ವರದಿ:ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ(ಎ.2): ರಾಜ್ಯದಲ್ಲಿ ಹಿಜಾಬ್-ಕೇಸರಿ ಸಂಘರ್ಷ (hijab saffron shawl controversy), ನಂತರ ಹಲಾಲ್-ಜಟ್ಕಾ (halal jhatka) ಆಮೇಲೆ ಜಾತ್ರೆಗಳಲ್ಲಿ ಅನ್ಯ ಧರ್ಮದವರಿಗೆ ವ್ಯಾಪಾರ ಅನುಮತಿ ನಿರಾಕರಣೆ ಹೀಗೆ ಜನರ ಜನರ ನಡುವೆ, ಧರ್ಮ-ಧರ್ಮಗಳ ನಡುವೆ ಹಿಂದೂ ಮುಸ್ಲಿಂ (Muslim) ಎಂದು ಬೇರ್ಪಡಿಸಿ, ಇವೆಲ್ಲಾ ವಿಚಾರಗಳು ಧರ್ಮಗಳ ನಡುವೆ ಬಿರುಕು ಮುಡುವಂತಾಗಿವೆ. ಹಿಂದೂಗಳು-ಮುಸ್ಲಿಂ (Hindu-muslim) ರೊಂದಿಗೆ ವ್ಯವಹಾರ ಮಾಡಬೇಡಿ ಎನ್ನುವ ಮಟ್ಟಕ್ಕೆ ಹೋಗಿದೆ. ಆದ್ರೆ ಯಾದಗಿರಿ (Yadgir) ಜಿಲ್ಲೆಯ ವಡಿಗೇರಾ ಪಟ್ಟಣದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಹಿಂದೂ-ಮುಸ್ಲಿಂ ಸಹೋದರರು ಸೇರಿ ಯುಗಾದಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಈ ಯುಗಾದಿ ಆಚರಣೆ ನೋಡಿದ್ರೆ ಧರ್ಮ ಅಂತ ಹೊಡೆದಾಡೋರಿಗೆ ಕಂಬಳಿಯಲ್ಲಿ ಕಲ್ಲು ಕಟ್ಟಿ ಹೊಡೆದಂತಿದೆ.
undefined
ಹಿಂದೂ-ಮುಸ್ಲಿಂ ಸಹೋದರರಿಂದ ಬೇವು-ಬೆಲ್ಲ ತಯಾರಿಸಿ ವಿತರಣೆ: ಇವತ್ತು ಯುಗಾದಿ ಹಬ್ಬ, ದೇಶಾದ್ಯಂತ ಬೇವು-ಬೆಲ್ಲ ಹಂಚಿ, ಒಬ್ಭರಿಗೊಬ್ಬರು ಯುಗಾದಿ ಆಚರಿಸುತ್ತಾರೆ. ಯಾದಗಿರಿಯ ವಡಿಗೇರಾದ ಜನ ಯುಗಾದಿಯನ್ನು ನಾವೆಲ್ಲ ಒಂದೇ ಎಂಬ ಭಾವನೆಯಿಂದ ಆಚರಿಸಿದ್ದಾರೆ. ಯುಗಾದಿ ಹಿಂದೂಗಳ ಹಬ್ಬ, ಆದ್ರೆ ಹಿಂದೂ-ಮುಸ್ಲಿಂ ರೆಲ್ಲಾ ಸೇರಿ ಯುಗಾದಿ ಹಬ್ಬದ ದಿನದಂದು ಬೇವು-ಬೆಲ್ಲ ತಯಾರಿಸಿ ಸಾರ್ವಜನಿಕರಿಗೆ ವಿತರಣೆ ಮಾಡಿದ್ದಾರೆ. ಹಾಗಾಗಿ ಯುಗಾದಿ ದಿನದಂದು ರಾಜ್ಯದ ಜನರಿಗೆ ವಡಿಗೇರಾ ಜನರು ಮಾದರಿಯಾಗಿದ್ದಾರೆ.
ವಿಜಯಪುರದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಜಾತ್ರೆಗಳು!
ಯಾದಗಿರಿ ಜನರಿಂದ ಸಾಮರಸ್ಯದ ಸಂದೇಶ: ಇದು ಭಾರತ ಸರ್ವೇ ಜನ ಸುಖಿನೋ ಭವಂತುಃ, ಎಂಬ ಶ್ಲೋಕದಂತೆ ಎಲ್ಲಾ ಜನರು ಸುಖದಿಂದ ಬಾಳಿ ಬದುಕಬೇಕಾಗಿದೆ. ಆದರೆ ರಾಜ್ಯದಲ್ಲಿ ಇತ್ತೀಚಿನ ಕೆಲ ಬೆಳವಣಿಗೆಗಳಿಂದ ಸಾಮರಸ್ಯ ಹಾಳಾಗಿದೆ, ಈ ತರಹ ಧರ್ಮಗಳ ನಡುವೆ ಬೆಂಕಿ ಹಚ್ಚುವವರಿಗೆ ವಡಿಗೇರಾ ಪಟ್ಟಣದ ಜನರು ಸಾಮರಸ್ಯದ ಪಾಠ ಕಲಿಸಿದ್ದಾರೆ. ಧರ್ಮಕ್ಕಿಂತ ಮಾನವೀಯತೆ ಮುಖ್ಯ ಎಂದು ಸೌಹಾರ್ಧತೆ ಸಂದೇಶ ಸಾರಿದ್ದಾರೆ.
ಹಲಾಲ್-ಜಟ್ಕಾ ಗಲಾಟೆ ಮಧ್ಯೆ ಹಿಂದೂ-ಮುಸ್ಲಿಂ ಸಹೋದರತೆ: ರಾಜ್ಯ ಹಾಗೂ ದೇಶದಲ್ಲಿ ಸದ್ಯ ಎದ್ದಿರೋ ಚರ್ಚೆಗಳನ್ನು ನೋಡಿದ್ರೆ ಎಲ್ಲಿಗೆ ಬಂದು ನಿಲ್ಲತ್ತೊ ಎನ್ನುವುದು ಯಾರಿಗೂ ಗೊತ್ತಿಲ್ಲ, ಸಮಾಜದ ಮೇಲೆ ಧರ್ಮ ಧರ್ಮಗಳ ಹೆಸರಲ್ಲಿ ರಾಜಕಿಯ ಕೆಸರೆರೆಚಾಟ ನಡೆದಿದೆ. ಇದರ ಮದ್ಯ ಹಿಜಾಬ್, ಹಲಾಲ್, ಬೈಕಾಟ್ ಮುಸ್ಲಿಂ, ಹೀಗೆ ನೂರೆಂಟು ಸಮಸ್ಯೆಗಳ ನಡುವೆಯೂ ನಮ್ಮದು ಜಾತ್ಯಾತೀತ ರಾಷ್ಟ್ರ, ಸರ್ವ ಧರ್ಮಗಳ ಸಮಾತೆ ಎತ್ತಿಹಿಡಿಯೊ ರಾಷ್ಟ್ರ ಅಂತ ಹೇಳೋದಕ್ಕೆ ಸಾಕಷ್ಠು ಉದಾಹರಣೆಗಳು ಸಿಗುತ್ತೆ. ವ್ಯಾಪಾರ ವಹಿವಾಟಿಗೂ ಮುಸ್ಲಿಂ ರನ್ನ ದೂರವಿಡುವ ಚರ್ಚೆ ನಡೆದಿರುವಾಗಲೆ ಇಲ್ಲಿ ಮಾತ್ರ ಜಾತಿ ದರ್ಮ ಮರೆತು ಸೌಹಾರ್ದತೆಯಿಂದ ಹಬ್ಬ ಆಚರಣೆ ಮಾಡಲಾಗಿದೆ. ಹಲವು ಜನರು ಜಾತಿ ಜಾತಿಯ ನಡುವೆ ಜಗಳ ತಂದಿಟ್ಟು ರಗಳೆ ನಡೆಸಿದ್ದಾರೆ. ಆದ್ರೆ ನಾವು ಮಾತ್ರ ಈ ಊರಲ್ಲಿ ಶಾಂತೊ ಸಹಬಾಳ್ವೆಯಿಂದ ಜೀವನ ನಡೆಸ್ತಿದಾರೆ.
ಥಾಯ್ಲೆಂಡ್ ಜತೆ ಶಿಕ್ಷಣ , ಐಟಿ , ಬಿಟಿ ಸಹಕಾರಕ್ಕೆ ರಾಜ್ಯದ ಒಲವು
ಕೋಮು ಭಾವನೆ ಬಿತ್ತದೇ ಸಾಮರಸ್ಯದಿಂದ ಬದುಕಿ ಎಂದ ವಡಿಗೇರಾ ಜನ: ಯುಗಾದಿ ಹಬ್ಬವನ್ನ ಒಟ್ಟುಗೂಡಿ ಆಚರಣೆ ಮಾಡುವ ಮೂಲಕ ರಾಜ್ಯಕ್ಕೆ ಸಂದೇಶ ನೀಡ್ತಿವಿ, ನಾವೆಲ್ಲ ಹಿಂದೂ ಮುಸ್ಲಿಂ ಯಾವತ್ತಿದ್ದರು ಒಂದೇ. ಯುವಕರು ಮಾತ್ರ ಯಾವುದೇ ಜಾತಿ, ಧರ್ಮದ ಹೆಸರಲ್ಲಿ ಕೋಮುಬಾವನೆ ಬೆಳೆಸಿಕೊಳ್ಳದೆ. ಒಂದಾಗಿ ಬಾಳಬೇಕಿದೆ. ನಾವೆಲ್ಲ ಅಣ್ಣ ತಮ್ಮರಂತೆ ಇರಬೇಕು, ಹೀಗಾಗಿ ಇಂದು ಬೇವು ತಯಾರಿಸಿ ಪರಸ್ಪರ ಒಬ್ಬರಿಗೊಬ್ಬರು ಬೇವು ಕುಡಿಸುವ ಮೂಲಕ ಸದಾ ಕಾಲ ಒಂದಾಗಿ ಇರೋಣ ಎಂಬ ಸಂದೇಶ ನೀಡಿದ್ದಾರೆ. ಈ ಬೇವು ಹಂಚುವ ಕಾರ್ಯಕ್ರಮಲ್ಲಿ ತಾಲೂಕಿನ ಪ್ರಮುಖರು ಸಹ ಭಾಗವಹಿಸಿ ಬೇವು ಸವಿದು ಯುಗಾದಿ ಹಬ್ಬದ ಶುಭಾಶಯ ತಿಳಿಸಿದರು. ಕೋಮುವಾದದ ಬಗ್ಗೆ ಯಾವುದೇ ರೀತಿ ತಲೆ ಕೆಡಿಸಿಕೊಳ್ಳದೇ ಸಹಬಾಳ್ವೆಯಿಂದ ಜೀವನ ನಡೆಸಬೇಕಿದೆ.
ರಾಜ್ಯಕ್ಕೆ ಮಾದರಿಯಾದ ವಡಿಗೇರಾ ನಾಗರಿಕರು: ರಾಜ್ಯದಲ್ಲಿ ಈ ಹಿಂದೂ-ಮುಸ್ಲಿಂ ರದ್ದೆ ಮಾತು. ಎರಡು ಧರ್ಮಗಳ ನಡುವೆ ದ್ವೇಷದ ಭಾವನೆ ಮೂಡಿ ಬರುತ್ತಿದೆ. ಇತ್ತಿಚಿನ ಬೆಳವಣಿಗೆಳು ಸಮಾಜದ ಮೇಲೆ ಅತಿ ಮಾರಕವಾದ್ದು, ಸದ್ಯ ಜನರು ಎಚ್ಚೆತ್ತು ಸಾಮರಸ್ಯದಿಂದ ಒಂದಾಗಿ ಬಾಳಬೇಕಿದೆ. ಯುಗಾದಿ ಹಬ್ಬದ ಪ್ರಯುಕ್ತ ವಡಗೇರಾ ಜನರು ಈ ಸಂದೇಶವನ್ನ ರಾಜ್ಯದ ಜನರಿಗೆ ನೀಡಿರೋದು ಖುಷಿಯ ವಿಚಾರ.