ಅನರ್ಹ ಶಾಸಕಗೆ KR ಪುರಂ BJP ಟಿಕೆಟ್ ಪಕ್ಕಾ ?

By Kannadaprabha NewsFirst Published Sep 9, 2019, 1:22 PM IST
Highlights

ರಾಜ್ಯದಲ್ಲಿ ಶೀಘ್ರ ಉಪ ಚುನಾವಣೆ ನಡೆಯಲಿದ್ದು, ಈಗಾಗಲೇ ವಿವಿಧ ಪಕ್ಷಗಳು ಚುನಾವಣಾ ಸಿದ್ಧತೆಯಲ್ಲಿ ತೊಡಗಿವೆ. ಅಲ್ಲದೇ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಈಗಾಗಲೇ ಚರ್ಚೆ ಆರಂಭವಾಗಿದೆ. 

ಮಾಲೂರು [ಸೆ.09]:  ಜಿಲ್ಲೆಯಲ್ಲಿ ಬಿಜೆಪಿ ಶಕ್ತಿಯುತವಾಗಿ ಬೆಳೆಯುತ್ತಿದ್ದು, ಅದರಲ್ಲೂ ಮಾಲೂರು ತಾಲೂಕಿನಲ್ಲಿ ಸಂಘಟನೆ ಉತ್ತಮವಾಗಿದೆ ಎಂದು ಬಿಜೆಪಿ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಶಾಸಕ ನಂದೀಶ್‌ ರೆಡ್ಡಿ ಹೇಳಿದರು.

ಪಟ್ಟಣದ ಪದ್ಮಾವತಿ ಸಂಕೀರ್ಣದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದ್ದು ,ಪ್ರತಿ ಬೂತ್‌ ಮಟ್ಟದಲ್ಲಿ ಇಬ್ಬರು ಸಕ್ರಿಯ ಕಾರ‍್ಯಕರ್ತರನ್ನು ನೇಮಕ ಮಾಡಿ ಪಕ್ಷವನ್ನು ಸಂಘಟಿಸಲಾಗುತ್ತಿದೆ. ಈ ತಿಂಗಳ 13 ರೊಳಗೆ ಇನ್ನೂ ಐದು ಸಾವಿರ ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದೆ ಎಂದರು.

28 ಸಾವಿರ ಸದ​ಸ್ಯ​ತ್ವ 

ಸದಸ್ಯತ್ವ ಅಭಿಯಾನದ ತಾಲೂಕು ಸಂಚಾಲಕ ಪುರ ನಾರಾಯಣಸ್ವಾಮಿ ಮಾತನಾಡಿ ಪಕ್ಷದ ಸದಸ್ಯತ್ವ ಕ್ಕಾಗಿ ಎಲ್ಲ ಕಾರ‍್ಯಕರ್ತರ ,ಮುಖಂಡರ ಸಹಕಾರದಲ್ಲಿ ತಾಲೂಕಿನಾದ್ಯಂತ ಸಂಚರಿಸಿ ಈಗಾಗಲೇ 28 ಸಾವಿರ ದಾಖಲೆಯ ಸದಸ್ಯತ್ವ ಮಾಡಲಾಗಿದೆ ಎಂದ ಪುರ ನಾರಾಯಣಸ್ವಾಮಿ ಅವರು ಉಳಿದೆ ಒಂದು ವಾರದಲ್ಲಿ ನೀಡಿರುವ ಗುರಿಯನ್ನು ಮೀರಿ ಸದಸ್ಯರನ್ನು ನೋಂದಾಯಿಸಿಕೊಳ್ಳಲಿದ್ದೇವೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆರ್‌.ಪ್ರಭಾಕರ್‌, ಮಾಜಿ ಶಾಸಕ ಎ.ನಾಗರಾಜ್‌, ರಾಜ್ಯ ಯುವ ಬಿಜೆಪಿ ಉಪಾಧ್ಯಕ್ಷ ಹರೀಶ್‌ ಗೌಡ, ಪುರಸಭೆ ಸದಸ್ಯ ವೇಮನ, ಕುಟ್ಟಿಮುನಿರಾಜು, ಭಾನುತೇಜಾ, ತಾಲೂಕು ಅಧ್ಯಕ ಬಿ.ಅರ್‌.ವೆಂಕಟೇಶ್‌, ಕೃಷ್ಣಾ ರೆಡ್ಡಿ, ಬಾಬು ರೆಡ್ಡಿ ಮತ್ತಿ​ತ​ರ​ರು ಇದ್ದರು.

ನಿಮ್ಮ ಜಿಲ್ಲೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭೈರತಿಗೆ ಬಿಜೆಪಿಗೆ ಬರಲು ಅಡ್ಡಿ ಇಲ್ಲ

ಕಾರ‍್ಯಕ್ರಮದ ನಂತರ ಪತ್ರಕರ್ತರೂಡನೆ ಮಾತನಾಡಿ, ಬಿಜೆಪಿ ಪಕ್ಷದ ತತ್ವ-ಸಿದ್ಧಾಂತಗಳನ್ನು ಒಪ್ಪಿ ಬರುವ ಯಾರಿಗೆ ಆಗಲಿ ಪಕ್ಷಕ್ಕೆ ಸ್ವಾಗತ ಇರುತ್ತದೆ ಎಂದ ಕೆ.ಆರ್‌.ಪುರಂ ಮಾಜಿ ಶಾಸಕ ನಂದೀಶ್‌ ಗೌಡ ಅವರು ಇದರಲ್ಲಿ ಅರ್ನಹ ಶಾಸಕ ಭೈರತಿ ಬಸವರಾಜು ಆಗಲಿ ಬೇರೆ ಯಾರ ಆಗಲಿ ಪಕ್ಷದ ಹೈಕಮಾಂಡ್‌ ಒಪ್ಪಿದ ಮೇಲೆ ನನ್ನ ಸಮ್ಮತಿ ಅವಶ್ಯ ಇಲ್ಲ. ಸಂತೋಷವಾಗಿ ಕ್ಷೇತ್ರ ಬಿಟ್ಟುಕೂಡುವೆ ಎಂದರು.

click me!