ಗ್ರಾ.ಪಂ ಸದಸ್ಯರ ಉಪಟಳ ತಾಳಲಾರದೇ ಪೋಲಿಸರಿಗೆ ದೂರು

By Kannadaprabha News  |  First Published Dec 8, 2023, 9:24 AM IST

ಸೊರವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಂದೇಶ್ ಅವರ ಉಪಟಳ ತಾಳಲಾರದೇ ಅವರ ವಿರುದ್ಧ ಪೋಲಿಸರಿಗೆ ದೂರು ನೀಡುವುದು ಅನಿವಾರ್ಯ ಎಂದು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಕೃಷ್ಣಸ್ವಾಮಿ ಮತ್ತು ಉಪಾಧ್ಯಕ್ಷ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.


  ತುರುವೇಕೆರೆ : ಸೊರವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಂದೇಶ್ ಅವರ ಉಪಟಳ ತಾಳಲಾರದೇ ಅವರ ವಿರುದ್ಧ ಪೋಲಿಸರಿಗೆ ದೂರು ನೀಡುವುದು ಅನಿವಾರ್ಯ ಎಂದು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಕೃಷ್ಣಸ್ವಾಮಿ ಮತ್ತು ಉಪಾಧ್ಯಕ್ಷ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

ಹೊಣಕೆರೆಯಲ್ಲಿ ಕಳೆದ ಆರೇಳು ತಿಂಗಳ ಹಿಂದೆಯೇ ಸಾರ್ವಜನಿಕರ ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದು, ತಂತಿ ಬೇಲಿ ನಿರ್ಮಿಸಿ ತೊಂದರೆ ನೀಡಲಾಗಿದೆ.

Latest Videos

undefined

ಈ ಸಂಬಂಧ ಗ್ರಾ.ಪಂ. ಸದಸ್ಯರಾಗಿರುವ ಸಂದೇಶ್ ಅವರು ಈ ಕುರಿತು ಗ್ರಾ.ಪಂ.ಗೆ ದೂರು ನೀಡಿರಲಿಲ್ಲ. ಕೇವಲ ಒಂದೂವರೆ ತಿಂಗಳ ಹಿಂದೆ ಬಂದಿರುವ ಪಿಡಿಒ ಚಂದ್ರೇಶೇಖರ್ ಅವರ ಮೇಲೆ ವೈಯಕ್ತಿಕ ದ್ವೇಷದಿಂದ ಸಂದೇಶ್ ಸರ್ವಾಧಿಕಾರಿ ಧೋರಣೆ ಮಾಡುತ್ತಿದ್ದಾರೆ. ತಮಗೆ ಬೇಕಾದ ಕೆಲಸ ಮಾಡಿಕೊಡಲೇಬೇಕೆಂದು ತಕರಾರು ತೆಗೆಯುತ್ತಾರೆ ಎಂದು ಹೇಳಿದರು.

ಸೊರವನಹಳ್ಳಿ ಗ್ರಾ.ಪಂ.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಿಂದುಳಿದ ವರ್ಗದ ನಾವು ಆಯ್ಕೆಯಾಗಿರುವುದು ಅವರಿಗೆ ಅಸಮಾಧಾನವಿದೆ. ಹಾಗಾಗಿ, ಇಲ್ಲದ ಕಿರುಕುಳ ನೀಡುತ್ತಲೇ ಇದ್ದಾರೆ. ಅವರ ಉಪಟಳ ತಾಳಲಾರದೇ ನಾವು ಪೋಲಿಸರಿಗೆ ದೂರು ನೀಡಬೇಕಾಯಿತು ಎಂದರು.

ಮುಂಬರುವ ದಿನಗಳಲ್ಲಿ ಗ್ರಾ.ಪಂ.ಕಾರ್ಯಕಲಾಪಗಳಲ್ಲಿ ತೊಂದರೆ ಉಂಟು ಮಾಡಿದಲ್ಲಿ ಅದಕ್ಕೆ ಅವರೇ ನೇರ ಹೊಣೆ. ಅವರಿಂದ ನಮಗೆ ರಕ್ಷಣೆ ಬೇಕಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಬೊಮ್ಮೇನಹಳ್ಳಿಯ ಗ್ರಾ.ಪಂ. ಸದಸ್ಯ ಮಹಲಿಂಗಯ್ಯ ಇದ್ದರು.

 ನಿರ್ಧಯವಾಗಿ ಕೊಲೆಗೈದ 

ಹಾವೇರಿ (ನ.04): ಕುಟುಂಬದ ನಡುವಿನ ಜಗಳದಿಂದಾಗಿ ಮೈದುನ ತನ್ನ ಅತ್ತಿಗೆ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಹತ್ಯೆಗೈದಿದ್ದಾನೆ. ಹೌದು! ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಈ ಭೀಕರ ಘಟನೆ ಸಂಭವಿಸಿದೆ. ಯಳ್ಳೂರು ಗ್ರಾಮದ ಕುಮಾರಗೌಡ್ ಮರಿಗೌಡ್ರು ((35) ತನ್ನ ಅಣ್ಣನ ಹೆಂಡತಿ ಗೀತಾ ಮರಿಗೌಡ್ರು 32 ಹಾಗೂ ಅವರ ಮಕ್ಕಳಾದ ಅಕುಲ್ 10 ಹಾಗೂ ಏಳು ವರ್ಷದ ಅಂಕಿತಾಳನ್ನು ಕೊಲೆಗೈದು ಪರಾರಿಯಾಗಿದ್ದಾನೆ. 

ಈ ಕೊಲೆಗೆ ಕುಟುಂಬದಲ್ಲಿ ನಡೆದ ಜಗಳವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಇನ್ನು ಮೃತ ಮಹಿಳೆಯ ಗಂಡ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಸದ್ಯ ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ನಾಪತ್ತೆಯಾಗಿರುವ ಕುಮಾರಗೌಡನಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಸ್ಥಳಕ್ಕೆ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೈಕಮಾಂಡ್ ನೀನು ಸಿಎಂ ಆಗು ಅಂದರೇ ನಾನು ಸಿದ್ಧನಿದ್ದೇನೆ: ಸಚಿವ ಪ್ರಿಯಾಂಕ್ ಖರ್ಗೆ

ಕಾಂಗ್ರೆಸ್ ಮುಖಂಡ ಪ್ರಸಾದ ಮದ್ಲಾಪುರು ಬರ್ಬರ ಹತ್ಯೆ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡ ಪ್ರಸಾದ ಮದ್ಲಾಪುರು ಎನ್ನುವ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ಬಳಿ ಸೋಮವಾರ ಬೆಳಗ್ಗೆ 6.30ಕ್ಕೆ ನಡೆದಿದೆ. ಕೊಲೆಯಾದ ವ್ಯಕ್ತಿಯು ಮದ್ಲಾಪುರ ಗ್ರಾಮದ ಪ್ರಸಾದ್ (38) ಸೋಮವಾರ ಬೆಳಗ್ಗೆ ತಮ್ಮ ಜಮೀನಿನಲ್ಲಿ ಭತ್ತದ ಗದ್ದೆಗೆ ನೀರು ಹಾಯಿಸಲು ತೆರಳಿದ್ದಾಗ ಗುಂಪೂಂದು ಏಕಾಏಕಿ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದೆ. 

click me!