ಬಿಲ್ಲವ, ಕೋಟಿ ಚೆನ್ನಯ್ಯಗೆ ಅವಹೇಳನ : ಬಿಜೆಪಿ ಮುಖಂಡ ಜಗದೀಶ್ ವಿರುದ್ಧ ದೂರು

Suvarna News   | Asianet News
Published : Feb 06, 2021, 01:43 PM IST
ಬಿಲ್ಲವ, ಕೋಟಿ ಚೆನ್ನಯ್ಯಗೆ ಅವಹೇಳನ : ಬಿಜೆಪಿ ಮುಖಂಡ ಜಗದೀಶ್ ವಿರುದ್ಧ ದೂರು

ಸಾರಾಂಶ

ಬಿಲ್ಲವ ಸಮುದಾಯಕ್ಕೆ ಅವಹೇಳನ ಮಾಡಿ ಮಾತನಾಡಿದ್ದ ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ವಿರುದ್ಧ ದೂರು ನೀಡಲಾಗಿದ್ದು, ಬೆನ್ನಲ್ಲೇ ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ. 

ಮಂಗಳೂರು (ಫೆ.06): ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿಯಿಂದ ಬಿಲ್ಲವ ಸಮುದಾಯಕ್ಕೆ ಅವಹೇಳನವಾಗಿದೆ ಎಂದು ಆರೋಪಿಸಿ  ಮೂಡಬಿದ್ರೆ ಪೊಲೀಸ್ ಠಾಣೆಗೆ ಬಿಲ್ಲವ ಸಂಘಟನೆಗಳು ದೂರು ನೀಡಿವೆ. 

ಧಾರ್ಮಿಕ ಕಾರ್ಯಕ್ರಮದಲ್ಲಿ ಜನಾರ್ದನ ಪೂಜಾರಿ ಬಗ್ಗೆಜಗದೀಶ್ ಅಧಿಕಾರಿ   ಮಾತನಾಡಿದ್ದು,  ಜನಾರ್ದನ ಪೂಜಾರಿಯಂಥವರ ಕಾಲು ‌ಹಿಡಿಯಲ್ಲ ಎಂದಿದ್ದರು.

ಇದನ್ನು ಪ್ರಶ್ನಿಸಿ ಜಗದೀಶ್ ಅಧಿಕಾರಿಗೆ ಬಿಲ್ಲವ ಯುವಕರು ಕರೆ ಮಾಡಿದ್ದು,  ಈ ವೇಳೆ ಅವಮಾನವಾಗುವಂತೆ ಮಾತನಾಡಿದ್ದರೆನ್ನಲಾಗಿದೆ. ಅಲ್ಲದೇ  ಬಿಲ್ಲವರಿಗಿಂತ ಮುಸ್ಲಿಮರು ಪರ್ವಾಗಿಲ್ಲ ಎಂದು ಜಗದೀಶ್ ಅಧಿಕಾರಿ ಹೇಳಿದ್ದು,  ಬಿಲ್ಲವರ ಆರಾಧ್ಯ ದೈವ ಕೋಟಿ ಚೆನ್ನಯರ ಬಗ್ಗೆಯೂ ಮಾತನಾಡಿದ್ದರೆನ್ನಲಾಗಿದೆ.

' ಮೋದಿ-ಶಾ ಬೆಂಬಲ ಇರೋವರೆಗೆ ನಾನೆ ಸಿಎಂ : 150 ಸೀಟು ಗೆದ್ದು ಕೈಗೆ ಕಾಯಂ ವಿಪಕ್ಷ ಸ್ಥಾನ' ...

ಈ ಘಟನೆ ಬಳಿಕ ಜಗದೀಶ್ ಅಧಿಕಾರಿ ಮಾತನಾಡಿದ್ದ ಆಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.  ಹೀಗಾಗಿ ಆಡಿಯೋ ಸಹಿತ ಪೊಲೀಸ್ ಠಾಣೆಯಲ್ಲಿ ಬಿಲ್ಲವ ಮುಖಂಡರು ದೂರು ನೀಡಿದ್ದಾರೆ.  

ಜಗದೀಶ್ ಅಧಿಕಾರಿ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ ಬಿಲ್ಲವ ಸಮುದಾಯದ ಬಳಿ ಅವರು ಕ್ಷಮೆ ಯಾಚಿಸಿದ್ದಾರೆ. ತನ್ನ ಹೇಳಿಕೆ ಬಗ್ಗೆ ಬಿಲ್ಲವರಲ್ಲಿ ವಿಷಾಧ ವ್ಯಕ್ತಪಡಿಸಿದ್ದಾರೆ. ಇನ್ನು ಜಗದೀಶ್ ಅಧಿಕಾರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿಯೂ ವಿರೋಧ ವ್ಯಕ್ತವಾಗಿದ್ದು ತಪ್ಪಿಗೆ ಕ್ಷಮೆ ಯಾಚಿಸಿದರು. 

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ