ಮಂಗ್ಳೂರು: ಹೆರಿಗೆಯಾಗಿದ್ದು ಹೆಣ್ಣು, ಆಸ್ಪತ್ರೆಯವರು ಕೊಟ್ಟಿದ್ದು ಗಂಡು ಮಗು..!

By Suvarna NewsFirst Published Oct 15, 2021, 2:28 PM IST
Highlights

*  ಮಂಗಳೂರು ಲೇಡಿಗೋಷನ್ ಹೆರಿಗೆ ಆಸ್ಪತ್ರೆ ವಿರುದ್ಧ ದೂರು
*  ಎಲ್ಲ ದಾಖಲೆಗಳಲ್ಲೂ ಹೆಣ್ಣು ಮಗು ಎಂದೇ ಉಲ್ಲೇಖಿಸಿದ್ದ ಆಸ್ಪತ್ರೆ ಸಿಬ್ಬಂದಿ
*  ದಾಖಲೆಗಳಲ್ಲಿ ಹೆಣ್ಣು ಮಗು ಅಂತ ತೋರಿಸಿ ಗಂಡು ಮಗು ನೀಡಿದ ಆಸ್ಪತ್ರೆ 

ಮಂಗಳೂರು(ಅ.15):  ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ(Government Maternity Hospital) ನವಜಾತ ಶಿಶು ಬದಲಿಸಿದ ಗಂಭೀರ ಆರೋಪ ನಗರದ(Mangaluru) ಸರ್ಕಾರಿ ಲೇಡಿಗೋಷನ್ ಹೆರಿಗೆ ಆಸ್ಪತ್ರೆ(Govt Lady Goschen Hospital) ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಆಸ್ಪತ್ರೆಯ ದಾಖಲೆಗಳಲ್ಲಿ ಹೆಣ್ಣು ಮಗು(Female Child)ಅಂತ ತೋರಿಸಿ ಗಂಡು ಮಗು(Male Child) ಕೊಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಉಡುಪಿ(Udupi) ಜಿಲ್ಲೆಯ ಕುಂದಾಪುರ(Kundapur) ತಾಲೂಕಿನ ಕೋಟೇಶ್ವರ ಮೂಲದ ಮುಸ್ತಫಾ ಎಂಬವರ ಪತ್ನಿ ಅಮ್ರೀನಾ ಎಂಬುವರು ಹೆರಿಗೆಗೆಂದು(Delivery) ಸೆ.27ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. 

ಪೊದೆಯಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆ : ಹುಟ್ಟಿದ ಕೂಡಲೆ ಎಸೆದಿರುವ ದುರುಳರು

ಅದೇ ದಿನ ಹೆರಿಗೆಯಾಗಿದ್ದು ಹೆಣ್ಣು‌ ಮಗು ಜನಿಸಿದ ಅಂತ ಕುಟುಂಬಸ್ಥರಿಗೆ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು ಎಂದು ಹೇಳಲಾಗುತ್ತಿದೆ. ಬಳಿಕ ಮಗುವಿಗೆ ತೀವ್ರ ಅನಾರೋಗ್ಯ ಇದ್ದ ಕಾರಣ ಎನ್‌ಐಸಿಯುಗೆ ದಾಖಲು ಮಾಡಲಾಗಿತ್ತು. 

ಎಲ್ಲ ದಾಖಲೆಗಳಲ್ಲೂ ಹೆಣ್ಣು ಮಗು ಎಂದೇ ಆಸ್ಪತ್ರೆ ಸಿಬ್ಬಂದಿ ಉಲ್ಲೇಖಿಸಿದ್ದರು. ಆದರೆ. ಅ.14ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್(Discharge) ಆಗಿ ಮನೆಗೆ ಹೋದ ಬಳಿಕ ಗಂಡು ಮಗು ಕೊಟ್ಟಿರುವುದು ಬೆಳಕಿಗೆ ಬಂದಿದೆ.  ಆಸ್ಪತ್ರೆ ದಾಖಲೆಗಳಲ್ಲೇ ಹೆಣ್ಣು ಮಗು ಅಂತ ಇದ್ದರೂ ಆಸ್ಪತ್ರೆ ಸಿಬ್ಬಂದಿ ಮಾತ್ರ ಗಂಡು ಮಗು ಕೊಟ್ಟಿದ್ದಾರೆ. ಹೀಗಾಗಿ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಪೊಲೀಸ್(Police) ಠಾಣೆಯಲ್ಲಿ ದೂರು ನೀಡಲಾಗಿದೆ. 
 

click me!