ಹಾವೇರಿಯ ರಟ್ಟೀಹಳ್ಳಿಯಲ್ಲಿ ಮಸೀದಿಗೆ ಕಲ್ಲು: ಉದ್ವಿಗ್ನ ಸ್ಥಿತಿ

Published : Mar 15, 2023, 06:00 AM IST
ಹಾವೇರಿಯ ರಟ್ಟೀಹಳ್ಳಿಯಲ್ಲಿ ಮಸೀದಿಗೆ ಕಲ್ಲು: ಉದ್ವಿಗ್ನ ಸ್ಥಿತಿ

ಸಾರಾಂಶ

ಹಾವೇರಿ ಜಿಲ್ಲೆ ರಟ್ಟೀಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿ ಅನಾವರಣದ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೈಕ್‌ ರಾರ‍ಯಲಿ ವೇಳೆ ಕೆಲ ಕಿಡಿಗೇಡಿಗಳು ಮಸೀದಿ, ಮನೆ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ರಟ್ಟೀಹಳ್ಳಿ (ಮಾ.15) : ಹಾವೇರಿ ಜಿಲ್ಲೆ ರಟ್ಟೀಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿ ಅನಾವರಣದ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೈಕ್‌ ರಾರ‍ಯಲಿ ವೇಳೆ ಕೆಲ ಕಿಡಿಗೇಡಿಗಳು ಮಸೀದಿ, ಮನೆ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಬೈಕ್‌ ರಾರ‍ಯಲಿ(Bike rally) ಪಟ್ಟಣದ ಕಾರಂಜಿ ವೃತ್ತದ ಬಳಿ ಬರುತ್ತಿದ್ದಂತೆ ರಾರ‍ಯಲಿಯಲ್ಲಿದ್ದ ಕೆಲ ಕಿಡಿಗೇಡಿಗಳು ಏಕಾಏಕಿ ಮಸೀದಿ(Masjid), ವಾಹನಗಳ ಮೇಲೆ ಕಲ್ಲು ತೂರಲು ಆರಂಭಿಸಿದರು. ಇದರಿಂದ ಕೆಲ ವಾಹನಗಳು, ಮನೆಗಳು ಜಖಂ ಆಗಿವೆ. ಶಾಲಾ ಮಕ್ಕಳು, ಮಹಿಳೆಯರಿಗೂ ಕಲ್ಲು ತಾಗಿದ್ದು, ಅವರಿಗೆ ಸಣ್ಣ ಪುಟ್ಟಗಾಯಗಳಾಗಿವೆ. ಇದೇ ವೇಳೆ, ಎದುರಿಗೆ ಸಿಕ್ಕ ಆಟೋ ಚಾಲಕನಿಗೂ ಥಳಿಸಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಿಸಿದರು. ಘಟನೆ ಸಂಬಂಧ 20ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್‌್ತ ಒದಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಡಾ.ಶಿವಕುಮಾರ ಗುಣಾರೆ ತಿಳಿಸಿದ್ದಾರೆ.

ರಟ್ಟಿಹಳ್ಳಿ ಹಿಂದೂ ಸಂಘಟನೆ ಬೈಕ್ ರ್ಯಾಲಿ ವೇಳೆ ಕಲ್ಲು ತೂರಾಟ: ಮಸೀದಿ, ಮನೆ, ಮಕ್ಕಳು- ಮಹಿಳೆಯರಿಗೆ ಕಲ್ಲೇಟು

ಘಟನೆ ಹಿನ್ನೆಲೆ:

ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣನ ಕಂಚಿನ ಮೂರ್ತಿ(Bronze statue of Sangolli Rayanna) ಸ್ಥಾಪಿಸಲಾಗಿದ್ದು, ಅದರ ಅನಾವರಣ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು. ಇದಕ್ಕೂ ಮೊದಲು, ಮಾ.9ರಂದು ರಾಯಣ್ಣನ ಮೂರ್ತಿಯನ್ನು ಮೆರವಣಿಗೆ ಮೂಲಕ ತರಲಾಗಿತ್ತು. ಆ ವೇಳೆ, ಪಟ್ಟಣದ ಕೋಟೆ ಓಣಿಯಲ್ಲಿ ಅನ್ಯ ಕೋಮಿನ ಯುವಕರು ಕೈಯಲ್ಲಿ ಕಲ್ಲು ಹಿಡಿದು, ಬ್ಯಾರಿಕೇಡ್‌ ಕಿತ್ತೆಸೆದು, ಮೆರವಣಿಗೆಗೆ ಅಡ್ಡಿಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತೀಕಾರ ಎಂಬಂತೆ ಮಂಗಳವಾರ, ರಾಯಣ್ಣ ಮೂರ್ತಿ ಅನಾವರಣ ಹಾಗೂ ಬೈಕ್‌ ರಾರ‍ಯಲಿ ಆಯೋಜಿಸಲಾಗಿತ್ತು. ಮೆರವಣಿಗೆ ಪಟ್ಟಣದ ಕಾರಂಜಿ ಸರ್ಕಲ್‌ ಬಳಿ ಬರುತ್ತಿದ್ದಂತೆ ಕೆಲ ಯುವಕರು ಮಸೀದಿ, ಆಟೋ, ಕಾರು ಹಾಗೂ ಮನೆ ಮೇಲೆ ಕಲ್ಲು ತೂರಾಟ ನಡೆಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

ಸೋಮಣ್ಣ ಕಾಂಗ್ರೆಸ್‌ಗೆ ಬರ್ತೀನಿ ಅಂದಿಲ್ಲ, ನಾನೂ ಕರೆದಿಲ್ಲ: ಡಿಕೆಶಿ...

 

PREV
Read more Articles on
click me!

Recommended Stories

ಬೆಂಗಳೂರು ಹೊಸೂರು ಫ್ಲೈಓವರ್ ಮೇಲೆ ಸ್ಲೀಪರ್ ಬಸ್ ಅಪಘಾತ, ನಾಲ್ವರಿಗೆ ಗಾಯ
ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷ ಸೆಲೆಬ್ರೇಷನ್‌ಗೆ ಡೆಡ್ ಲೈನ್, ಸಮಯ ಮೀರಿದರೆ ಆಪತ್ತು