ಪ್ರಚೋದನಾಕಾರಿ ಭಾಷಣ: ಸೋಮಶೇಖರ್ ರೆಡ್ಡಿ ವಿರುದ್ಧ ದೂರು

By Suvarna News  |  First Published Jan 4, 2020, 9:35 AM IST

ಪ್ರಚೋದನಾಕಾರಿ ಭಾಷಣ| ಸೋಮಶೇಖರ್ ರೆಡ್ಡಿ ವಿರುದ್ಧ ರಾಯಚೂರು ಎಡಪಂಥೀಯ ಸಂಘಟನೆಗಳ ಮುಖಂಡ ಆರ್ ಮಾನಸಯ್ಯ ಎಂಬುವರು ಹಾಗೂ ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆಯಿಂದ ದೂರು ದಾಖಲು| ಸಿಎಎ ಮತ್ತು ಎನ್‌ಆರ್‌ಸಿ ವಿರೋಧ ಮಾಡುವರು ಪಾಕಿಸ್ತಾನಕ್ಕೆ ಹೋಗಲಿ ಎಂದಿದ್ದ ಸೋಮಶೇಖರ್ ರೆಡ್ಡಿ|


ರಾಯಚೂರು(ಜ.04): ಪ್ರಚೋದನಾಕಾರಿ ಭಾಷಣ ಮಾಡಿದ ಹಿನ್ನಲೆಯಲ್ಲಿ ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ. 

ರಾಯಚೂರು ಎಡಪಂಥೀಯ ಸಂಘಟನೆಗಳ ಮುಖಂಡ ಆರ್ ಮಾನಸಯ್ಯ ಎಂಬುವರು ಹಾಗೂ ಸಂವಿಧಾನ ಹಕ್ಕುಗಳ ನಾಗರಿಕ ವೇದಿಕೆ ಕೂಡ ನಗರದ ಸದರ್ ಬಜಾರ್ ಠಾಣೆಯಲ್ಲಿ ಶಾಸಕ‌ ಸೋಮಶೇಖರ್ ವಿರುದ್ಧ ದೂರು ದಾಖಲಿಸಿದ್ದಾರೆ. 

Tap to resize

Latest Videos

ಶುಕ್ರವಾರ ಬಳ್ಳಾರಿಯಲ್ಲಿ ನಡೆದ ಪೌರತ್ವ ಕಾಯ್ದೆ ಪರ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಸೋಮಶೇಖರ್ ರೆಡ್ಡಿ ಸಿಎಎ ಮತ್ತು ಎನ್‌ಆರ್‌ಸಿ ವಿರೋಧ ಮಾಡುವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದರು. 

‘ಮುಸ್ಲಿಮರು 10 ಮಕ್ಕಳನ್ನ ಹೆತ್ತರೆ, ಹಿಂದೂಗಳು 50 ಮಕ್ಕಳಿಗೆ ಜನ್ಮ ನೀಡುತ್ತೇವೆ’

ಶಾಸಕ ಸೋಮಶೇಖರ್ ತಮ್ಮ ಮಾತುಗಳ ಮುಖಾಂತರ ಸಂವಿಧಾನದ ಮೇಲೆ ದಾಳಿ ಮಾಡಿದ್ದಾರೆ.ಶಾಂತಿ, ಸುವ್ಯವಸ್ಥೆ, ಕಾನೂನಿನ ಮೇಲೆ ದಾಳಿ‌ ನಡೆಸಿದ್ದಾರೆ ಎಂದು ಆರ್ .ಮಾನಸಯ್ಯ ಅವರು ಆಕ್ರೋಷ ವ್ಯಕ್ತಪಡಿಸಿದ್ದರು. ಶಾಸಕ‌ ದೂರು ದಾಖಲಿಸಿದ ಬಳಿಕ ಮಾತನಾಡಿದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
 

click me!