ಗಡಿ ಭಾಗದ ಸರ್ಕಾರಿ ಶಾಲೆಗಳ ರಕ್ಷಣೆಗೆ ಬದ್ಧ : ಡಾ.ಸಿ.ಸೋಮಶೇಖರ್‌

By Kannadaprabha News  |  First Published Mar 13, 2023, 4:55 AM IST

ಗಡಿ ಭಾಗದಲ್ಲಿನ ಸರ್ಕಾರಿ ಶಾಲೆಗಳು ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕು.ಆ ನಿಟ್ಟಿನಲ್ಲಿ ಎಲ್ಲ ಅಧಿಕಾರಗಳ ಜೊತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ತಿಳಿಸಿದರು.


  ಮಧುಗಿರಿ :  ಗಡಿ ಭಾಗದಲ್ಲಿನ ಸರ್ಕಾರಿ ಶಾಲೆಗಳು ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕು.ಆ ನಿಟ್ಟಿನಲ್ಲಿ ಎಲ್ಲ ಅಧಿಕಾರಗಳ ಜೊತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ತಿಳಿಸಿದರು.

ತಾಲೂಕಿನ ನೇರಳೆಕೆರೆ ರಂಗನಾಥ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಅಮೃತ ಭಾರತಿಗೆ ಕನ್ನಡದ ಆರತಿ ಹಾಗೂ ವಿಚಾರ ಸಂಕೀರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

ಗಡಿ ಭಾಗದಲ್ಲಿನ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸಲು ಹತ್ತಾರು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಕನ್ನಡ ಭವನದ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ.

ಕನ್ನಡ ಭಾಷೆ, ನುಡಿ ಹಾಗೂ ರಾಜ್ಯದ ಗಡಿ ಉಳಿಸಿ ಬೆಳಸುವುದು ಗಡಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ. ಗಡಿನಾಡ ಜನರ ದುಃಖ ದುಮ್ಮಾನಗಳ ಸ್ಪಂದನೆಗೆ ನಮ್ಮ ಪ್ರಾಧಿಕಾರವು ಸದಾ ಬೆಂಬಲವಾಗಿ ನಿಂತ್ದಿದು, ಗಡಿ ಭಾಗದ ಕನ್ನಡ ಶಾಲೆಗಳ ರಕ್ಷಣೆ ಮತ್ತು ಕನ್ನಡಿಗರ ಅಸ್ಮಿತೆ ಕಾಯುವ ನಿಟ್ಟಿನಲ್ಲಿ ನಿರಂತರವಾಗಿ ನಿಮ್ಮೊಂದಿಗಿದ್ದೇವೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಸ್‌.ಸಿದ್ದಲಿಂಗಪ್ಪ ಮಾತನಾಡಿ, ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಕನ್ನಡವನ್ನು ಅಭಿವೃದ್ಧಿಪಡಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವುದು ಬಹು ದೊಡ್ಡ ಸವಾಲಾಗಿದೆ. ಇಂದಿನ ಕಂಪ್ಯೂಟರ್‌ ಯುಗದಲ್ಲಿ ಜನರು ತಮ್ಮ ಭಾಷಾ ಸ್ವಾಭಿಮಾನವನ್ನು ತೊರೆದು ಅನ್ಯ ಭಾಷೆಗಳತ್ತ ವಾಲುತ್ತಿದ್ದಾರೆ. ಈ ಕಾರಣಕ್ಕಾಗಿ ಹೋಬಳಿ ಮಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಘಟಕಗಳನ್ನು ಪ್ರಾರಂಭ ಮಾಡುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳಸುವ ಕೆಲಸ ಮಾಡಲಾಗುತ್ತದೆ ಎಂದರು.

ಸಾಹಿತಿ ಡಾ.ಕವಿತಾ ಕೃಷ್ಣ ಮಾತನಾಡಿ, ಮನೆಯ ಅನ್ನವು ದೇವಾಲಯದ ಪ್ರಸಾದವಾಗಿ, ಮನೆಯ ಬೆಂಕಿಯು ದೇವಾಲಯದ ಜ್ಯೋತಿಯಾಗಿ, ಮನೆಯ ಬೂದಿಯು ದೇವಾಲಯದ ವಿಭೂತಿಯಾಗಿ ಮಾತಾಡುವಂತೆ ಕನ್ನಡದ ಎಲ್ಲರೂ ಉತ್ತಮ ಕನ್ನಡಿಗರಾಗುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ನೇ.ಭ.ರಾಮಲಿಂಗಾಶಟ್ಟಿ, ಕಸಾಪ ಜಿಲ್ಲಾ ಸಂಚಾಲಕ ಕೆ.ಎಸ್‌.ಉಮಾಮಹೇಶ್‌, ತಾಲೂಕು ಕಸಾಪ ಅಧ್ಯಕ್ಷೆ ಸಹನಾ ನಾಗೇಶ್‌, ಕಾರ್ಯದರ್ಶಿಗಳಾದ ಎಂ.ಎಸ್‌.ಶಂಕರನಾರಾಯಣ್‌, ರಂಗಧಾಮಯ್ಯ, ಸಾಹಿತಿ ಪ್ರೊ.ಮಲನಮೂರ್ತಿ, ಬಿಇಓ ತಿಮ್ಮರಾಜು, ಗ್ರಾಪಂ ಅಧ್ಯಕ್ಷೆ ನಾಗಲಕ್ಷ್ಮಮ್ಮ, ಉಪಾಧ್ಯಕ್ಷ ಸಿದ್ದಪ್ಪ, ಪಿಡಿಓ ರಜನಿ, ಶಾಲೆಯ ಮುಖ್ಯ ಶಿಕ್ಷಕ ಎನ್‌.ಲಕ್ಷ್ಮೇಪ್ರಸಾದ್‌, ಆಡಿಟರ್‌ ಗುರುಲಿಂಗಯ್ಯ, ಬರಹಗಾರ ಎನ್‌.ಎಸ್‌. ಈಶ್ವರ  ಪ್ರಸಾದ್‌, ಎಂ.ವಿ.ಮೂಡ್ಲಗಿರೀಶ್‌, ನಿವೃತ್ತ ಶಿಕ್ಷಕ ಡಿ.ರಾಮಸಂಜೀವಯ್ಯ, ಕೆ.ಜಿ.ಶಕುಂತಲಾ, ರಾಮಸುನಾಚಾರ್‌, ಶ್ರೀನಿವಾಸ್‌, ರಾಮಚಂದ್ರಪ್ಪ, ಹನುಮಣ್ಣ, ಮಿಡಿಗೇಶಿ ಹೋಬಳಿ ಕಸಾಪ ಅಧ್ಯಕ್ಷ ಶಿವಣ್ಣ ಸೇರಿದಂತೆ ಅನೇಕರಿದ್ದರು.

 ಸಂಸ್ಕೃತಿ ಇಲ್ಲದ ಬದುಕು ಬದುಕೆ ಅಲ್ಲ, ಸಂಸ್ಕೃತಿಯ ಮನಸುಗಳನ್ನು ಕಟ್ಟಬೇಕು. ಕನ್ನಡ ಜನತೆಯು ರಾಷ್ಟ್ರ ಭಕ್ತಿ ಮತ್ತು ನಾಡ ಪ್ರೀತಿಯನ್ನು ಬೆಳಸಿಕೊಂಡು ಕನ್ನಡವನ್ನು ಉಳಿಸಿ ಬೆಳಸುವ ಕಾರ್ಯವಾಗಬೇಕು. ಪ್ರತಿ ಗ್ರಾಪಂ ಹಾಗೂ ಜಿಪಂ ವ್ಯಾಪ್ತಿಯಲ್ಲಿ ಸಾಂಸ್ಕೃತಿಕ ನಿಧಿ ಸ್ಥಾಪಿಸಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸೂಚಿಸಲಾಗಿದೆ.

ಡಾ.ಸಿ.ಸೋಮಶೇಖರ್‌ ಅಧ್ಯಕ್ಷ, ಗಡಿ ಅಭಿವೃದ್ಧಿ ಪ್ರಾಧಿಕಾರ

click me!