ಎಂಥದ್ದೇ ಪರಿಸ್ಥಿತಿ ಬಂದರೂ ಯಾವುದೇ ಕಾರಣಕ್ಕೂ ರೈತರು ಆತುರದ ಬುದ್ಧಿಗೆ ತಲೆ ಕೊಟ್ಟು, ತಾವು ಬೆಳೆದ ಬೆಳೆಗಳನ್ನು ನಾಶಪಡಿಸಿಕೊಳ್ಳಬಾರದು. ಒಂದುವೇಳೆ ಬೆಳೆ ನಾಶಪಡಿಸಿಕೊಂಡರೆ ಅದಕ್ಕೆ ಪರಿಹಾರ ನೀಡುವುದಕ್ಕೂ ಸಾಧ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆ(ಏ.17): ಎಂಥದ್ದೇ ಪರಿಸ್ಥಿತಿ ಬಂದರೂ ಯಾವುದೇ ಕಾರಣಕ್ಕೂ ರೈತರು ಆತುರದ ಬುದ್ಧಿಗೆ ತಲೆ ಕೊಟ್ಟು, ತಾವು ಬೆಳೆದ ಬೆಳೆಗಳನ್ನು ನಾಶಪಡಿಸಿಕೊಳ್ಳಬಾರದು. ಒಂದುವೇಳೆ ಬೆಳೆ ನಾಶಪಡಿಸಿಕೊಂಡರೆ ಅದಕ್ಕೆ ಪರಿಹಾರ ನೀಡುವುದಕ್ಕೂ ಸಾಧ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.
ನಗರದ ಡಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ವೈರಸ್ ಹಾವಳಿ, ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಅನಿರೀಕ್ಷಿತವಾಗಿದ್ದು, ಯಾರೂ ಸಹ ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ, ಲಾಕ್ ಡೌನ್ ಅನಿವಾರ್ಯ ಆಗಿದ್ದರಿಂದ ಸರ್ಕಾರ ಆದೇಶ ಜಾರಿಗೊಳಿಸಿದೆ ಎಂದರು.
undefined
98 ವಸತಿ ಶಾಲೆಗಳಲ್ಲಿ 784 ಜನ ಕ್ವಾರಂಟೈನ್
ಲಾಕ್ ಡೌನ್ ಮುಗಿದ ನಂತರ ರೈತರ ಫಸಲುಗಳಿಗೆ ಒಳ್ಳೆಯ ಬೆಲೆ ಬಂದೇ ಬರುತ್ತದೆ. ಪ್ರಕೃತಿ ವಿಕೋಪದಿಂದ ಬೆಳೆ ನಾಶವಾದರೆ ಮಾತ್ರ ಪರಿಹಾರ ನೀಡಲಾಗುತ್ತದೆ. ರೈತರು ತಾವಾಗಿಯೇ ಬೆಳೆ ನಾಶಪಡಿಸಿಕೊಂಡರೆ ಅದಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ. ಹೂವಿನ ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಬಳಿ ಚರ್ಚಿಸಲಾಗುವುದು ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಸುಮಾರು .2.58 ಕೋಟಿಯಷ್ಟುಬೆಳೆ ಹಾನಿಯಾದ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಾಕೃತಿಕ ವಿಕೋಪದಿಂದ ಆದ ನಷ್ಟದ ಬಗ್ಗೆ ದಾವಣಗೆರೆ ಸೇರಿದಂತೆ ಎಲ್ಲ ಜಿಲ್ಲೆಗಳಿಂದಲೂ ಸಿಎಂ ಯಡಿಯೂರಪ್ಪ ವರದಿ ತರಿಸಿಕೊಂಡಿದ್ದಾರೆ. ಆದಷ್ಟುಬೇಗನೆ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವರು ಎಂದು ವಿವರಿಸಿದರು.
ರೈತರ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೂ ಅರಿವಿದೆ. ಕೃಷಿ, ತೋಟಗಾರಿಕೆ ಅಧಿಕಾರಿಗಳು, ಜನ ಪ್ರತಿನಿಧಿಗಳ ಜೊತೆಗೆ ನಿರಂತರ ಚರ್ಚೆ ನಡೆಸಿ, ರೈತರಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಕೃಷಿ ಚಟುವಟಿಕೆ ನಿಲ್ಲಬಾರದು. ಎಲ್ಲ ಇಲಾಖೆಗಳಿಗೂ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸ್ವತಃ ಎಲ್ಲ ಜಿಲ್ಲೆಗಳಿಗೂ ಖುದ್ದಾಗಿ ತೆರಳಿ, ಅಧಿಕಾರಿಗಳ ಸಭೆ ನಡೆಸುತ್ತಿದ್ದೇನೆ. ಕೃಷಿ ಚಟುವಟಿಕೆಗೆ ಪೂರಕವಾದ ಎಲ್ಲ ಬೆಂಬಲ, ಸಹಕಾರವನ್ನೂ ಸರ್ಕಾರ ನೀಡುತ್ತದೆ. ದಾವಣಗೆರೆ ಜಿಲ್ಲೆಯ ಕೆಲವು ಕಡೆ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿದ ವಿಚಾರ ತಮ್ಮ ಗಮನಕ್ಕೆ ಬಂದಿದೆ. ಕಳಪೆ ಬೀಜ ಮಾರುವವರು ಯಾರೇ ಆಗಿದ್ದರೂ, ಎಷ್ಟೇ ದೊಡ್ಡವರಾಗಿದ್ದರೂ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ನಿಶ್ಚಿತ ಎಂದು ಬಿ.ಸಿ.ಪಾಟೀಲ್ ಎಚ್ಚರಿಸಿದರು.
ಲಾಕ್‌ಡೌನ್: ರೆಡ್ ಝೋನ್‌ನಲ್ಲಿಯೇ ನಡೆದ ಅದ್ಧೂರಿ ರಥೋತ್ಸವ
ಸಂಸದ ಜಿ.ಎಂ.ಸಿದ್ದೇಶ್ವರ, ಸಿಎಂ ರಾಜಕೀಯ ಎಂ.ಪಿ.ರೇಣುಕಾಚಾರ್ಯ, ಮೇಯರ್ ಬಿ.ಜಿ.ಅಜಯಕುಮಾರ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಪೈಲ್ವಾನ್, ಬಿಜೆಪಿ ಯುವ ಮುಖಂಡ ಲೋಕಿಕೆರೆ ನಾಗರಾಜ ಇತರರು ಇದ್ದರು.