ಗದಗ: ಕಾಡಿನಲ್ಲಿ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ; ಇಂಗು ಗುಂಡಿ ನಿರ್ಮಿಸಿ ಪರಿಸರ ಕಾಳಜಿ ತೋರಿದ ಕಾಲೇಜ್ ಹುಡುಗ್ರು..!

By Girish Goudar  |  First Published Nov 25, 2023, 7:17 AM IST

ಮೂರು ದಿನಗಳ ವಿಶೇಷ ಶಿಬಿರ ಹಮ್ಮಿಕೊಂಡಿದ್ದ ಎನ್ಎಸ್ಎಸ್ ತಂಡ, ಕಪ್ಪತ ಗುಡ್ಡದ ವ್ಯಾಪ್ತಿಯ ನಂದೀವೇರಿ ಮಠದ ಬಂಗಾರದ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಿದ್ದಾರೆ.. 25 ಸದಸ್ಯರ ಎನ್ ಎಸ್ ಎಸ್ ತಂಡ ಮೂರು ದಿನಗಳ ಕಾಲ ಶ್ರಮದಾನ ಮಾಡುವ ಮೂಲಕ 2 ಇಂಗು ಗುಂಡಿ, 2 ಚೆಕ್ ಡ್ಯಾಂ ನಿರ್ಮಿಸಿದ್ದಾರೆ. 


ಗದಗ(ನ.25):  ಉತ್ತರ ಕರ್ನಾಟಕದ ಸಹ್ಯಾದ್ರಿ ಅಂತಾನೆ ಕರೆಯಲ್ಪಡುವ ಕಪ್ಪತ್ತ ಗುಡ್ಡದಲ್ಲಿ ಗದಗ ಆದರ್ಶ ಶಿಕ್ಷಣ ಸಮಿತಿ ಕಾಲೇಜಿನ ಎನ್ಎಸ್ಎಸ್ ಹುಡುಗ್ರು ಚೆಕ್ ಡ್ಯಾಂ, ಇಂಗು ಗುಂಡಿಗಳನ್ನ ನಿರ್ಮಿಸುವ ಮೂಲಕ ಪರಿಸರ ಕಾಳಜಿ ತೋರಿದ್ದಾರೆ. ಮೂರು ದಿನಗಳ ವಿಶೇಷ ಶಿಬಿರ ಹಮ್ಮಿಕೊಂಡಿದ್ದ ಎನ್ಎಸ್ಎಸ್ ತಂಡ, ಕಪ್ಪತ ಗುಡ್ಡದ ವ್ಯಾಪ್ತಿಯ ನಂದೀವೇರಿ ಮಠದ ಬಂಗಾರದ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಿದ್ದಾರೆ.. 25 ಸದಸ್ಯರ ಎನ್ ಎಸ್ ಎಸ್ ತಂಡ ಮೂರು ದಿನಗಳ ಕಾಲ ಶ್ರಮದಾನ ಮಾಡುವ ಮೂಲಕ 2 ಇಂಗು ಗುಂಡಿ, 2 ಚೆಕ್ ಡ್ಯಾಂ ನಿರ್ಮಿಸಿದ್ದಾರೆ.. 

ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು ನೀರಿಗಾಗಿ ಪ್ರಾಣಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.. ಹೋಗಾಗಿ ಚೆಕ್ ಡ್ಯಾಂ ನಿರ್ಮಾಣ ಮಾಡೋದ್ರಿಂದ ಕಾಡಿನಲ್ಲಿ ನೀರು ನಿಲ್ಲಿಸುವ ಕೆಲಸ ಮಾಡ್ಬಹುದು ಅನ್ನೋದು ವಿದ್ಯಾರ್ಥಿಗಳ ಆಶಯ.. ಜೊತೆಗೆ ಅಂತರ್ಜಲ ಹೆಚ್ಚಳಕ್ಕೂ ಚೆಕ್ ಡ್ಯಾಂ ಹಾಗೂ ಇಂಗು ಗುಂಡಿ ಸಹಾಯವಾಗಲಿದೆ.

Latest Videos

undefined

ಬ್ಯಾಂಕ್ ಮ್ಯಾನೇಜರ್ ದೋಖಾ..ರೈತನಿಗೆ ಸಂಕಷ್ಟ: ಏಷ್ಯಾನೆಟ್‌ ಸುವರ್ಣನ್ಯೂಸ್ ವರದಿಯಿಂದ ಸಮಸ್ಯೆ ಇತ್ಯರ್ಥ

ಪ್ರತಿ ತಿಂಗಳು ಎನ್ಎಸ್ಎಸ್ ವಿದ್ಯಾರ್ಥಿಗಳು ಶ್ರಮದಾನ ಮಾಡ್ತಾರೆ.. ಕಾಲೇಜು ಆವರಣ ಸುತ್ತಲು, ಬಸ್ ಸ್ಟ್ಯಾಂಡ್, ಸಾರ್ವಜನಿಕ ಸ್ಥಳಗಳನ್ನ ಸ್ವಚ್ಛತೆ ಮಾಡುವ ಮೂಲಕ ಎನ್ ಎಸ್ ಎಸ್ ಶಿಬಿರ ಆಯೋಜಿಸಲಾಗ್ತಿತ್ತು.. ಆದ್ರೆ ಈ ಬಾರಿ ಡಿಫರೆಂಟಾಗಿ ಏನಾದ್ರೂ ಮಾಡ್ಬೇಕು ಅಂತಾ ಯೋಚನೆ ಮಾಡಿದ್ದ ಎಸ್ ಎಸ್ ಅಧಿಕಾರಿ ಪ್ರೊ. ಬಿ ಪಿ ಜೈನರ್, ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಚೆಕ್ ಡ್ಯಾಂ ನಿರ್ಮಾಣದಂಥ ವಿನೂತನ ಯೋಜನೆ ರೂಪಿಸಿದ್ರು...

ಚೆಕ್ ಡ್ಯಾಂ ನಿರ್ಮಾಣಕ್ಕೆ ತಗುಲಿದ ವ್ಯಚ್ಚವನ್ನ ಎನ್ ಎಸ್ಎಸ್ ಫಂಡ್ ನಿಂದ ನಿಬಾಯಿಸಲಾಗಿದೆ.. ವಿದ್ಯಾರ್ಥಿಗಳ ಉತ್ಸಾಹದಿಂದ ಶಿಬಿರದಲ್ಲಿ ಪಾಲ್ಗೊಂಡಿದ್ದು, ವಿದ್ಯಾರ್ಥಿಗಳು ಪರಿಸರ ಕಾಳಜಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

click me!