ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಸಿದ್ದ ತಿಪಟೂರು ಕೊಬ್ಬರಿ ಬೆಲೆ ಕಳೆದ 2 ವರ್ಷಗಳಿಂದ 8,000 ರು.ಗೆ ಕುಸಿದಿತ್ತು. ಆದರೆ ಇತ್ತೀಚಿನ 2 ತಿಂಗಳಿನಿಂದ ನಿಧಾನವಾಗಿ ಚೇತರಿಕೆ ಕಂಡು ಹರಾಜಿನಲ್ಲಿ ಕ್ವಿಂಟಾಲ್‌ಗೆ 12222 ರು. ದಾಟಿದೆ.
ತಿಪಟೂರು (ಆ.23): ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಸಿದ್ದ ತಿಪಟೂರು ಕೊಬ್ಬರಿ ಬೆಲೆ ಕಳೆದ 2 ವರ್ಷಗಳಿಂದ 8,000 ರು.ಗೆ ಕುಸಿದಿತ್ತು. ಆದರೆ ಇತ್ತೀಚಿನ 2 ತಿಂಗಳಿನಿಂದ ನಿಧಾನವಾಗಿ ಚೇತರಿಕೆ ಕಂಡು ಹರಾಜಿನಲ್ಲಿ ಕ್ವಿಂಟಾಲ್‌ಗೆ 12222 ರು. ದಾಟಿದೆ. ಇಲ್ಲಿನ ಕೊಬ್ಬರಿ ಮಾರುಕಟ್ಟೆಯಲ್ಲಿ 2021-22ರಲ್ಲಿ ಕ್ವಿಂಟಾಲ್ ಕೊಬ್ಬರಿ ಗರಿಷ್ಟ 18000 ರು. ದಾಖಲಿಸಿತ್ತು. ತದನಂತರ 2022-23ರ ಮಾರ್ಚ್‌ನಲ್ಲಿ ಕೊಬ್ಬರಿ ಬೆಲೆ ತೀವ್ರ ಇಳಿಕೆ ಕಂಡು ಕ್ವಿಂಟಾಲ್‌ಗೆ 8000- 9000 ರು. ಇತ್ತು. 2023 ಏಪ್ರಿಲ್ ನಂತರ ತೀವ್ರ ಇಳಿಕೆ ಕಂಡು ಕೇವಲ 8000 ರು.ಗೆ ಕುಸಿದಿತ್ತು.
2024ರ ಜುಲೈವರೆಗೂ 8000 ರು. ಆಸುಪಾಸಿನಲ್ಲೇ ಇದ್ದ ಬೆಲೆ ಆಗಸ್ಟ್ ಮೊದಲ ವಾರದಿಂದ 9000 ರು. ಆಸುಪಾಸಿಗೆ ಬಂದು ನಿಧಾನವಾಗಿ ಏರುತ್ತ ಸಾಗಿ ಗರಿಷ್ಟ 12222 ರು. ಬೆಲೆ ದಾಖಲಿಸಿ,12500 ರು.ವರೆಗೂ ಮಾರಾಟವಾಗಿದೆ. ಕಳೆದ 2 ವರ್ಷಗಳಿಂದ ಕೊಬ್ಬರಿ ಬೆಲೆ ತೀವ್ರ ಕುಸಿತ ಕಂಡಿದ್ದರಿಂದ ಜಿಲ್ಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಕೊಬ್ಬರಿ ಬೆಲೆ ಹೆಚ್ಚು ಮಾಡುವಂತೆ ಸಾಕಷ್ಟು ಹೋರಾಟ ಹಾಗೂ ಬಂದ್ ಸಹ ಆಚರಿಸಲಾಗಿತ್ತು. ಅಲ್ಲದೆ ತಿಪಟೂರಿನಲ್ಲಿ ಒಂದು ತಿಂಗಳು ರೈತರಿಂದ ನಿರಂತರ ಧರಣಿ ಸಹ ನಡೆದಿತ್ತು.
undefined
ನಂತರ ಹೋರಾಟಗಳ ಫಲವಾಗಿ ಕೇಂದ್ರ ಸರ್ಕಾರ ಕ್ವಿಂಟಾಲ್ ಕೊಬ್ಬರಿಗೆ 12000 ರು. ಬೆಂಬಲ ಬೆಲೆ ಘೋಷಿಸಿ ನ್ಯಾಫೆಡ್ ಮೂಲಕ ರೈತರಿಂದ ಕೊಬ್ಬರಿ ಕೊಳ್ಳುವ ವ್ಯವಸ್ಥೆ ಮಾಡಿತು. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಕ್ವಿಂಟಾಲ್ ಕೊಬ್ಬರಿಗೆ 1500 ರು. ಪ್ರೋತ್ಸಾಹ ಬೆಲೆ ನೀಡುವ ಮೂಲಕ ಕ್ವಿಂಟಾಲ್‌ಗೆ 13,500 ರು.ಗೆ ನೋಂದಣಿ ಮಾಡಿಸಿಕೊಂಡಿದ್ದ ಕೆಲವೇ ರೈತರು ಮಾತ್ರ ಮಾರಾಟ ಮಾಡಿದ್ದು ಹೆಚ್ಚಿನ ರೈತರು ಕೊಬ್ಬರಿ ಮಾರಾಟ ಮಾಡಲಾಗಿರಲಿಲ್ಲ. ಮುಂದಿನ ಕೆಲವೇ ವಾರಗಳಲ್ಲಿ ಕೊಬ್ಬರಿ ಕ್ವಿಂಟಾಲ್‌ಗೆ 15,000 ರು. ಗಡಿ ದಾಟಬಹುದೆಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.
'ಇಷ್ಟರಲ್ಲೇ ಮದುವೆ ಆಗ್ತೀನಿ': ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಕೊಟ್ಟ ನಟ ಡಾಲಿ ಧನಂಜಯ್!
ಕಳೆದ ವರ್ಷದ ಬರಗಾಲ ಹಾಗೂ ತೆಂಗಿನ ಕಾಯಿಗಳ ಇಳುವರಿ ಕೊರತೆಯಿಂದ ಮಾರುಕಟ್ಟೆಗೆ ಕೊಬ್ಬರಿ ಅವಕ ಕಡಿಮೆಯಾಗಿರುವುದೂ ಸಹ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಲಿದೆ. ಇತ್ತೀಚೆಗೆ ಸಾಕಷ್ಟು ರೈತರು ಎಳನೀರನ್ನೇ ಉತ್ತಮ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದಲೂ ರೈತರ ಬಳಿ ಕೊಬ್ಬರಿ ದಾಸ್ತಾನು ಕೊರತೆ ಕಂಡು ಬರುತ್ತಿದೆ. ತಿಪಟೂರು ಮಾರುಕಟ್ಟೆಯ ಸಿಹಿ ಕೊಬ್ಬರಿ ಉತ್ತರ ಭಾರತದಲ್ಲಿ ಶ್ರಾವಣ ಮಾಸದಿಂದ ಪ್ರಾರಂಭವಾಗಿ, ದೀಪಾವಳಿವರೆಗೂ ಆಚರಿಸುವ ಎಲ್ಲ ಹಬ್ಬಗಳಿಗೂ ಹೆಚ್ಚು ಬೇಡಿಕೆ ಇರುತ್ತದೆ. ಹೀಗೆ ನಾನಾ ಕಾರಣಗಳಿಂದ ಮುಂದಿನ ದಿನಗಳಲ್ಲಿ ಇಲ್ಲಿನ ಸಿಹಿ ಕೊಬ್ಬರಿಗೆ ರೈತರು ಹಾಗೂ ವರ್ತಕರ ನಿರೀಕ್ಷೆ ಮೀರಿ ಬೆಲೆ ಬರುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿದೆ.