3-4 ದಿನದಿಂದ ಗರಿಷ್ಠ 28-30, ಕನಿಷ್ಠ 18ರಿಂದ 17 ಡಿಗ್ರಿ ಸೆಲ್ಸಿಯಸ್ ದಾಖಲು| ಬೆಂಗಳೂರಲ್ಲಿ ಕೊರೆಯುವ ಚಳಿ ಉಂಟಾಗಿದೆ. ಇದೇ ವಾತಾವರಣ ಡಿ.21ರವರೆಗೂ ಮುಂದುವರಿಯುವ ನಿರೀಕ್ಷೆ| ಉತ್ತರ ಒಳನಾಡಿನಲ್ಲಿ ಮಹಾರಾಷ್ಟ್ರದಿಂದ ಗಾಳಿ ಬೀಸಿದರೆ ರಾಜ್ಯಾದ್ಯಂತ ಚಳಿ ಹೆಚ್ಚಾಗುವ ಸಂಭವ|
ಬೆಂಗಳೂರು(ಡಿ.19): ಮೋಡಗಳು ಇಲ್ಲದೇ ಇರುವುದರಿಂದ ಡಿ.21ರವರೆಗೆ ನಗರದಲ್ಲಿ ನಿರಂತರವಾಗಿ ಚಳಿ ಹೆಚ್ಚಾಗುವ ಸಾಧ್ಯತೆ ಇದೆ.
ನಗರದಲ್ಲಿ ಕೆಲವು ದಿನಗಳಿಂದ ಕಡಿಮೆ ತಾಪಮಾನ ದಾಖಲಾಗುತ್ತಿದೆ. 3-4 ದಿನದಿಂದ ಗರಿಷ್ಠ 28-30, ಕನಿಷ್ಠ 18ರಿಂದ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದರಿಂದ ನಗರದಲ್ಲಿ ಕೊರೆಯುವ ಚಳಿ ಉಂಟಾಗಿದೆ. ಇದೇ ವಾತಾವರಣ ಡಿ.21ರವರೆಗೂ ಮುಂದುವರಿಯುವ ನಿರೀಕ್ಷೆ ಇದೆ.
undefined
ಬಿಸಿಲು ಕಾಯುತ್ತಿಲ್ಲ, ಬಿಸಿ ಕಾಫಿಯೂ ತಟ್ಟುತ್ತಿಲ್ಲ; ಚಳಿಗೆ ನಡುಗುತ್ತಿದೆ ನವದೆಹಲಿ!
ಡಿ.18ರಂದು ಗರಿಷ್ಠ 28 ಹಾಗೂ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದರ ಪ್ರಮಾಣ ಡಿ.19ರಂದು ತುಸು ಇಳಿಕೆಯಾಗಲಿದ್ದು ಗರಿಷ್ಠ 27, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ನಂತರ ತಾಪಮಾನದ ಕನಿಷ್ಠ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿ ಕೊರೆಯುವ ಚಳಿ ಸೃಷ್ಟಿಯಾಗಲಿದೆ. ಡಿ.20, ಡಿ.21ರಂದು ಕನಿಷ್ಠ ತಾಪಮಾನ 15 ಡಿ.ಸೆ, ಗರಿಷ್ಠ 28 ಡಿ.ಸೆ. ದಾಖಲಾಗಬಹುದು. ಉತ್ತರ ಒಳನಾಡಿನಲ್ಲಿ ಮಹಾರಾಷ್ಟ್ರದಿಂದ ಗಾಳಿ ಬೀಸಿದರೆ ರಾಜ್ಯಾದ್ಯಂತ ಚಳಿ ಹೆಚ್ಚಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.