ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ಬಿಜೆಪಿ (BJP) ಹಿಂದೂ ಹುಲಿಯ ಸೀಡಿ ಬಿಡುಗಡೆಗೆ ಕ್ಷಣಗಣನೆ, ಭರ್ಜರಿ ಯಶಸ್ಸು ಕಾಣಲಿ’ ಎಂದು ಆಶಿಸುತ್ತೇವೆ ಎಂದು ಯಾರೋ ಕಿಡಿಗೇಡಿಗಳು ಪೋಸ್ಟ್‌ ಮಾಡಿದ್ದಾರೆ ಎಂದು ಲಕ್ಷ್ಮಣ ತಮ್ಮ ದೂರಿನಲ್ಲಿ ಹೇಳಿದ್ದಾರೆ. 

ಶಾಸಕರಿಗೆ ಅವಮಾನ ಮಾಡಿದವರನ್ನು ಶೀಘ್ರ ಪತ್ತೆ ಹಚ್ಚಿ, ಶಿಕ್ಷೆ ನೀಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಬಸನಗೌಡ ಪಾಟೀಲ ಯತ್ನಾಳ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ದೊಷಮುಕ್ತರಾದ ಯತ್ನಾಳ್

 

ನಗರದಲ್ಲಿ 2014ರ ಮೇ 26ರಂದು ನಡೆದಿದ್ದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basanagouda patil yatnal) ಸೇರಿ ಎಲ್ಲ ಆರೋಪಿಗಳನ್ನು ದೋಷ ಮುಕ್ತಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ. 

2014ರ ಮೇಲೆ 26ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಮಯದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಜಯಪುರದ (Vijayapura) ಸಿದ್ದೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವ ಮೆರವಣಿಗೆ ಏರ್ಪಡಿಸಿದ್ದರು. 

ಮಾಜಿ ಸಿಎಂಗಳಿಂದ ಪಂಚಮಸಾಲಿಗೆ ಅನ್ಯಾಯ: ಸ್ವಪಕ್ಷದವರ ವಿರುದ್ಧ ಗುಡುಗಿದ ಯತ್ನಾಳ್‌

ಈ ಮೆರವಣಿಗೆ ಗಾಂಧಿ ವೃತ್ತ ತಲುಪುತ್ತಿದ್ದಂತೆಯೇ ಕಲ್ಲು ತೂರಾಟ, ಗಲಾಟೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಕೋಮುಗಳ ಹಲವಾರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ ತನ್ನ ತೀರ್ಪು ಪ್ರಕಟಿಸಿದೆ.

ಭರವಸೆ ಸಿಕ್ಕರೆ ಹೋರಾಟ ಮುಂದಕ್ಕೆ

ಸರ್ಕಾರದಿಂದ ಪಂಚಮಸಾಲಿ (Panchamasali) 2ಎ ಮೀಸಲಾತಿ ಭರವಸೆ ಸಿಕ್ಕಲ್ಲಿ ಹೋರಾಟ ಮುಂದೆ ಹಾಕುತ್ತೇವೆ ಎಂದು ಹೋರಾಟದ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ್‌ (Basanagouda patil yatnal ) ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ಟೋಬರ್‌ ಒಂದರಂದು ನಡೆಯಲಿರುವ ಹೋರಾಟದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಪಂಚಮಸಾಲಿ ಪಂಚಾಯತ್‌ ನಂತರ ಅ.1ಕ್ಕೆ ಬೆಂಗಳೂರಿನಲ್ಲಿ(Bengaluru) ಹೋರಾಟ ನಡೆಯಲಿದೆ. 

click me!