ವಿರಕ್ತಮಠ, ಶಿವಾನಂದಪ್ಪಗೆ 'ಸಿಎನ್ಆರ್ ರಾವ್ ಜೀವಮಾನ ಸಾಧನೆ' ಪ್ರಶಸ್ತಿ

Published : Aug 02, 2022, 02:54 PM IST
ವಿರಕ್ತಮಠ, ಶಿವಾನಂದಪ್ಪಗೆ 'ಸಿಎನ್ಆರ್ ರಾವ್ ಜೀವಮಾನ ಸಾಧನೆ' ಪ್ರಶಸ್ತಿ

ಸಾರಾಂಶ

ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ತಜ್ಞರಿಗೆ ಅಕಾಡೆಮಿ ಪ್ರಶಸ್ತಿ ಹಾಗೂ ಫೆಲೋಶಿಪ್ಗ ಳನ್ನು ಐಟಿ- ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ ಅವರು ಮಂಗಳವಾರ ಪ್ರದಾನ‌ ಮಾಡಿದರು.

ಬೆಂಗಳೂರು (ಆ.2) ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಡಾ.ಸಿ.ಎ.ವಿರಕ್ತ ಮಠ ಮತ್ತು ಡಾ. ಬಿ ಶಿವಾನಂದಪ್ಪ ಅವರಿಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 2022ನೇ ಸಾಲಿನ ಸಿ.ಎನ್.ಆರ್. ರಾವ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಮಂಗಳವಾರ ಇಲ್ಲಿ ಪ್ರದಾನ ಮಾಡಲಾಯಿತು.  ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ(Karnataka Science and Technology Academy) ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ತಜ್ಞರಿಗೆ ಅಕಾಡೆಮಿ ಪ್ರಶಸ್ತಿ(Academy award) ಹಾಗೂ ಫೆಲೋಶಿಪ್(Fellowship) ಗಳನ್ನು ಐಟಿ- ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ (ITBT Department, Karnataka)ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ(Dr.C.N.Ashwath Narayan) ಅವರು ಮಂಗಳವಾರ ಪ್ರದಾನ‌ ಮಾಡಿದರು.

ಪ್ರೊ.ಕೆ ವಿ ರಾವ್(Pro.K.V.Rao) ಮತ್ತು ಡಾ. ನಾ ಸೋಮೇಶ್ವರ(Dr.Na.Someshwar) ಅವರಿಗೆ ಅಕಾಡೆಮಿ ವತಿಯಿಂದ ವಿಜ್ಞಾನ ಸಂವಹನೆಗಾಗಿ ಕೊಡ ಮಾಡುವ ಜೀವಮಾನ ಪುರಸ್ಕಾರಗಳನ್ನೂ ಕೊಡಲಾಯಿತು.

ಐಐಟಿಗಳ ರೀತಿ ಕರ್ನಾಟಕದಲ್ಲಿ ಕೆಐಟಿ ಸ್ಥಾಪನೆ: ಸಚಿವ ಅಶ್ವತ್ಥ್‌

ನಂತರ ಮಾತನಾಡಿದ ಸಚಿವರು ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ತೊಡಗಿಕೊಂಡಿರುವವರು ಸಮಾಜದ ವಾಸ್ತವ ಪರಿಸ್ಥಿತಿಗಳನ್ನು ಆದರಿಸಿ ಸಂಶೋಧನೆ ಮಾಡಿದರೆ ಅದರಿಂದ ಸಮುದಾಯಗಳ ಸಬಲೀಕರಣ ಸುಗಮವಾಗುತ್ತದೆ ಎಂದು ಅಭಿಪ್ರಾಯಪಟ್ಟರು

ಕರ್ನಾಟಕ ರಾಜ್ಯವು ಸಂಶೋಧನೆ ಮತ್ತು ನಾವಿನ್ಯತೆಯಲ್ಲಿ ಇಡೀ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ. ಇದನ್ನು ಬೇರೆ ರಾಜ್ಯಗಳಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಸಂಶೋಧನೆ ಮತ್ತು ನಾವಿನ್ಯತೆಗೆ ಸರ್ಕಾರವು ಸಾಕಷ್ಟು ಉತ್ತೇಜನ ಕೊಡುತ್ತಿದೆ ಎಂದು ಅವರು ಹೇಳಿದರು

ರಾಜ್ಯವು ನವೋದ್ಯಮ ವಲಯದಲ್ಲೂ ಕೂಡ ಭಾರತಕ್ಕೆ ನಂಬರ್ ಒನ್ ಆಗಿದ್ದು ಈ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಇದಕ್ಕಾಗಿ ಸರ್ಕಾರವು ವಿಜ್ಞಾನಿಗಳ ತಂತ್ರಜ್ಞಾನಿಗಳ ಮತ್ತು ಹೂಡಿಕೆದಾರರ ಸಹಕಾರವನ್ನು ಬಯಸುತ್ತದೆ ಎಂದು ಅವರು ಆಶಿಸಿದರು.

ಜಿಲ್ಲೆಗೊಂದು 'ಸೂಪರ್‌ 30' ಎಂಜಿನಿಯರಿಂಗ್‌ ಕಾಲೇಜು: ಅಶ್ವತ್ಥ ನಾರಾಯಣ

ಪ್ರಯೋಗಾಲಯಗಳಲ್ಲಿ ಸಿದ್ಧವಾಗುವ ವಿಜ್ಞಾನದ ಫಲಿತಗಳು ತಂತ್ರಜ್ಞಾನದ ಮೂಲಕ ಜನರನ್ನು ತಲುಪುತ್ತವೆ. ಇವು ಸಮುದಾಯಗಳ ಕೈಗೆ ಅಂತಿದ್ದರೆ ಕೆಟಕುವಂತೆ ಇದ್ದರೆ ಮಾತ್ರ ಸಂಶೋಧನೆಗಳಿಗೆ ಬೆಲೆ ಬರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷ ಡಾ. ಎಸ್ ಅಯ್ಯಪ್ಪನ್, ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಡಾ. ಎ ಕೆ ಸೂದ್, ವಿಜ್ಞಾನ ಮತ್ತು ತಂತ್ರಜ್ಞಾನ ಸೊಸೈಟಿ ನಿರ್ದೇಶಕ ಕೆ ಬಿ ಬಸವರಾಜು ಮುಂತಾದವರು ಉಪಸ್ಥಿತರಿದ್ದರು.

ಗೌರವ ಫೆಲೋಶಿಪ್ ಪಡೆದವರು:
ಸಿಎಲ್ಎಲ್ ಗೌಡ, ಡಿ ಜೆ ಭಾಗ್ಯರಾಜ್, ಸಿ ಎಸ್ ಪ್ರಸಾದ್, ಎಸ್ ಎಸ್ ಹೊನ್ನಪ್ಪಗೋಳ್, ಲಲಿತ ಆರ್ ಗೌಡ, ಕೆ ಎಂ ಶಂಕರ್, ಬಿ ತಿಮ್ಮೇಗೌಡ,  ಮನೋಹರ ಕುಲಕರ್ಣಿ, ಬಾಲಸುಬ್ರಮಣಿಯನ್, ಟಿ ವಿ ರಾಮಚಂದ್ರ, ಎಸ್ ವಿಶ್ವನಾಥ್, ನವಕಾಂತ್ ಭಟ್, ಎ ಆದಿಮೂರ್ತಿ, ಜಿ ಡಿ ವೀರಪ್ಪಗೌಡ, ಎ ವಿ ಕುರುಪದ್, ಆರ್ ಆರ್ ನವಲಗುಂದ, ಎ ಕೆ ಸೂದ್, ಎಸ್ ಪಿ ದಂಡಿನ್, ಆರ್ ಉಮಾಶಂಕರ್, ಎಚ್ ಸುದರ್ಶನ್,  ಹೆಚ್  ರಾಮಕೃಷ್ಣರಾವ್ ಮತ್ತು ಶ್ರೀದೇವಿ ಸಿಂಗ್.

ಫೆಲೋಶಿಪ್ ಪುರಸ್ಕೃತರು:
ಅಬ್ರಹಾಂ ವರ್ಗೀಸ್, ಕೆ ಎಂ ಇಂದಿರೇಶ, ಎನ್ ಕೆ ಎಸ್ ಗೌಡ, ಎಸ್ ಆರ್ ರಮೇಶ್, ಬಿ ರಂಗಸ್ವಾಮಿ, ಕೆ ವೆಂಕಟರಾಮನ್, ಎಚ್ ರೇವಣ್ಣ ಸಿದ್ದಪ್ಪ, ಎಸ್ ಜಿ ಶ್ರೀಕಂಠೇಶ್ವರ ಸ್ವಾಮಿ,  ಎಂ ಬಿ ರಜನಿ, ಎಂ ಜೆಡ್ ಸಿದ್ದಿಕಿ, ಕೆ ಎನ್ ಬಿ ಮೂರ್ತಿ, ಕೆ.ಎಂ ರೂಪಾ, ಎನ್ ಬಿ ನಡುವಿನಮನಿ, ಅರುಣ್ ಇನಾಮ್ದಾರ್,  ಸುಪರ್ಣ ರಾಯ್, ಜಿ ಜಗದೀಶ್, ಎಂ ಕೆ ರಬಿನಾಯ್,  ಕೆ ಎನ್ ಅಮೃತೇಶ್,  ರವಿಶಂಕರ್ ರೈ,  ಕೃಷ್ಣ ಇಸಲೂರು, ವಿಶಾಲ್ ರಾವ್, ವಿಜಯಲಕ್ಷ್ಮಿ ಡೇಗಾ ಮತ್ತು ಜಗದೀಶ್ ಆರ್ ತೋನಣ್ಣನವರ್.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ