ರಾಯಚೂರು: ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರ ದುರ್ಮರಣ

Suvarna News   | Asianet News
Published : Oct 15, 2021, 12:09 PM IST
ರಾಯಚೂರು: ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರ ದುರ್ಮರಣ

ಸಾರಾಂಶ

*   ರಾಯಚೂರು ತಾಲೂಕಿನ ನಲ್ಲಬಂಡಾ ಕ್ರಾಸ್ ಬಳಿ ನಡೆದ ಘಟನೆ *   ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು *   ಈ ಸಂಬಂಧ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ರಾಯಚೂರು(ಅ.15):  ರಾಜ್ಯದಲ್ಲಿ ದಸರಾ(Dasara) ಹಬ್ಬದ ಸಂಭ್ರಮದ ಮಧ್ಯೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಹೌದು, ಬೈಕ್(Bike) ಸ್ಕಿಡ್ ಆಗಿ ಬಿದ್ದು ಇಬ್ಬರು ಮೃತಪಟ್ಟ(Death) ಘಟನೆ ತಾಲೂಕಿನ ನಲ್ಲಬಂಡಾ ಕ್ರಾಸ್ ಬಳಿ ಇಂದು(ಶುಕ್ರವಾರ) ನಡೆದಿದೆ.  ಅಪಘಾತದಲ್ಲಿ(Accident) ದೀಪಕ್ (22) , ಹುಸೇನ್ (23) ಎಂಬುವರೇ ಸಾವನ್ನಪ್ಪಿದ್ದ ದುರ್ದೈವಿಗಳಾಗಿದ್ದಾರೆ. 

ಮೃತರು ರಾಯಚೂರು(Raichur) ನಗರದ ತಿಮ್ಮಪೂರ ಪೇಟೆ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.  ಅಣ್ಣನನ್ನ ಬೈಕ್‌ನಲ್ಲಿ ಕರೆದುಕೊಂಡು ಬರಲು ಹೋದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. 

ಆಂಬುಲೆನ್ಸ್ ಏರುವಾಗ ಗಾಯಾಳು, ಶಿವಮೊಗ್ಗಕ್ಕೆ ಬಂದಾಗ ಸದ್ದಿಲ್ಲದೆ 3 ಜನ ಜೂಟ್!

ಘಟನಾ ಸ್ಥಳಕ್ಕೆ ಯರಗೇರಾ ಠಾಣೆಯ ಪೊಲೀಸರು(Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹಗಳನ್ನ(Deadbody) ರಾಯಚೂರಿನ ರಿಮ್ಸ್(RIMS) ಆಸ್ಪತ್ರೆಗೆ ‌ರವಾನೆ ಮಾಡಲಾಗಿದೆ. ಈ ಸಂಬಂಧ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

'ನೀವು ಎಂಎಲ್ಸಿ ಅನ್ನೋಕೆ ಸಾಕ್ಷಿ ಏನು?' ಕೇಶವ ಪ್ರಸಾದ್ ಕಾರು ತಡೆದ ಟೋಲ್ ಸಿಬ್ಬಂದಿ, ಒಂದು ಗಂಟೆ ಕಾಲ ಕಿರಿಕ್!
ಪಾಕಿಸ್ತಾನಕ್ಕೆ ನೌಕಾಪಡೆ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ: ಉಡುಪಿಯಲ್ಲಿ ಗುಜರಾತ್ ಮೂಲದ ಮತ್ತೊಬ್ಬ ಆರೋಪಿ ಬಂಧನ