ಹೆಣ್ಣು ಕುಂಕುಮ ಇಟ್ಟಿಲ್ಲ ಎಂಬುದನ್ನು ಪ್ರಶ್ನಿಸುತ್ತಾರೆ. ಮಹಿಳೆಯು ಗಂಡಸರು ನಿರೀಕ್ಷಿಸಿದಂತೆ ನಡೆದುಕೊಂಡರೆ ಆ ಕಾರಣಕ್ಕೆ ಅವಳನ್ನು ಗೌರವಿಸಲಾಗುತ್ತದೆ ಎಂದು ಲೇಖಕಿ ಡಾ.ಸಬಿತಾ ಬನ್ನಾಡಿ ಹೇಳಿದರು.
ತುಮಕೂರು : ಹೆಣ್ಣು ಕುಂಕುಮ ಇಟ್ಟಿಲ್ಲ ಎಂಬುದನ್ನು ಪ್ರಶ್ನಿಸುತ್ತಾರೆ. ಮಹಿಳೆಯು ಗಂಡಸರು ನಿರೀಕ್ಷಿಸಿದಂತೆ ನಡೆದುಕೊಂಡರೆ ಆ ಕಾರಣಕ್ಕೆ ಅವಳನ್ನು ಗೌರವಿಸಲಾಗುತ್ತದೆ ಎಂದು ಲೇಖಕಿ ಡಾ.ಸಬಿತಾ ಬನ್ನಾಡಿ ಹೇಳಿದರು.
ನಗರದ ಜನ ಚಳುವಳಿ ಕೇಂದ್ರದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಬಂಡಾಯ ಸಾಹಿತ್ಯ ಸಂಘಟನೆಗೆ 44 ವಷÜರ್ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸ್ತ್ರೀ ಸಂವೇದನೆ ಮತ್ತು ಸ್ತ್ರೀ ವಾದ ವಿಚಾರ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ ಬದುಕಿನಿಂದ ಹೆಣ್ಣು ಅನ್ಯಳಾಗಿದ್ದಾಳೆ. ಹಾಗಾಗಿ ಹೆಣ್ಣಿನ ನೋಟದಲ್ಲಿ ಸಮಾಜ ಕಟ್ಟಬೇಕಿದೆ. ಸ್ತ್ರೀವಾದ ಬದಲಾಗುವುದಿಲ್ಲ ಎಂದು ಜಿದ್ದಿಗೆ ಬಿದ್ದಿಲ್ಲ, ಮಹಿಳೆಯರೇ ಎತ್ತಿದ ಪ್ರಶ್ನೆಗಳಿಂದ ರೂಪುಗೊಂಡಿದ್ದು ಸ್ತ್ರೀ ವಾದ. ಸಿದ್ಧಾಂತ ಗೊತ್ತಿದ್ದರೆ ಸಾಲದು ಅದನ್ನು ಜೀವಿಸಬೇಕು. ಮಹಿಳಾ ಸ್ಥಿತಿಗತಿ ತಿಳಿದು ಶೋಧಿಸಿ, ತಾರತಮ್ಯ ಗುರುತಿಸಿ ಅವರ ಸಬಲೀಕರಣ ಮಾಡಬೇಕು. ಮಹಿಳೆಯರ ನೋಟವನ್ನು ಲೋಕದ ನೋಟವಾಗಿ ರೂಪಿಸಬೇಕು. ಮಹಿಳಾ ಲೋಕ ದೃಷ್ಟಿಯಿಂದ ಸಮಾಜದಲ್ಲಿ ಮಿಳಿತಗೊಳಿಸಬೇಕು. ಅಧಿಕಾರ ಸ್ಥಾನದಲ್ಲಿ ಕೂರುವುದು ಹೆಣ್ಣಿಗೆ ಬಿಡುಗಡೆಯ ದಾರಿಗಳಲ್ಲ. ಪ್ರತಿನಿಧಿತ್ವ ಅಷ್ಟೇ. ಗಂಡಿನ ಜಾಗದಲ್ಲಿ ಹೆಣ್ಣು ಕುಳಿತರೆ ಬದಲಾವಣೆ ಆಗಲ್ಲ ಎಂದು ತಿಳಿಸಿದರು.
ಪ್ರಾಧ್ಯಾಪಕಿ ಭಾರತಿದೇವಿ ಮಾತನಾಡಿ, ಮಹಿಳೆಯನ್ನು ಪೋಷಣೆಯ ನೆಲೆಯಲ್ಲಿ ನೋಡಲಾಗಿದೆ. ಭೋಗದ ವರ್ಣನೆಯಿಂದ ಮಹಿಳೆ ಅಲಂಕಾರಿಕ ವಸ್ತುವಾಗಿ ಚಿತ್ರಿತವಾಗಿದೆ. ಹೆಣ್ಣಿನ ದೇಹವನ್ನು ಜೀವವಾಗಿ ನೋಡುವ ಬಗ್ಗೆ ಯಶೋಧರ ಚರಿತೆಯಲ್ಲಿ ಗುರುತಿಸಲಾಗಿದೆ. ಹೆಣ್ಣಿನ ಬಗ್ಗೆ ಖಚಿತ ತಿಳುವಳಿಕೆ ಇರಲಿಲ್ಲ. ವಿಜಯಾ ದಬ್ಬೆ, ಎನ್. ಗಾಯತ್ರಿ, ಸುಮಿತ್ರಾ ಅವರು ಗುರುತಿಸಿದ್ದಾರೆ. ಜಾತಿವಾದ, ಕೋಮುವಾದ ತನ್ನೊಳಗೆ ಪುರುಷ ಪ್ರಧಾನ ಕ್ರೌರ್ಯ ಇಟ್ಟುಕೊಂಡಿದೆ ಎಂದರು.
ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕ ಡಾ.ನಾಗಭೂಷಣ ಬಗ್ಗನಡು ಮಾತನಾಡಿ, ಬಂಡಾಯ ಸಾಹಿತ್ಯ ಸಂಘಟನೆ ಕನ್ನಡ ಸಾಹಿತ್ಯದ ದಿಕ್ಕನ್ನೇ ಬದಲಿಸಿದ್ದು ಇತಿಹಾಸ. ಚಾರಿತ್ರಿಕ ಸಂಗತಿಯಿಂದ ರೂಪುಗೊಂಡು ಸಾಹಿತ್ಯ ಖಡ್ಗವು ಆಗಬೇಕು, ನೋವಿಗೆ ಮಿಡಿಯಬೇಕು ಎಂಬ ಧೋರಣೆ ಹೊಂದಿತ್ತು. ತುರ್ತು ಪರಿಸ್ಥಿತಿ, ಬಸವಲಿಂಗಪ್ಪನವರ ಬೂಸಾ ಚಳುವಳಿ, ಈ ಚಾರಿತ್ರಿಕ ಘಟನೆಗಳು ಸಮಾಜದಲ್ಲಿ ಸಾಂಪ್ರಾದಾಯಿಕ ಚಿಂತನೆಗಳನ್ನು ಪಲ್ಲಟ ಮಾಡಿದವು. 70ರ ದಶಕದಲ್ಲಿ ಚಾರಿತ್ರಿಕ ವಿದ್ರೋಹ ಅರಿವಿಗೆ ಬಂತು. ನವ್ಯದಲ್ಲಿ ತೇಜಸ್ವಿ ಮುಖ್ಯವಾಗುತ್ತಾರೆ. ಅವರು ಬರೆದ ಹೊಸದಿಗಂತದೆಡೆಗೆ, ಅಕ್ಷರ ಪತ್ರಿಕೆಗೆ ಬರಗೂರು ಬರೆದ ಲೇಖನ ಇತ್ತೀಚಿನ ಸಣ್ಣ ಕಥೆಗಳು ಒಂದು ನೋಟ ಈ ಎರಡು ಘಟನೆಗಳು ಸಾಹಿತ್ಯದ ಹೊರಳಿವಿಕೆಗೆ ಸಾಕ್ಷಿಯಾಯಿತು. ಸಾಹಿತ್ಯದ ಅರ್ಥದ ಪರಿಭಾಷೆಯನ್ನೇ ಬದಲಿಸಿದ ಕೀರ್ತಿ ದಲಿತ ಸಾಹಿತ್ಯಕ್ಕೆ ಸಲ್ಲುತ್ತದೆ. ಮಹಿಳಾ ಸಾಹಿತ್ಯ ಸಾಮಾಜಿಕ ಸಂಕಟಗಳಿಗೆ ಮುಖಾಮುಖಿಯಾಗುತ್ತಿದೆ. ಸಾಹಿತ್ಯ ಸಂವೇದನೆಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕದ ಸಂಚಾಲಕ ಓ.ನಾಗರಾಜು, ಕಸಾಪ ಮಾಜಿ ಅಧ್ಯಕ್ಷೆ ಬಾ.ಹ.ರಾಮಕುಮಾರಿ , ಲೇಖಕರಿಯಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಇನ್ನಿತರ ಹಾಜರಿದ್ದರು.
‘ಮೌನದೊಳಗಿನ ಮಾತನ್ನು ಆಲಿಸಬೇಕು’
ಮಹಿಳೆಯರು ಉತ್ಪಾದನೆ, ಬೌದ್ಧಿಕ ಚಟುವಟಿಕೆ ಜೊತೆಗೆ ಸಮಾಜವಾದಿಗಳಾಗಬೇಕು. ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಇಟ್ಟುಕೊಳ್ಳಬೇಕು. ಅವರು ಸಂಘಟಿತರಾಗುವುದನ್ನು ತಡೆಯಲಾಗುತ್ತಿದೆ. ಸ್ತ್ರೀವಾದ ಹೆಣ್ಣಿನ ಕುರಿತು ಹಾಗೂ ಗಂಡಿನ ಬಗ್ಗೆಯೂ ಹೇಳುತ್ತದೆ. ಒಳಗಿನ ಶತ್ರುವನ್ನು ಗುರಿತಿಸಿದ್ದು ಆಫ್ರಿಕನ್ ಸ್ತ್ರೀ ವಾದ. ಕುಟುಂಬ ಸಮಾಜದಿಂದ ಭಿನ್ನವಲ್ಲ. ಅಧಿಕಾರವನ್ನು ಸೃಜನಾತ್ಮಕವಾಗಿ ನಡೆಸಬೇಕು. ಮುಂದಾಳುತನ ಬರಬೇಕು. ಹೆಣ್ಣು ಮತ್ತು ಗಂಡಿಗೆ ಪ್ರತ್ಯೇಕತೆ ಮಾತು ಬರುವುದಿಲ್ಲ. ಎಲ್ಲಾ ಚಿಂತನೆಗಳಿಗೆ ಸಮಾನ ಮೌಲ್ಯ ಬೇಕು. ಅಧಿಕಾರಕ್ಕೆ ರಾಜಿ, ಯೂಟರ್ನ್ ಕಾಲ ಆರಂಭವಾಗಿದೆ. ಭೋಗ ಪ್ರಧಾನ ಮತ್ತು ಸ್ಪರ್ಧೆಯ ನಡುವೆ ಗಂ